ಬೆಂಗಳೂರು: ವಿವಿಧ ಕಾರಣದಿಂದಾಗಿ ನಿಲ್ಲಿಸಲಾಗಿದ್ದಂತ ಹವಾನಿಯಂತ್ರಿತ ವಾಯುವಜ್ರ ಮಾರ್ಗ ಸಂಖ್ಯೆ ಕೆಐಎ-7 ಮತ್ತು ಕೆಐಎ-12 ಬಸ್ ಸಂಚಾರವನ್ನು ಬಿಎಂಟಿಸಿ ಪುನರಾರಂಭಿಸುತ್ತಿದೆ. ಈ ಮೂಲಕ ಬಿಎಂಟಿಸಿ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ.
ಕೌಂಟಿ ಚಾಂಪಿಯನ್ ಶಿಪ್ ಪಂದ್ಯದ ಸಸೆಕ್ಸ್ ಮಧ್ಯಂತರ ನಾಯಕನಾಗಿ ಚೇತೇಶ್ವರ್ ಪೂಜಾರ್ ನೇಮಕ | Cheteshwar Pujara
ಈ ಬಗ್ಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮಾರ್ಗ ಸಂಖ್ಯೆ ಕೆಐಎ-7 ಮತ್ತು ಕೆಐಎ-12ರಲ್ಲಿ ಹವಾನಿಯಂತ್ರಿತ ವಾಯುವಜ್ರ ಬಸ್ ಸಂಚಾರವನ್ನು ಪುನರಾರಂಭಿಸಲಾಗುತ್ತಿದೆ ಎಂಬುದಾಗಿ ತಿಳಿಸಿದೆ.
ಇನ್ನೂ ಕೆಐಎ-7 ಬಸ್ ಹೆಚ್ ಎಸ್ ಆರ್ ಬಿಡಿಎ ಕಾಂಪ್ಲೆಕ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋರಮಂಗಲ ವಾಟರ್ ಟ್ಯಾಂಕ್, ಡೈರಿ ಸರ್ಕಲ್, ಶಾಂತಿನಗರ ಟಿಟಿಎಂ, ಇಂಡಿಯನ್ ಎಕ್ಸ್ ಪ್ರೆಸ್ ಮಾರ್ಗವಾಗಿ ಸಂಚರಿಸಲಿದೆ.
ಉತ್ತರಾಖಂಡ ಪ್ರವಾಹದಲ್ಲಿ ಕೊಚ್ಚಿಹೋದ ಶಾಲಾ ಬಸ್… ಮುಂದೇನಾಯ್ತು ಇಲ್ಲಿ ನೋಡಿ!
ಕೆಐಎ-12 ವಾಯುವಜ್ರ ಬಸ್ ಕುವೆಂಪು ನಗರ ಬಸ್ ನಿಲ್ದಾಣದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜೆಪಿ ನಗರ 3ನೇ ಹಂತ, ಜಯನಗರ 4ನೇ ಬ್ಲಾಕ್, ಶಾಂತಿನಗರ ಟಿಟಿಎಂಸಿ, ಕಾವೇರಿ ಭವನ ಮಾರ್ಗವಾಗಿ ತಲಾ 3 ಬಸ್ ಗಳು ಕಾರ್ಯಾಚರಣೆ ನಡೆಸಲಿದ್ದಾವೆ.