ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಜನರು ತತ್ತರಿಸಿ ಹೋಗಿದ್ದರು. ಈ ಮಳೆ ಯಾವಾಗ ಬಿಡುವು ಕೊಡುತ್ತಪ್ಪ ಅನ್ನುತ್ತ ಕೇಳುತ್ತಿದ್ದರು. ಅದರಲ್ಲೂ ಈ ದೀಪಾವಳಿ ಹಬ್ಬದ ( Deepavali Festival ) ಆಚರಣೆಗಾದ್ರೂ ಬಿಡುವು ಕೊಡುತ್ತೋ ಇಲ್ಲವೋ ಎನ್ನುವ ಆತಂಕದಲ್ಲೂ ಜನತೆ ಇದ್ದರು. ಇಂತಹ ಜನತೆಗೆ ನೆಮ್ಮದಿಯ ಸುದ್ದಿ ಎನ್ನುವಂತೆ ಇನ್ನೂ 5 ದಿನ ಮಳೆ ಬಿಡುವು ಕೊಡಲಿದೆ ಎಂಬುದಾಗಿ ಹವಾಮಾನ ಇಲಾಖೆ ( Meteorological Department ) ಮುನ್ಸೂಚನೆ ನೀಡಿದೆ.
BIG NEWS: ಇಂದು ನಡೆಯಬೇಕಿದ್ದ ಚಿತ್ತಾಪುರ, ಅಳಂದದ ‘ಜನಸಂಕಲ್ಪ ಯಾತ್ರೆ’ ಮುಂದೂಡಿಕೆ – ಎನ್.ರವಿಕುಮಾರ್
ಈ ಕುರಿತಂತೆ ಹವಾಮಾನ ಇಲಾಖೆಯಿಂದ ಮಾಹಿತಿ ನೀಡಲಾಗಿದ್ದು, ರಾಜ್ಯದಲ್ಲಿ ಇಂದಿನಿಂದ ಐದು ದಿನ ಮಳೆಯ ಪ್ರಮಾಣ ಕಡಿಮೆಯಾಗಲಿದ್ದು, ದೀಪಾವಳಿ ಹಬ್ಬದ ಸಂಭ್ರಮಕ್ಕೆ ಯಾವುದೇ ಆತಂಕ ಇರುವುದಿಲ್ಲ ಎಂದು ತಿಳಿಸಿದೆ.
ಇನ್ನೂ ಇಂದಿನಿಂದ ಅಕ್ಟೋಬರ್ 25ರವರೆಗೆ ಕರಾವಳಿಯ ಜಿಲ್ಲೆಗಳಲ್ಲಿ ಹಗುರದಿಂದ ಕೂಡಿದಂತ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಇನ್ನುಳಿದಂತೆ ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿಯೂ ಸಾಧಾರಣ ಮಳೆಯಾಗಲಿದ್ದು, ಅಕ್ಟೋಬರ್ 24ರ ನಂತ್ರ ಯಾವುದೇ ಮಳೆಯ ಮುನ್ಸೂಚನೆ ಇರುವುದಿಲ್ಲ ಎಂದು ಹೇಳಿದೆ.
‘ಕುಕ್ಕೆ ಸುಬ್ರಹ್ಮಣ್ಯ’ಕ್ಕೆ ತೆರಳುವ ಭಕ್ತರ ಗಮನಕ್ಕೆ: ಅ.25ರಂದು ಯಾವುದೇ ಸೇವೆಯಿಲ್ಲ, ದೇವರ ದರ್ಶನಕ್ಕೆ ಮಾತ್ರ ಅವಕಾಶ