ಬೆಂಗಳೂರು: ನಗರದಲ್ಲಿ ಸಾಮಾನ್ಯವಾಗಿ ನಾವು ಎಲ್ಲರೂ ಹೋಗಬೇಕು ಅಂದರೆ ಸಾರ್ವಜನಿಕ ಸಾರಿಗೆ ಬಳಸುತ್ತೇವೆ. ಅದರಲ್ಲೂ ಟ್ಯಾಕ್ಸಿ, ಆಟೋ, ಕ್ಯಾಬ್ ಎಂಬ ಆ್ಯಪ್ ಆಧಾರಿತ ಸೇವೆಗಳನ್ನು ಬಳೆಸುವುದೇ ಜಾಸ್ತಿ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆಗಳು ಗ್ರಾಹಕರಿಂದ ದುಪ್ಪಟು ಹಣ ವಸೂಲಿ ಮಾಡುತ್ತಿದೆ ಎಂಬ ಆರೋಪವಿದೆ.
ಪ್ರಯಾಣಿಕರು ಅಗತ್ಯಕ್ಕೋ, ಅನಿವಾರ್ಯತೆಗಾಗಿಯೋ ದುಪ್ಪಟ್ಟು ಹಣ ಕೊಡಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರು ಸಾರಿಗೆ ಇಲಾಖೆಗೆ ದೂರು ಕೊಟ್ಟರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ಕೊನೆಗೂ ಎಚ್ಚೆತ್ತಿರುವ ಸಾರಿಗೆ ಇಲಾಖೆ ಆಪರೇಷನ್ ಸಾರಿಗೆ ಶುರು ಮಾಡಿದೆ. ಖುದ್ದು ಸಾರ್ವಜನಿಕರು ದೂರು ಕೊಡಲು ಸಹಾಯವಾಣಿಯನ್ನು ಬಿಡುಗಡೆ ಮಾಡಿದೆ. ಆ್ಯಪ್ ಆಧಾರಿತ ಟ್ಯಾಕ್ಸಿ ಕ್ಯಾಬ್ ಆಟೋಗಳು ಪ್ರಯಾಣಿಕರಿಗೆ ದುಬಾರಿ ದುಡ್ಡು ನೀಡುವಂತೆ ಡಿಮ್ಯಾಂಡ್ ಮಾಡಿದರೆ 9449863426 ಈ ಸಹಾಯವಾಣಿಗೆ ಕರೆ ಮಾಡಿ ದೂರು ಕೊಡಬಹುದು. ಈ ಮೂಲಕ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಲಿದೆ.