Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

BIG NEWS: ಗೃಹಿಣಿಯರ ಶ್ರಮಕ್ಕೆ ತಿಂಗಳಿಗೆ ₹30,000 ಮೌಲ್ಯ ನಿಗದಿ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು!

BREAKING : ಹಾಸನದಲ್ಲಿ ಹಲ್ಲಿ ಬಿದ್ದ ಊಟ ಮಾಡಿ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಹಣ್ಣುಗಳ ಮೇಲಿರುವ ಸ್ಟಿಕ್ಕರ್ ಎಚ್ಚರಿಕೆ! ತಿನ್ನುವ ಮುನ್ನ ತೆಗೆಯದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: FSSAI ಖಡಕ್ ಸೂಚನೆ
INDIA

ಹಣ್ಣುಗಳ ಮೇಲಿರುವ ಸ್ಟಿಕ್ಕರ್ ಎಚ್ಚರಿಕೆ! ತಿನ್ನುವ ಮುನ್ನ ತೆಗೆಯದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: FSSAI ಖಡಕ್ ಸೂಚನೆ

By ಗೋಪಾಲ್‌ ಎನ್‌

ನವದೆಹಲಿ: ಅಂಗಡಿ ಅಥವಾ ಸೂಪರ್ ಮಾರ್ಕೆಟ್‌ಗಳಲ್ಲಿ ನಾವು ಹಣ್ಣುಗಳನ್ನು ಕೊಳ್ಳುವಾಗ ಅವುಗಳ ಮೇಲೆ ಸಣ್ಣ ಸ್ಟಿಕ್ಕರ್‌ಗಳನ್ನು ನೋಡಿರುತ್ತೇವೆ. ಇವು ಹಣ್ಣಿನ ಗುಣಮಟ್ಟವನ್ನು ಸೂಚಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಆದರೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಈಗ ಈ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ. ಹಣ್ಣುಗಳನ್ನು ತಿನ್ನುವ ಮೊದಲು ಈ ಸ್ಟಿಕ್ಕರ್‌ಗಳನ್ನು ಸರಿಯಾಗಿ ತೆಗೆಯದಿದ್ದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ಸ್ಟಿಕ್ಕರ್‌ಗಳನ್ನು ಹಣ್ಣಿಗೆ ಅಂಟಿಸಲು ಬಳಸುವ ಅಂಟು ಅಥವಾ ಗಮ್ ಆಹಾರ ಯೋಗ್ಯವಲ್ಲದ ರಾಸಾಯನಿಕಗಳನ್ನು ಒಳಗೊಂಡಿರುತ್ತದೆ. ಈ ಅಂಟು ಹಣ್ಣಿನ ಸಿಪ್ಪೆಯ ಮೂಲಕ ಒಳಭಾಗಕ್ಕೂ ಸೇರುವ ಸಾಧ್ಯತೆಯಿರುತ್ತದೆ. ಇದು ದೇಹ ಸೇರಿದರೆ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಅನೇಕ ವ್ಯಾಪಾರಿಗಳು ಹಣ್ಣುಗಳು ‘ಫ್ರೆಶ್’ ಅಥವಾ ‘ಪ್ರೀಮಿಯಂ’ ಎಂದು ತೋರಿಸಲು ಇಂತಹ ಸ್ಟಿಕ್ಕರ್ ಬಳಸುತ್ತಾರೆ. ಆದರೆ, ವಾಸ್ತವದಲ್ಲಿ ಹಣ್ಣಿನ ಮೇಲಿರುವ ಕೊಳೆ, ಕಲೆ ಅಥವಾ ಹಣ್ಣು ಕೊಳೆಯುತ್ತಿರುವುದನ್ನು ಮುಚ್ಚಿಡಲು ಇವುಗಳನ್ನು ಬಳಸುವ ಸಾಧ್ಯತೆಯೂ ಇರುತ್ತದೆ. ಈ ಸ್ಟಿಕ್ಕರ್‌ಗಳ ಅಂಚಿನಲ್ಲಿ ಧೂಳು, ಬ್ಯಾಕ್ಟೀರಿಯಾ ಮತ್ತು ಕೀಟನಾಶಕಗಳ ಅಂಶಗಳು ಸುಲಭವಾಗಿ ಅಂಟಿಕೊಳ್ಳುತ್ತವೆ. ಹಣ್ಣನ್ನು ತೊಳೆಯುವಾಗಲೂ ಇವು ಸ್ಟಿಕ್ಕರ್ ಅಡಿಯಲ್ಲಿ ಉಳಿದುಕೊಳ್ಳಬಹುದು.
​ಸುರಕ್ಷಿತವಾಗಿ ಹಣ್ಣು ಸೇವಿಸಲು ಇಲ್ಲಿವೆ ಟಿಪ್ಸ್:
​ಸ್ಟಿಕ್ಕರ್ ಭಾಗವನ್ನು ಕತ್ತರಿಸಿ: ಕೇವಲ ಸ್ಟಿಕ್ಕರ್ ತೆಗೆದರೆ ಸಾಲದು, ಆ ಸ್ಟಿಕ್ಕರ್ ಅಂಟಿಸಲಾಗಿದ್ದ ಹಣ್ಣಿನ ಸಿಪ್ಪೆಯ ಭಾಗವನ್ನು ಸ್ವಲ್ಪ ಮಟ್ಟಿಗೆ ಕತ್ತರಿಸಿ ತೆಗೆಯುವುದು ಉತ್ತಮ.
​ಸಿಪ್ಪೆ ಸುಲಿಯಿರಿ: ಸಾಧ್ಯವಾದಷ್ಟು ಸೇಬು, ಪೇರಳೆ ಅಂತಹ ಹಣ್ಣುಗಳ ಸಿಪ್ಪೆಯನ್ನು ಸುಲಿದು ತಿನ್ನುವುದು ರಾಸಾಯನಿಕಗಳಿಂದ ಬಚಾವಾಗಲು ಉತ್ತಮ ಮಾರ್ಗ.
​ಸರಿಯಾಗಿ ತೊಳೆಯಿರಿ: ಹಣ್ಣುಗಳನ್ನು ಕನಿಷ್ಠ 5 ನಿಮಿಷಗಳ ಕಾಲ ಹರಿಯುವ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಕೇವಲ ನೀರು ಚಿಮುಕಿಸುವುದು ಸಾಕಾಗುವುದಿಲ್ಲ.
​ಸ್ಟಿಕ್ಕರ್ ನೋಡಿ ಮೋಸಹೋಗಬೇಡಿ: ಹಣ್ಣಿನ ಮೇಲಿರುವ ಸ್ಟಿಕ್ಕರ್ ಅದು ಉತ್ತಮ ಗುಣಮಟ್ಟದ್ದು ಎಂಬುದಕ್ಕೆ ಗ್ಯಾರಂಟಿ ಅಲ್ಲ. ಹಣ್ಣಿನ ಬಣ್ಣ, ವಾಸನೆ ಮತ್ತು ಸ್ಪರ್ಶದ ಮೂಲಕ ಅದರ ಗುಣಮಟ್ಟ ಪರೀಕ್ಷಿಸಿ.

