Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

BREAKING NEWS

BREAKING : ಅಮೇರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ : ಹೊತ್ತಿ ಉರಿದ 2 ಸೇನಾ ನೆಲೆಗಳು!

BREAKING : ಹಾವೇರಿಯಲ್ಲಿ ನಿಧಿ ಆಸೆಗೆ ಬಸವೇಶ್ವರ, ಈಶ್ವರ ಮೂರ್ತಿ ಕಿತ್ತು ಹಾಕಿದ ದುಷ್ಕರ್ಮಿಗಳು : ನಾಲ್ವರು ಅರೆಸ್ಟ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಅಮೇರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ : ಹೊತ್ತಿ ಉರಿದ 2 ಸೇನಾ ನೆಲೆಗಳು!
INDIA

BREAKING : ಅಮೇರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ : ಹೊತ್ತಿ ಉರಿದ 2 ಸೇನಾ ನೆಲೆಗಳು!

By ಸುರೇಶ್‌
BREAKING NEWS
BREAKING NEWS

ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಯುದ್ಧದ ಕಿಡಿ ಹೊತ್ತಿಕೊಂಡಿದೆ. ಬಹರೈನ್‌ನಲ್ಲಿರುವ ಅಮೆರಿಕಾದ ಪ್ರಮುಖ ಸೇನಾ ನೆಲೆಯ ಮೇಲೆ ಭೀಕರ ಡ್ರೋನ್ ದಾಳಿ ನಡೆದಿದ್ದು, ಇರಾನ್ ನಡೆಸಿದ ಈ ದಿಢೀರ್ ವಾಯುದಾಳಿಗೆ ಅಮೆರಿಕ ಸೇನಾ ನೆಲೆ ಹೊತ್ತಿ ಉರಿದಿದೆ ಎಂದು ವರದಿಯಾಗಿದೆ. ಬಹರೈನ್‌ನ ಇಸಾ ಏರ್‌ಬೇಸ್ (Isa Air Base) ಅನ್ನು ಗುರಿಯಾಗಿಸಿಕೊಂಡು ಇರಾನ್ ಈ ಭೀಕರ ದಾಳಿಯನ್ನು ಸಂಘಟಿಸಿದೆ.

ಪ್ರತಿದಾಳಿ ನಡೆಸಿದ ಇರಾನ್: ಇತ್ತೀಚೆಗಷ್ಟೇ ಇರಾನ್‌ನ ಕರಾಜ್ ಮತ್ತು ಹೊರ್ಮುಝ್ ಪ್ರದೇಶಗಳ ಮೇಲೆ ನಡೆದಿದ್ದ ದಾಳಿಗೆ ಪ್ರತಿಯಾಗಿ ಇರಾನ್ ಈ ಆಪರೇಷನ್ ಕೈಗೊಂಡಿದೆ ಎನ್ನಲಾಗಿದೆ. ತನ್ನ ದೇಶದ ