ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಗ್ರಾಮ ಪಂಚಾಯ್ತಿಗಳಲ್ಲಿ ( Gram Panchayat ) ಕಾರ್ಯ ನಿರ್ವಹಿಸುತ್ತಿರುವಂತ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳನ್ನು ( Panchayat Development Officer – PDO ) ಹಿರಿಯ ಪಂಚಾಯ್ತಿ ಅಭಿವೃದ್ದಿ ಅಧಿಕಾರಿ ಎಂದು ಉನ್ನತೀಕರಣ ಮಾಡಿದೆ. ಈ ಉನ್ನತೀಕರಣದಂತೆ ವೇತವನ್ನು ಹೆಚ್ಚಳ ( Salary Hike ) ಮಾಡಿ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ.
ಇಂದು ಪ್ರಧಾನಿ ಮೋದಿ ಉದ್ಘಾಟಿಸಿದ ‘ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-2’ ವಿಶೇಷತೆ ಇಲ್ಲಿದೆ
ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ( Rural Development and Panchayat Raj Department ) ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ನಡವಳಿಗಳನ್ನು ಹೊರಡಿಸಿದ್ದು, ಇಲಾಖೆಯ ಅಡಿಯಲ್ಲಿ ಮಂಜೂರಾಗಿರುವ 6021 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಎಂದು ಉನ್ನತೀಕರಣ ಮಾಡಲಾಗಿದೆ. ಅಲ್ಲದೇ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ ಎಂದಿದ್ದಾರೆ.
ಇನ್ನೂ ಪಿಡಿಓಗಳ ಉನ್ನತೀಕರಣ, ಪುನರ್ ಪದನಾಮೀಕರಿಸಿದ ನಂತ್ರ ವೇತನ ಶ್ರೇಣಿಯನ್ನು ರೂ.37,900 ರಿಂದ 70,850 ಇದ್ದದ್ದನ್ನು ಗ್ರೂಪ್ ಸಿ ವೃಂದದ 1500 ಪಿಡಿಓಗಳಿಗೆ ತಕ್ಷಣದಿಂದ ಅನ್ವಯವಾಗುವಂತೆ ವೇತನ ಶ್ರೇಣಿ ರೂ.40,900 ರಿಂದ 78,2000ಕ್ಕೆ ಹೆಚ್ಚಿಸಲಾಗಿದೆ.
ಇದಲ್ಲದೇ ಉಳಿದ 4521 ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳನ್ನು ವೇತನ ಶ್ರೇಣಿ ರೂ 37,900 ರಿಂದ 70,850 ಮುಂದುವರೆಸಲಾಗಿದೆ. ಹಿರಿಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೃಂದಗಳಿಗೆ ನೇಮಕಾತಿ ಕಾರ್ಯವಿಧಾನವನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