ಬೆಂಗಳೂರು : ಹೆತ್ತ ಮಗುವನ್ನೇ ಕೊಲೆ ಮಾಡಿ ಚೀಲದಲ್ಲಿ ತುಂಬಿಕೊಂಡು ಬರುವಾಗ ಸಿಕ್ಕಿಬಿದ್ದಿದ್ದ ಬೆಂಗಳೂರಿನ ಖಾಸಗಿ ಕಂಪನಿ ಸಿಇಒ ಆರೋಪಿ ಸುಚನಾ ಸೇಠ್ ವಿರುದ್ಧ ಇದೀಗ ಗೋವಾ ಪೊಲೀಸರು ನ್ಯಾಯಾಲಯಕ್ಕೆ 642 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
BREAKING : ರಾಜ್ಯದಲ್ಲಿ ಮತ್ತೊಂದು ಘೋರ ದುರಂತ : ವಿಜಯಪುರದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಬಾಲಕ
ಗೋವಾ ಮಕ್ಕಳ ನ್ಯಾಯಾಲಯದಲ್ಲಿ ಆರೋಪಿ ತಾಯಿ ವಿರುದ್ಧ 642 ಪುಟಗಳ ಚಾರ್ಜ್‌ಶೀಟ್ ಅನ್ನು ಕಲ್ಲಂಗೂಟ್ ಪೊಲೀಸರು ಸಲ್ಲಿಸಿದ್ದು, ಆಕೆ ತನ್ನ ಮಗನನ್ನು ಹೇಗೆ ಕೊಲೆ ಮಾಡಿದಳು, ನಂತರ ತಪ್ಪಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ನಡೆಸಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಸುಚನಾ ಸೇಠ್ ನ್ಯಾಯಾಂಗ ಬಂಧನದಲ್ಲಿದ್ದು, ಇವರ ಬಗ್ಗೆ 59 ಸಾಕ್ಷಿಗಳನ್ನು ಪರಿಗಣಿಸಲಾಗಿದ್ದು ಜೂನ್ 14 ರಂದು ಕೋರ್ಟ್‌ನಲ್ಲಿ ವಿಚಾರಣೆ ಪ್ರಾರಂಭವಾಗಲಿದೆ.
BIG NEWS : ತೈವಾನ್ ನಲ್ಲಿ ಭೀಕರ ಭೂಕಂಪದಿಂದ ಸಾವು, ನೋವು : ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಸುಚನಾ ಸೇಠ್ ತನ್ನ ಮಗುವನ್ನು ಸಾಯಿಸುದಕ್ಕೂ ಮುನ್ನ ಮಗುವಿಗೆ ಕೆಮ್ಮಿನ ಸಿರಪ್ ನೀಡಲಾಗಿತ್ತು. ಬಳಿಕ ಬಟ್ಟೆಯನ್ನು ಮುಖಕ್ಕೆ ಸುತ್ತಿ ಹಾಗೂ ದಿಂಬನ್ನು ಬಳಸಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಚಾರ್ಜ್ ಶೀಟ್ ಅಲ್ಲಿ ಉಲ್ಲೇಖಿಸಿದ್ದಾರೆ. ಸುಚನಾ ಅವರು ತನ್ನ ಪತಿಯೊಂದಿಗೆ ವೈಷಮ್ಯದ ಬಗ್ಗೆ ಹೋಟೆಲ್ ಟಿಶ್ಯೂ ಪೇಪರ್ ಮೇಲೆ ಬರೆದುಕೊಂಡಿದ್ದರು.