Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಜ್ಯುವೆಲ್ಲರಿ ಮಾಲೀಕನ ಕಣ್ಣಿಗೆ `ಪೆಪ್ಪರ್ ಸ್ಪ್ರೇ’ ಮಾಡಿ ದರೋಡೆಗೆ ಯತ್ನಿಸಿದ ಯುವತಿಯರು : ವಿಡಿಯೋ ವೈರಲ್ |WATCH VIDEO

BIG NEWS : `FIR’ ತಡವಾದರೂ ಕೇಸ್ ರದ್ದು ಸಾಧ್ಯವಿಲ್ಲ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ 30 ಸಾವಿರ ನರ್ಸ್ ಗಳಿಗೆ ಗುಡ್ ನ್ಯೂಸ್ : 3 ತಿಂಗಳ ಸಂಬಳ ಪಾವತಿಗೆ ಸರ್ಕಾರ ಆದೇಶ.!
KARNATAKA

ರಾಜ್ಯದ 30 ಸಾವಿರ ನರ್ಸ್ ಗಳಿಗೆ ಗುಡ್ ನ್ಯೂಸ್ : 3 ತಿಂಗಳ ಸಂಬಳ ಪಾವತಿಗೆ ಸರ್ಕಾರ ಆದೇಶ.!

By kannadanewsnow57

ಬೆಂಗಳೂರು : ರಾಜ್ಯದಲ್ಲಿ 30 ಸಾವಿರ ನರ್ಸ್‌ಗಳಿಗೆ 3 ತಿಂಗಳ ಸಂಬಳದ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನ (NHM), ಕರ್ನಾಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಒಪ್ಪಂದಾಧಾರಿತ ನೌಕರರು ಹಾಗೂ ASHA ಕಾರ್ಯಕರ್ತರಿಗೆ 2025ರ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ವೇತನ ಮತ್ತು ಪ್ರೋತ್ಸಾಹಧನ ಪಾವತಿಯಲ್ಲಿ ಸಂಭವಿಸಿದ ವಿಳಂಬದ ಕುರಿತು ಈ ಮೂಲಕ ಸ್ಪಷ್ಟನೆ ನೀಡಲಾಗುತ್ತಿದೆ.

ಭಾರತ ಸರ್ಕಾರದ ಮಾರ್ಗಸೂಚಿಗಳಂತೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯನ್ನು ಆರ್ಥಿಕ ವರ್ಷದ ಮಧ್ಯಭಾಗದಲ್ಲಿ SNA-SPARSH ಎಂಬ ಹೊಸ ಹಣಕಾಸು ವ್ಯವಸ್ಥೆಗೆ ವರ್ಗಾಯಿಸಲಾಗಿದೆ. ಹಿಂದಿನ ವ್ಯವಸ್ಥೆಯಿಂದ ಹೊಸ ವ್ಯವಸ್ಥೆಗೆ ವರ್ಗಾವಣೆಯಾಗುವ ಸಂದರ್ಭದಲ್ಲಿ, ಕೇಂದ್ರ ಮತ್ತು ರಾಜ್ಯ ಮಟ್ಟಗಳಲ್ಲಿ ನಿಧಿ ಬಿಡುಗಡೆ ಹಾಗೂ ಪಾವತಿ ಪ್ರಕ್ರಿಯೆಗಳಲ್ಲಿ ತಾಂತ್ರಿಕ ಮತ್ತು ಪ್ರಕ್ರಿಯಾತ್ಮಕ ಬದಲಾವಣೆಗಳು ಅಗತ್ಯವಾಗಿದ್ದು, ಇದರಿಂದಾಗಿ ಕೆಲ ತಾತ್ಕಾಲಿಕ ವಿಳಂಬಗಳು ಉಂಟಾಗಿವೆ.

SNA-SPARSH ವ್ಯವಸ್ಥೆಯ ಅಡಿಯಲ್ಲಿ, ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾದ ನಂತರ ಮಾತ್ರ ರಾಜ್ಯ ಸರ್ಕಾರವು ಪಾವತಿಗಳನ್ನು ಪ್ರಕ್ರಿಯೆಗೊಳಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಪಾಲಿನ ನಿಧಿಗಳ ಸ್ವೀಕೃತಿಯಲ್ಲಿ ಉಂಟಾದ ವಿಳಂಬ ಮತ್ತು ಹೊಸ ವ್ಯವಸ್ಥೆಗೆ ಹೊಂದಾಣಿಕೆಯ ಪ್ರಕ್ರಿಯೆಗಳ ಕಾರಣದಿಂದಾಗಿ, NHM ನೌಕರರಿಗೆ ವೇತನ ಪಾವತಿ ನಿರ್ಧಿಷ್ಟ ಸಮಯಕ್ಕೆ ಸಾಧ್ಯವಾಗಲಿಲ್ಲ.

ಈ ಹಿನ್ನೆಲೆಯಲ್ಲಿ, ಭಾರತ ಸರ್ಕಾರವು ದಿನಾಂಕ 08.01.2026 ರಂದು ₹175.75 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಸಂಬಂಧಿತ ಕೇಂದ್ರ ಹಾಗೂ ರಾಜ್ಯ ಪಾಲಿನ ನಿಧಿಗಳು ಪ್ರಸ್ತುತ ರಾಜ್ಯ ಸರ್ಕಾರದ ಮಟ್ಟದಲ್ಲಿ ಪ್ರಕ್ರಿಯೆಯಲ್ಲಿದ್ದು, ಶೀಘ್ರದಲ್ಲೇ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು.

NHM ನೌಕರರ ಸಾಮಾಜಿಕ ಭದ್ರತೆ ಮತ್ತು ಆರ್ಥಿಕ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಿಂದ ಕೇಂದ್ರ ಅನುದಾನಗಳ ಸಮಯವನ್ನು ಪರಿಗಣಿಸದೆ, ವೇತನ ಪಾವತಿಯನ್ನು ಆದ್ಯತೆಯ ಮೇರೆಗೆ ಶೀಘ್ರವಾಗಿ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿದೆ.

ರಾಜ್ಯ ಸರ್ಕಾರವು ಈ ವಿಷಯವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಯಾವುದೇ ವಿಳಂಬವಾಗದಂತೆ ಹಣಕಾಸು ಪ್ರಕ್ರಿಯೆಯನ್ನು ಸರಳಗೊಳಿಸಿ ನಿಧಿಗಳ ಸುಗಮ ಹರಿವು ಖಚಿತಪಡಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಲಾಗಿದೆ.

Good news for 30000 nurses in the state: Government orders payment of 3 months' salary!
Share. Facebook Twitter LinkedIn WhatsApp Email

Related Posts

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

1 Min Read

‘ಹಲೋ’ ಎಂದ ತಕ್ಷಣ ಫೋನ್ ಕಟ್ ಆಯ್ತಾ? ಎಚ್ಚರ ಇದು ಹೊಸ ಸೈಬರ್ ಸ್ಕ್ಯಾಮ್ ಆಗಿರಬಹುದು.!

2 Mins Read

ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

2 Mins Read
Recent News

SHOCKING : ಜ್ಯುವೆಲ್ಲರಿ ಮಾಲೀಕನ ಕಣ್ಣಿಗೆ `ಪೆಪ್ಪರ್ ಸ್ಪ್ರೇ’ ಮಾಡಿ ದರೋಡೆಗೆ ಯತ್ನಿಸಿದ ಯುವತಿಯರು : ವಿಡಿಯೋ ವೈರಲ್ |WATCH VIDEO

BIG NEWS : `FIR’ ತಡವಾದರೂ ಕೇಸ್ ರದ್ದು ಸಾಧ್ಯವಿಲ್ಲ : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೈಕೋರ್ಟ್ ಮಹತ್ವದ ತೀರ್ಪು

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

‘ಹಲೋ’ ಎಂದ ತಕ್ಷಣ ಫೋನ್ ಕಟ್ ಆಯ್ತಾ? ಎಚ್ಚರ ಇದು ಹೊಸ ಸೈಬರ್ ಸ್ಕ್ಯಾಮ್ ಆಗಿರಬಹುದು.!

State News
KARNATAKA

ಬಾಗಲಕೋಟೆಯಲ್ಲಿ ‘KSRTC’ ಬಸ್, ಲಾರಿ ಮಧ್ಯ ಭೀಕರ ಅಪಘಾತ : ಇಬ್ಬರು ಪ್ರಯಾಣಿಕರ ಸಾವು, ಹಲವರಿಗೆ ಗಾಯ!

By ಸುರೇಶ್‌ KARNATAKA 1 Min Read

ಬಾಗಲಕೋಟೆ : ಬಾಗಲಕೋಟೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಲಾರಿ ಮಧ್ಯ…

‘ಹಲೋ’ ಎಂದ ತಕ್ಷಣ ಫೋನ್ ಕಟ್ ಆಯ್ತಾ? ಎಚ್ಚರ ಇದು ಹೊಸ ಸೈಬರ್ ಸ್ಕ್ಯಾಮ್ ಆಗಿರಬಹುದು.!

ಬೆಂಗಳೂರಿನ ಸೋಲದೇವನಹಳ್ಳಿ ರೈಲು ನಿರ್ವಹಣಾ ಡೆಪೊ ನಿರ್ಮಾಣಕ್ಕೆ ‘ಬೈ-ರೈಡ್’ನಿಂದ ಟೆಂಡರ್‌ ಆಹ್ವಾನ

ALERT : ‘ಮನಿ ಮ್ಯೂಲ್’ ಆಮಿಷಕ್ಕೆ ಬಲಿಯಾಗಬೇಡಿ : ಬ್ಯಾಂಕ್ ಗ್ರಾಹಕರಿಗೆ `RBI’ ಎಚ್ಚರಿಕೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.