FSSAI Issues Urgent Alert: Why You Must Remove Fruit Stickers Before Eating Hidden Health Risks Revealed
Share. Facebook Twitter LinkedIn WhatsApp Email

Related Posts

BIG NEWS: ಗೃಹಿಣಿಯರ ಶ್ರಮಕ್ಕೆ ತಿಂಗಳಿಗೆ ₹30,000 ಮೌಲ್ಯ ನಿಗದಿ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು!

2 Mins Read

BREAKING : ಹಾರ್ಮುಜ್ ಜಲಸಂಧಿ ಬಳಿ ವಾಣಿಜ್ಯ ನೌಕೆ ಮೇಲೆ ಅಮೆರಿಕ ಕ್ಷಿಪಣಿ ದಾಳಿ: ಮೂವರು ಭಾರತೀಯ ನಾವಿಕರು ದುರ್ಮರಣ

1 Min Read
BREAKING NEWS

BREAKING : ಅಮೇರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ : ಹೊತ್ತಿ ಉರಿದ 2 ಸೇನಾ ನೆಲೆಗಳು!

2 Mins Read
Recent News

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

BIG NEWS: ಗೃಹಿಣಿಯರ ಶ್ರಮಕ್ಕೆ ತಿಂಗಳಿಗೆ ₹30,000 ಮೌಲ್ಯ ನಿಗದಿ : ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು!

BREAKING : ಹಾಸನದಲ್ಲಿ ಹಲ್ಲಿ ಬಿದ್ದ ಊಟ ಮಾಡಿ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು!

BREAKING : ಹಾರ್ಮುಜ್ ಜಲಸಂಧಿ ಬಳಿ ವಾಣಿಜ್ಯ ನೌಕೆ ಮೇಲೆ ಅಮೆರಿಕ ಕ್ಷಿಪಣಿ ದಾಳಿ: ಮೂವರು ಭಾರತೀಯ ನಾವಿಕರು ದುರ್ಮರಣ

State News
KARNATAKA

ಧರ್ಮಸ್ಥಳದಲ್ಲಿ ಪವಾಡ : ಬರೋಬ್ಬರಿ 26 ವರ್ಷಗಳ ಬಳಿಕ ಕುಟುಂಬ ಸೇರಿದ ವ್ಯಕ್ತಿ : ಕೊನೆಗೂ ಫಲಿಸಿತು ತಾಯಿ ಹರಕೆ!

By ಸುರೇಶ್‌ KARNATAKA 1 Min Read

ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ಪವಾಡ ಒಂದು ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ…

BREAKING : ಹಾಸನದಲ್ಲಿ ಹಲ್ಲಿ ಬಿದ್ದ ಊಟ ಮಾಡಿ 15ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು!

ALERT : ದಿನವೂ `ಪ್ಲಾಸ್ಟಿಕ್ ಬಾಟಲಿ ನೀರು’ ಕುಡಿಯುವವರೇ ಎಚ್ಚರ : ಈ 10 ಆರೋಗ್ಯ ಸಮಸ್ಯೆಗಳು ನಿಮ್ಮನ್ನೂ ಕಾಡಬಹುದು!

ಶಿವಮೊಗ್ಗ : ಜೈಲಲ್ಲಿದ್ದಾಗ ನೋಡಲು ಬಂದಿಲ್ಲವೆಂದು ಪತ್ನಿಗೆ ಬೆದರಿಸಲು ಕಳುಹಿಸಿದ್ದ ಬುರ್ಖಾಧಾರಿಗಳಿಗೆ ಹಿಗ್ಗಾಮುಗ್ಗಾ ಥಳಿತ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.