ಬೆಂಗಳೂರು: ಕರ್ನಾಟಕದಿಂದ ( Karnataka ) ಶಬರಿಮಲೆಯ ಅಯ್ಯಪ್ಪ ಸ್ವಾಮಿ (Sabarimala Ayyappa Swamy ) ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆ ಎಸ್ ಆರ್ ಟಿಸಿಯಿಂದ ಶಬರಿಮಲೆಗೆ ರಾಜಹಂಸ, ವೋಲ್ವೋ ಬಸ್ ( KSRTC Rajahamsa, Volvo Bus ) ಸಂಚಾರದ ವ್ಯವಸ್ಥೆಯನ್ನು ಮಾಡಿದೆ.
BREAKING NEWS: ಕಾಡಾನೆ ಹಾವಳಿ: ಪ್ರತಿ ಜಿಲ್ಲೆಗೊಂದು ಆನೆ ಟಾಸ್ಕ್ ಫೋರ್ಸ್ ರಚನೆಗೆ ರಾಜ್ಯ ಸರ್ಕಾರ ಆದೇಶ
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ( Karnataka State Road Transport Corporation – KSRTC ), ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ 01-12-2022ರಿಂದ ಹೊಸದಾಗಿ ಬೆಂಗಳೂರು – ನೀಲಕ್ಕಲ್ (ಪಂಪಾ-ಶಬರಿಮಲೈ) ಮಾರ್ಗದಲ್ಲಿ ರಾಜಹಂಸ ಹಾಗೂ ವೋಲ್ವೋ ವಾಹನಗಳ ಸಂಚಾರ ವ್ಯವಸ್ಥೆ ಮಾಡಲಾಗಿದೆ ಎಂದಿದೆ.
ಹೀಗಿದೆ KSRTC ರಾಜಹಂಸ ಬಸ್ ವೇಳಾಪಟ್ಟಿ ಹಾಗೂ ಪ್ರಯಾಣದರ
- ದಿನಾಂಕ 01-12-2022ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ. ಬೆಳಿಗ್ಗೆ 8.15ಕ್ಕೆ ನೀಲಕ್ಕಲ್ ಅಂದರೇ ಪಂಪಾ ಶಬರಿಮಲೆಯನ್ನು ತಲುಪಲಿದೆ.
- ಇನ್ನೂ ಮರುದಿನ ಸಂಜೆ 5 ಗಂಟೆಗೆ ನೀಲಕ್ಕಲ್ ನಿಂದ ಹೊರಡಲಿರುವಂತ ಕೆ ಎಸ್ ಆರ್ ಟಿಸಿ ರಾಜಹಂಸ ಬಸ್, ಬೆಂಗಳೂರನ್ನು ಮರುದಿನ ಮಧ್ಯಾಹ್ನ 12 ಗಂಟೆಗೆ ತಲುಪಲಿದೆ.
- ಬೆಂಗಳೂರು- ನೀಲಕ್ಕಲ್ ರಾಜಹಂಸ ಬಸ್ ಸಂಚಾರದ ಪ್ರಯಾಣ ದರವನ್ನು ವಯಸ್ಕರಿಗೆ ರೂ.1,150 ನಿಗದಿ ಪಡಿಸಲಾಗಿದೆ.
ಹೀಗಿದೆ ಕೆ ಎಸ್ ಆರ್ ಟಿ ಸಿ ವೋಲ್ವೋ ಬಸ್ ( KSRTC Volvo Bus ) ವೇಳಾಪಟ್ಟಿ ಹಾಗೂ ಪ್ರಯಾಣದರ
- ದಿನಾಂಕ 01-12-2023ರಿಂದ ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆಗೆ ಬಸ್ ಹೊರಟು, ನೀಲಕ್ಕಲ್ ಅನ್ನು ಬೆಳಿಗ್ಗೆ 6.45ಕ್ಕೆ ತಲುಪಲಿದೆ.
- ನೀಲಕ್ಕಲ್ ನಿಂದ ಸಂಜೆ 6 ಗಂಟೆಗೆ ಕೆಎಸ್ ಆರ್ ಟಿಸಿ ವೋಲ್ವೋ ಬಸ್ ಹೊರಟು, ಬೆಂಗಳೂರಿನ್ನು ಮರುದಿನ ಬೆಳಿಗ್ಗೆ 9.45ಕ್ಕೆ ತಲುಪಲಿದೆ.
- ಬೆಂಗಳೂರು-ನೀಲಕ್ಕಲ್ ನ ವೋಲ್ವೋ ಬಸ್ ಪ್ರಯಾಣಕ್ಕೆ ದರವನ್ನು ರೂ.1,490 ನಿಗದಿ ಪಡಿಸಲಾಗಿದೆ.
ಹಾಲಿನ ದರ ಪರಿಷ್ಕರಣೆ ವಿಚಾರ: ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ಕೊನೆಗಾಯ್ತು ಈ ನಿರ್ಧಾರ