Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ-ಶ್ರೀಮುರಳಿ ತಾಯಿ `ಜಯಮ್ಮ’ ಇನ್ನಿಲ್ಲ | Jayamma Passed Away

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

ಭಾರತದ ರಕ್ಷಣಾ ವಲಯಕ್ಕೆ ಬಿಗ್ ಬೂಸ್ಟ್: ಒಡಿಶಾದಲ್ಲಿ ದೀರ್ಘ ವ್ಯಾಪ್ತಿಯ ‘ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್’ ಪರೀಕ್ಷೆ ಯಶಸ್ವಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘NWKRTC’ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ‘ಸಾರಿಗೆ ಸಂಜೀವಿನಿ’ಯಡಿ ನಗದು ರಹಿತ ಚಿಕಿತ್ಸೆ ವಿಸ್ತರಣೆ
KARNATAKA

‘NWKRTC’ ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : ‘ಸಾರಿಗೆ ಸಂಜೀವಿನಿ’ಯಡಿ ನಗದು ರಹಿತ ಚಿಕಿತ್ಸೆ ವಿಸ್ತರಣೆ

By kannadanewsnow57

ಬೆಂಗಳೂರು : ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ ರವರ ಸಹಯೋಗದೊಂದಿಗೆ ವಾ.ಕ.ರ ಸಾರಿಗೆ ಸಂಸ್ಥೆಯಲ್ಲಿ (NWKRTC) ಕಾರ್ಯನಿರತ ನೌಕರರಿಗೆ ಮತ್ತು ಅವರ ಅವಲಂಬಿತರಿಗೆ “ಸಾರಿಗೆ ಸಂಜೀವಿನಿ” ನಗದುರಹಿತ (Cashless) ಒಳರೋಗಿ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.

ವಾ.ಕ.ರ.ಸಾ.ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಮತ್ತು ಅವರ ಅವಲಂಬಿತರ ಆರೋಗ್ಯದ ಹಿತದೃಷ್ಟಿಯಿಂದ ಒಳರೋಗಿಗಳಿಗೆ ನಗದುರಹಿತ (Cashless) ವೈದ್ಯಕೀಯ ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲು ಯೋಜಿಸಿ, ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ “ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿ” (KIMS) ರವರೊಂದಿಗೆ ಮೂರು (03) ವರ್ಷಗಳ ಅವಧಿಗೆ ಒಡಂಬಡಿಕೆಯನ್ನು ಮಾಡಿಕೊಂಡು “ಸಾರಿಗೆ ಸಂಜೀವಿನಿ” ಯೋಜನೆಯನ್ನು ದಿನಾಂಕ: 06-03-2024 ರಿಂದ ಜಾರಿಗೆ ತರಲಾಗಿದೆ.

ಈ ಯೋಜನೆಯನ್ನು ಜಾರಿಗೆ ತಂದಿರುವ ಕುರಿತು ಉಲ್ಲೇಖಿತ 02 ರ ಸುತ್ತೋಲೆಯಲ್ಲಿ ವಿವರವಾದ ನಿರ್ದೇಶನಗಳನ್ನು ನೀಡಲಾಗಿದೆ. ಮುಂದುವರೆದಂತೆ ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರು ಸರ್ಕಾರಿ/ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಮರುಪಾವತಿಗಾಗಿ ಕೋರುವ ವೈದ್ಯಕೀಯ ಬಿಲ್ಲುಗಳನ್ನು ಆಯಾ ವಿಭಾಗದ ಮುಖ್ಯಸ್ಥರಿಗೆ/ಪ್ರಾದೇಶಿಕ ಕಾರ್ಯಾಗಾರದ ಕಾರ್ಯವ್ಯವಸ್ಥಾಪಕರಿಗೆ ಮಂಜೂರು ಮಾಡಲು ಅಧಿಕಾರ ಪ್ರತ್ಯಾಯೋಜನೆಯನ್ವಯ ಅವಕಾಶವಿರುತ್ತದೆ. ಅಲ್ಲದೇ ಸಂಸ್ಥೆಯು ಒಡಬಂಡಿಕೆ ಮಾಡಿಕೊಂಡಿರುವ ಈ ಆಸ್ಪತ್ರೆಯು ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ (KIMS) ಆಸ್ಪತ್ರೆಯಾಗಿರುವುದರಿಂದ ಈ “ಸಾರಿಗೆ ಸಂಜೀವಿನಿ” ಯೋಜನೆಯಡಿ ಚಿಕಿತ್ಸೆ ಪಡೆಯುವ ವೈದ್ಯಕೀಯ ಬಿಲ್ಲುಗಳನ್ನು ಆಯಾ ವಿಭಾಗ / ಪ್ರಾದೇಶಿಕ ಕಾರ್ಯಾಗಾರದಲ್ಲಿ ಪರಿಶೀಲಿಸಿ. ಮಂಜೂರಾತಿಗೆ ಕ್ರಮವಹಿಸಲು ಸೂಚಿಸಲಾಗಿದೆ.

