ಬೆಂಗಳೂರು: 2022-23 ರಿಂದ 2025-26ರವರೆಗೆ ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳನ್ನು ಕೇಂದ್ರ ಸರ್ಕಾರದ SDRF, NDRF ಮಾರ್ಗಸೂಚಿಗಳ ಅನುಸಾರ ಕೈಗೊಳ್ಳಲು ಅನುಮೋದನೆ ನೀಡಿದೆ. ಈ ಮೂಲಕ ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವಂತ ಸಂತ್ರಸ್ತರಿಗೆ ಪರಿಹಾರ ಪಾವತಿಗೆ ಕ್ರಮವನ್ನು ರಾಜ್ಯ ಸರ್ಕಾರ ವಹಿಸಿದೆ.
ಈ ಕುರಿತಂತೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆಯ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. 2022-23 ರಿಂದ 2025-26ರವರೆಗೆ ಅನ್ವಯವಾಗುವಂತೆ ಪ್ರಕೃತಿ ವಿಕೋಪದಿಂದ ಉಂಡಾಗುವ ಹಾನಿಗೆ ಪರಿಹಾರ ಪಾವತಿಸುವ ಸಲುವಾಗಿ ಕೇಂದ್ರ ಗೃಹ ಮಂತ್ರಾಲಯ ದಿನಾಂಕ 10-10-2022ರಲ್ಲಿ ಪರಿಷ್ಕೃತ SDRF, NDRF ಮಾರ್ಗಸೂಚಿಯನ್ವಯ ದರ ನಿಗದಿ ಪಡಿಸಲಾಗಿದೆ ಎಂದಿದೆ.
ಇನ್ನೂ ರಾಜ್ಯದಲ್ಲಿ 2022-23ನೇ ಸಾಲಿನ ಆರ್ಥಿಕ ವರ್ಷದಿಂದ ( ದಿನಾಂಕ 01-04-2022ರಿಂದ) ಪಕೃತಿ ವಿಕೋಪ ಪರಿಹಾರ ಕಾರ್ಯಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಪಾವತಿಸಲು ನುಮೋದನೆ ನೀಡಿ ಆದೇಶಿಸಿದೆ ಎಂದು ತಿಳಿಸಿದೆ.
BREAKING NEWS: ರಾಮನಗರ ಜೆಡಿಎಸ್ ಅಭ್ಯರ್ಥಿಯಾಗಿ ‘ನಿಖಿಲ್ ಕುಮಾರಸ್ವಾಮಿ’ ಘೋಷಣೆ | JDS Nikhil Kumaraswamy
ಕೇಂದ್ರ ಗೃಹ ಮಂತ್ರಾಲಯದ SDRF, NDRF ಮಾರ್ಗಸೂಚಿಯನ್ವಯ ವೆಚ್ಚ ಮಾಡಲಾಗಿರುವ ಮಾಹಿತಿಯನ್ನು ಜಿಲ್ಲಾಡಳಿತವು ಕೇಂದ್ರ ಸರ್ಕಾರದ NDMIS ತಂತ್ರಾಂಶದಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು ಎಂದು ಸೂಚಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಹಾರ ಪಾವತಿಸಲು ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸಲಾಗಿದೆ. ಈ ಆದೇಶವು ಮುಂದಿನ ಆದೇಶವನ್ನು ಹೊರಡಿಸುವವರೆಗೂ ಚಾಲ್ತಿಯಲ್ಲಿರುತ್ತದೆ ಎಂದಿದೆ.
‘ನೇಕಾರ’ರಿಗೆ ಭರ್ಜರಿ ಗುಡ್ ನ್ಯೂಸ್: ‘2 ಲಕ್ಷ’ದವರೆಗೆ ‘ಶೂನ್ಯ ಬಡ್ಡಿದರ’ದಲ್ಲಿ ಸಾಲ – ಸಿಎಂ ಬೊಮ್ಮಾಯಿ ಘೋಷಣೆ