ಬೆಂಗಳೂರು: ರಾಜ್ಯದ ವಿಕಲಚೇತನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ವಿಶ್ವ ವಿಕಲಚೇತನರ ದಿನವಾದಂತ ಇಂದು, ಸಿಎಂ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆರೋಗ್ಯ ವಿಮೆಯನ್ನು ಘೋಷಣೆ ಮಾಡಿದ್ದಾರೆ. ಈ ಮೂಲಕ ವಿಕಲಚೇತನರಿಗೆ 5 ಲಕ್ಷ ರೂವರೆಗೆ ವಿಶೇಷ ವಿಮೆ ಜಾರಿಗೊಳಿಸುವುದಾಗಿ ಘೋಷಿಸಿ, ಗುಡ್ ನ್ಯೂಸ್ ನೀಡಿದ್ದಾರೆ.
ಇಂದು ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಂತ ವಿಶ್ವ ವಿಕಲಚೇತನ ಕಾರ್ಯಕ್ರಮದಲ್ಲಿ ಭಾಗಿಯಾದಂತ ಅವರು, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿಕಲಚೇತನರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
BREAKING: ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಬಾಲಕ ಸಾವು ಪ್ರಕರಣ: ಕೆಲಸದಿಂದ ಆಂಬುಲೆನ್ಸ್ ಚಾಲಕ ವಜಾ
ಈ ಬಳಿಕ ಮಾತನಾಡಿದಂತ ಅವರು, ವಿಕಲ ಚೇತನರ ಆರೋಗ್ಯಕ್ಕಾಗಿ ವಿಶೇಷ ಆರೋಗ್ಯ ವಿಮೆಯನ್ನು ಘೋಷಣೆ ಮಾಡಿದರು. ವಿಕಲಚೇತನರ ಆರೋಗ್ಯ ರಕ್ಷಣೆಗಾಗಿ 5 ಲಕ್ಷ ರೂ ವರೆಗೆ ವಿಶೇಷ ಆರೋಗ್ಯ ವಿಮೆ ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇಂದಿನ ಕಾರ್ಯಕ್ರಮದಲ್ಲಿ ಸಚಿವ ಹಾಲಪ್ಪ ಆಚಾರ್, ಸಂಸದ ಪಿ.ಸಿ ಮೋಹನ್, ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಹಲವರು ಉಪಸ್ಥಿತರಾಗಿದ್ದರು.