ಮುಂದುವರೆದು ಸಂಸ್ಥೆಯಲ್ಲಿ ಕಾರ್ಯನಿರತ ಎಲ್ಲಾ ನೌಕರರಿಗೆ ಹಾಗೂ ಅವರ ಅವಲಂಬಿತರಿಗೆ ನಗದುರಹಿತ (Cashless) ವೈದ್ಯಕೀಯ ಚಿಕಿತ್ಸಾ ಸೌಲಭ್ಯ ಪಡೆಯಲು ಈ ಕೆಳಕಂಡ ನಿರ್ದೇಶನಗಳನ್ನು ನೀಡಲಾಗಿದೆ.

1. ನೌಕರರು ಹಾಗೂ ಅವರ ಅವಲಂಬಿತರು ಚಿಕಿತ್ಸೆಗೆ ದಾಖಲಾಗುವ ಬಗೆ :

1) ಸಂಸ್ಥೆಯಲ್ಲಿ ಕಾರ್ಯನಿರತ ಎಲ್ಲಾ ನೌಕರರ ಮತ್ತು ಅವರ ಅವಲಂಬಿತರ ವಿವರಗಳ ಮಾಹಿತಿ ಹಾಗೂ ಇತ್ತೀಚಿನ ಭಾವ ಚಿತ್ರದೊಂದಿಗೆ “ಸಾರಿಗೆ ಸಂಜೀವಿನಿ” ತಂತ್ರಾಂಶದಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು. ಈ ವಿವರಗಳನ್ನು ಕಿಮ್ಸ್‌ನವರು ಸಾರಿಗೆ ಸಂಜೀವಿನಿ ತಂತ್ರಾಂಶದ ಮೂಲಕ ಪರಿಶೀಲಿಸಿ ಖಾತರಿಪಡಿಸಿಕೊಳ್ಳುವರು.
2) ಚಿಕಿತ್ಸೆಗಾಗಿ ದಾಖಲಾದಾಗ KIMS ಆಸ್ಪತ್ರೆ ರವರಿಗೆ ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರು ತಮ್ಮ ಪರಿಚಯ ಮತ್ತು ಫಲಾನುಭವಿಗಳು ಎಂದು ತಿಳಿಸುವುದು. NWKRTC ನೌಕರರು ಅವರ ಅವಲಂಬಿತರ ಆವಶ್ಯಕ ಮಾಹಿತಿಯೊಂದಿಗೆ ಮತ್ತು ನೌಕರರ ಭವಿಷ್ಯ ನಿಧಿ ಸಂಖ್ಯೆ ಅಥವಾ ಸಾರಿಗೆ ಸಂಜೀವಿನಿ ತಂತ್ರಾಂಶದಲ್ಲಿ ದಾಖಲಿಸಿದ ದೂರವಾಣಿ ಸಂಖ್ಯೆಯನ್ನು KIMS ಆಸ್ಪತ್ರೆ ರವರಿಗೆ ನೀಡಿ. ಚಿಕಿತ್ಸೆಗೆ ದಾಖಲಾಗುವುದು.

3) ನೌಕರರ ಅವಲಂಬಿತರು ಚಿಕಿತ್ಸೆಗೆ ದಾಖಲಾಗುವ ಸಮಯದಲ್ಲಿ, ಅವರ ಅವಲಂಬಿತರು ನೌಕರನ ಜೊತೆ ಖಾಯಂ ವಾಸ ಮಾಡುತ್ತಿರುವ ವಿವರ, ಜೀವನೋಪಾಯಕ್ಕಾಗಿ ಸಂಪೂರ್ಣವಾಗಿ ಅವರ ಮೇಲೆ ಅವಲಂಬಿತರಾಗಿರುವ ಬಗ್ಗೆ ಹಾಗೂ ಅವರ ಆದಾಯದ ಕುರಿತು ಲಿಖಿತವಾಗಿ ದೃಢೀಕರಣವನ್ನು KIMS ನವರಿಗೆ ನೌಕರರು ಒದಗಿಸಿ ದಾಖಲಿಸುವುದು.

'NWKRTC' ನೌಕರರಿಗೆ ಭರ್ಜರಿ ಗುಡ್ ನ್ಯೂಸ್ : 'ಸಾರಿಗೆ ಸಂಜೀವಿನಿ'ಯಡಿ ನಗದು ರಹಿತ ಚಿಕಿತ್ಸೆ ವಿಸ್ತರಣೆ Good news for NWKRTC employees: Cashless treatment extended under 'Transport Sanjeevini'
Share. Facebook Twitter LinkedIn WhatsApp Email

Related Posts

BREAKING : ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ-ಶ್ರೀಮುರಳಿ ತಾಯಿ `ಜಯಮ್ಮ’ ಇನ್ನಿಲ್ಲ | Jayamma Passed Away

1 Min Read

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

1 Min Read

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

2 Mins Read
Recent News

BREAKING : ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ-ಶ್ರೀಮುರಳಿ ತಾಯಿ `ಜಯಮ್ಮ’ ಇನ್ನಿಲ್ಲ | Jayamma Passed Away

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

ಭಾರತದ ರಕ್ಷಣಾ ವಲಯಕ್ಕೆ ಬಿಗ್ ಬೂಸ್ಟ್: ಒಡಿಶಾದಲ್ಲಿ ದೀರ್ಘ ವ್ಯಾಪ್ತಿಯ ‘ಲ್ಯಾಂಡ್ ಅಟ್ಯಾಕ್ ಕ್ರೂಸ್ ಮಿಸೈಲ್’ ಪರೀಕ್ಷೆ ಯಶಸ್ವಿ!

BIG NEWS : ಮಕ್ಕಳನ್ನು ‘ಕ್ಯಾನ್ಸರ್’ನಿಂದ ರಕ್ಷಿಸಲು ಶಾಲೆಗಳಲ್ಲಿ `ಲಿಪ್ ಸ್ಟಿಕ್’ ನಿಷೇಧಿಸಿದ ಕೇರಳ | Lipstick Ban

State News
KARNATAKA

BREAKING : ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ-ಶ್ರೀಮುರಳಿ ತಾಯಿ `ಜಯಮ್ಮ’ ಇನ್ನಿಲ್ಲ | Jayamma Passed Away

By kannadanewsnow57 KARNATAKA 1 Min Read

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಅವರ ತಾಯಿ . ಹಿರಿಯ ನಿರ್ಮಾಪಕ ಎಸ್.ಎ.…

BREAKING : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ : ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ |Lokayukta Raid

ALERT : `LPG’ ಗ್ರಾಹಕರೇ ಗಮನಿಸಿ : ಜೂನ್ 30ರೊಳಗೆ ಈ 5 ಕೆಲಸ ಮಾಡದಿದ್ದರೆ ಸಬ್ಸಿಡಿ, ಕನೆಕ್ಷನ್ ಕಟ್.!

₹30,000 ಸಂಬಳದಲ್ಲೂ ಶ್ರೀಮಂತರಾಗಬಹುದು : 50-30-20 ಸೂತ್ರದಿಂದ ಹಣ ಉಳಿಸುವ ಸುಲಭ ಮಾರ್ಗ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.