ಕೊಚ್ಚಿ: ಇಲ್ಲಿನ ವಿಮಾನ ನಿಲ್ದಾಣಕ್ಕೆ ಶಾರ್ಜಾದಿಂದ ಆಗಮಿಸಿದಂತ ವಿಮಾನದಿಂದ ಹೈಡ್ರಾಲಿಕ್ ವೈಫಲ್ಯ ( hydraulic failure ) ವರದಿಯಾದ ನಂತರ ಸಂಪೂರ್ಣ ತುರ್ತುಸ್ಥಿತಿಯನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ( Kochi airport ) ಘೋಷಿಸಲಾಗಿದೆ.
BIG NEWS: ಕರ್ನಾಟಕದ ಐಐಎಸ್ಸಿ ಭಾರತದಲ್ಲೇ ಅತ್ಯುತ್ತಮ: ಮೈಸೂರು ವಿಶ್ವವಿದ್ಯಾಲಯ, ಮಣಿಪಾಲ್ ಅಕಾಡೆಮಿಗೂ ಸ್ಥಾನ
ಈ ಬಗ್ಗೆ ಕೊಚ್ಚಿನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ಕೊಚ್ಚಿಯಿಂದ ಹೊರಟಿದ್ದ ಏರ್ ಅರೇಬಿಯಾ ವಿಮಾನ (ಜಿ9-426) ಯುಎಇಯ ಶಾರ್ಜಾದಿಂದ ಹೊರಟು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ಹೈಡ್ರಾಲಿಕ್ ವೈಫಲ್ಯ ಅನುಭವಿಸಿದೆ. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ವಿಮಾನದಲ್ಲಿದ್ದ ಎಲ್ಲಾ 222 ಪ್ರಯಾಣಿಕರು ಮತ್ತು 7 ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.
‘ಸರ್ಕಾರಿ ಕಚೇರಿ’ಯಲ್ಲಿ ಫೋಟೋ-ವಿಡಿಯೋ ನಿಷೇಧ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಕೊಟ್ಟಂತೆ – ದಿನೇಶ್ ಗುಂಡೂರಾವ್ ಕಿಡಿ
ದೇಶದಲ್ಲಿ ವಿಮಾನಗಳ ಅವಘಡ ಮುಂದುವರೆದಿದೆ. ಈ ಹಿಂದೆ ಸ್ಪೈಸ್ ಜೆಟ್ ಸೇರಿದಂತೆ ಹಲವು ವಿಮಾನಗಳು ತಾಂತ್ರಿಕ ದೋಷದ ಕಾರಣದಿಂದಾಗಿ ತುರ್ತು ಭೂ ಸ್ಪರ್ಷ ಮಾಡಿದ್ದವು. ದೊಡ್ಡ ಅನಾಹುತಗಳು ತಪ್ಪಿದ್ದವು. ಇಂದು ಕೂಡ ಅದೇ ಮಾದರಿಯಲ್ಲಿನ ದೊಡ್ಡ ಅನಾಹುತವೊಂದು ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದೆ.
A Kochi-bound Air Arabia flight (G9- 426) departed from Sharjah in UAE and had a hydraulic failure while landing at Kochi airport, today evening. The aircraft landed safely. All 222 passengers and 7 crew members on board are safe: Cochin International Airport Authority pic.twitter.com/1bGS7xygTY
— ANI (@ANI) July 15, 2022