Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಟ್ರಂಪ್ ‘ಡೈಪರ್’ ಧರಿಸಿದ್ದ ಫೋಟೋ ವೈರಲ್: ಇದು ’60 ಮಿನಿಟ್ಸ್’ ಸಂದರ್ಶನದ ಅಸಲಿ ಚಿತ್ರವೇ?

01/05/2026 7:41 AM

BIG NEWS: ‘CBSE ಪಠ್ಯಕ್ರಮ’ದಲ್ಲಿ ಭಾರಿ ಬದಲಾವಣೆ: ತ್ರಿಭಾಷಾ ಸೂತ್ರ ಕಡ್ಡಾಯ, ವೃತ್ತಿಪರ ಶಿಕ್ಷಣಕ್ಕೆ ಹೊಸ ರೂಪ

01/05/2026 7:41 AM

ನೇಪಾಳದಲ್ಲಿ ಭೀಕರ ದುರಂತ: ಪ್ರಪಾತಕ್ಕೆ ಉರುಳಿದ ಜೀಪು; 20 ಯಾತ್ರಿಕರ ಸಾವು – ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ಮಳೆ!

01/05/2026 7:26 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಏಪ್ರಿಲ್ ಮೊದಲ ವಾರ ರಾಜ್ಯಾದ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ.!
KARNATAKA

Good News : ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ : ಏಪ್ರಿಲ್ ಮೊದಲ ವಾರ ರಾಜ್ಯಾದ್ಯಂತ ‘ಗೃಹ ಆರೋಗ್ಯ ಯೋಜನೆ’ ಜಾರಿ.!

By kannadanewsnow5724/03/2025 5:39 AM

ಬೆಳಗಾವಿ : ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಲ್ಲಿ  ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿಮಾತನಾಡಿದ ಸಚಿವರು, ಆರೋಗ್ಯ ಸೇವೆಗಳನ್ನ ಬಡ ವರ್ಗದ ಜನರ ಬಳಿಗೆ ತರುವಲ್ಲಿ ಉಚಿತ ಆರೋಗ್ಯ ತಪಾಸಣಾ ಮೇಳಗಳು ಯಶಸ್ವಿಯಾಗುತ್ತಿವೆ. ದೊಡ್ಡ ಮಟ್ಟದ ಆರೋಗ್ಯ ಮೇಳಗಳನ್ನು ಗ್ರಾಮೀಣ ಪ್ತದೇಶದ ಜನರಿಗೆ ಅನುಕೂಲಪಡಿಸಲು ತಾಲೂಕುಗಳಲ್ಲಿ ನಡೆಸಲಾಗುತ್ತಿದೆ. ಕೊಳ್ಳೆಗಾಲ, ಮಾನ್ವಿ ಬಳಿಕ ಇದೀಗ ಸವದತ್ತಿಯಲ್ಲೂ ಆರೋಗ್ಯ ಮೇಳ ಯಶಸ್ವಿಯಾಗಿದೆ ಎಂದರು.‌

ಇದೇ ವೇಳೆ ಸವದತ್ತಿ ತಾಲೂಕು ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನ 46 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಾಗಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌ ಬೆಳಗಾವಿ ಜಿಲ್ಲೆಯ ರಾಮದುರ್ಗಾ ಹಾಗೂ ಕಿತ್ತೂರು ತಾಲೂಕು ಅಸ್ಪತ್ರೆಗಳಿಗೂ ಸುಸಜ್ಜಿತವಾದ ನೂತನ ಕಟ್ಟಡ ನಿರ್ಮಿಸಲಾಗುವುದು. ಅಲ್ಲದೇ ಬೆಳಗಾವಿ ಜಿಲ್ಲೆಯಲ್ಲಿ ಪ್ರತ್ಯೇಕ ಜಿಲ್ಲಾಸ್ಪತ್ರೆಯನ್ನ ಗೋಕಾಕ್ ನಲ್ಲಿ ನಿರ್ಮಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದರು.

ರಾಜ್ಯ ಸರ್ಕಾರ ಗ್ಯಾರಂಟಿಗಳನ್ನ ನೀಡುವುದರ ಜೊತೆಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ವಿಶೇಷವಾಗಿ ಆರೋಗ್ಯ ಕ್ಷೇತ್ರದಲ್ಲಿ ಈ ಬಾರಿಯ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ಒದಗಿಸಿದ್ದಾರೆ. ಅಥಣಿಗೆ 50 ಹಾಸಿಗೆಯ ತಾಯಿ ಮಕ್ಕಳ‌ ಆಸ್ಪತ್ರೆ ನೀಡಿದ್ದೇವೆ. ಆರೋಗ್ಯ ಸೇವೆಗಳಲ್ಲಿ ಸಾಕಷ್ಟು ಸುಧಾರಣೆ ತರುವತ್ತ ಸತತವಾಗಿ ಪ್ರಯತ್ನಿಸಲಾಗುತ್ತಿದೆ. ಬಡ ಜನರ ಪರ ಕಾಂಗ್ರೆಸ್ ಸರ್ಕಾರ ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.‌

ಹಳ್ಳಿಗಾಡಿನ ಜನರು ಬಡವರು ತಮ್ಮ ಆರೋಗ್ಯ ತಪಾಸಣೆ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು.. ರಕ್ತದೊತ್ತಡ, ಮಧುಮೇಹದಂತಹ ಕಾಯಿಲೆಗಳ ವಿಚಾರದಲ್ಲಿ ನಮ್ಮ ಜನರು ಎಚ್ಚರಿಕೆ ವಹಿಸುವ ಅಗತ್ಯತೆ ಇದೆ. ಆರಂಭಿಕ ಹಂತದಲ್ಲಿ ಈ ಕಾಯಿಲೆಗಳನ್ನ ಪತ್ತೆ ಹಚ್ಚಿದರೆ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಅಲ್ಲದೇ ಮುಂದೆ ಈ ಕಾಯಿಲೆಗಳಿಂದ ಎದುರಾಗುವ ಆಪತ್ತುಗಳಿಂದ ಬಡ ಜನರನ್ನ ಪಾರು ಮಾಡಬಹುದಾಗಿದೆ. ಹೀಗಾಗಿಯೇ ನಮ್ಮ ಕಾಂಗ್ರೆಸ್ ಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿಗೆ ತಂದಿದೆ. 30 ವರ್ಷ ಮೇಲ್ಪಟ್ಟ ರಾಜ್ಯದ ಎಲ್ಲ ಜನರನ್ನು ತಪಾಸಣೆಗೆ ಒಳಪಡಿಸಿ, ಉಚಿತವಾಗಿ ಔಷಧಿಗಳನ್ನ ಜನರ ಬಳಿಗೆ ಒದಗಿಸುವ ಯೋಜನೆ ಇದಾಗಿದೆ.

ಈಗಾಗಲೇ ಗೃಹ ಆರೋಗ್ಯ ಯೋಜನೆಯನ್ನ ಕೋಲಾರ ಜಿಲ್ಲೆಯಲ್ಲಿ ಪ್ರಾರಂಭಿಸಲಾಗಿದ್ದು ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಬೆಳಗಾವಿ ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ. ನಮ್ಮ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು. ಜನರ ಮನೆ ಬಾಗಿಲಿಗೆ ಆರೋಗ್ಯ ಸಿಬ್ಬಂದಿಗಳು ಭೇಟಿ ನೀಡಿ, ರಕ್ತದೊತ್ತಡ, ಮಧುಮೇಹ ಕ್ಯಾನ್ಸರ್ ಸೇರಿದಂತೆ ಮಾನಸಿಕ ಕಾಯಿಲೆಗಳ ಬಗ್ಗೆ ತಪಾಸಣೆ ನಡೆಸಲಿದ್ದಾರೆ. ಗ್ರಾಮೀಣ ಭಾಗದ ಜನರ ಆರೋಗ್ಯ ರಕ್ಷಣೆಯಲ್ಲಿ ಗೃಹ ಆರೋಗ್ಯ ಯೋಜನೆ ದೊಡ್ಡ ಬದಲಾವಣೆಯನ್ನ ತರುವ ನಿರೀಕ್ಷೆಯಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Good News: Another good news for the people of the state: 'Home Health Scheme' to be implemented across the state in the first week of April!
Share. Facebook Twitter LinkedIn WhatsApp Email

Related Posts

ರಾಜ್ಯದ ಶಾಲಾ ಶಿಕ್ಷಕರಿಗೆ ಎಐ ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಷನ್ ಹಾಜರಾತಿ ಕಡ್ಡಾಯ.!

01/05/2026 7:24 AM1 Min Read

BIG NEWS : ವಿಚ್ಛೇದನಕ್ಕೆ ಮದುವೆ ನೋಂದಣಿ ಕಡ್ಡಾಯವಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

01/05/2026 7:21 AM1 Min Read

ಮಾನವನ ದೇಹದ ಅತ್ಯಂತ ದುಬಾರಿ ಅಂಗ ಯಾವುದು? ಕೋಟಿ ಕೋಟಿ ಬೆಲೆ ಬಾಳುವ ಆ ರಹಸ್ಯ ಇಲ್ಲಿದೆ!

01/05/2026 7:09 AM2 Mins Read
Recent News

​ಟ್ರಂಪ್ ‘ಡೈಪರ್’ ಧರಿಸಿದ್ದ ಫೋಟೋ ವೈರಲ್: ಇದು ’60 ಮಿನಿಟ್ಸ್’ ಸಂದರ್ಶನದ ಅಸಲಿ ಚಿತ್ರವೇ?

01/05/2026 7:41 AM

BIG NEWS: ‘CBSE ಪಠ್ಯಕ್ರಮ’ದಲ್ಲಿ ಭಾರಿ ಬದಲಾವಣೆ: ತ್ರಿಭಾಷಾ ಸೂತ್ರ ಕಡ್ಡಾಯ, ವೃತ್ತಿಪರ ಶಿಕ್ಷಣಕ್ಕೆ ಹೊಸ ರೂಪ

01/05/2026 7:41 AM

ನೇಪಾಳದಲ್ಲಿ ಭೀಕರ ದುರಂತ: ಪ್ರಪಾತಕ್ಕೆ ಉರುಳಿದ ಜೀಪು; 20 ಯಾತ್ರಿಕರ ಸಾವು – ರಕ್ಷಣಾ ಕಾರ್ಯಕ್ಕೆ ಅಡ್ಡಿಯಾದ ಮಳೆ!

01/05/2026 7:26 AM

ರಾಜ್ಯದ ಶಾಲಾ ಶಿಕ್ಷಕರಿಗೆ ಎಐ ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಷನ್ ಹಾಜರಾತಿ ಕಡ್ಡಾಯ.!

01/05/2026 7:24 AM
State News
KARNATAKA

ರಾಜ್ಯದ ಶಾಲಾ ಶಿಕ್ಷಕರಿಗೆ ಎಐ ಆಧಾರಿತ ‘ಕರ್ತವ್ಯ’ ಮೊಬೈಲ್ ಅಪ್ಲಿಕೇಷನ್ ಹಾಜರಾತಿ ಕಡ್ಡಾಯ.!

By kannadanewsnow5701/05/2026 7:24 AM KARNATAKA 1 Min Read

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿಗಳ ಹಾಜರಾತಿ ವ್ಯವಸ್ಥೆಯಲ್ಲಿ ಸರ್ಕಾರ ಮಹತ್ವದ ಬದಲಾವಣೆ ತಂದಿದೆ.…

BIG NEWS : ವಿಚ್ಛೇದನಕ್ಕೆ ಮದುವೆ ನೋಂದಣಿ ಕಡ್ಡಾಯವಲ್ಲ : ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು

01/05/2026 7:21 AM

ಮಾನವನ ದೇಹದ ಅತ್ಯಂತ ದುಬಾರಿ ಅಂಗ ಯಾವುದು? ಕೋಟಿ ಕೋಟಿ ಬೆಲೆ ಬಾಳುವ ಆ ರಹಸ್ಯ ಇಲ್ಲಿದೆ!

01/05/2026 7:09 AM

ಕಾವೇರಿ 2.0 : ರಾಜ್ಯದಲ್ಲೇ ಮೊದಲ ಬಾರಿಗೆ ಕಾಗದರಹಿತ `ಆಸ್ತಿ ನೋಂದಣಿ’ ವ್ಯವಸ್ಥೆಗೆ ಚಾಲನೆ

01/05/2026 6:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.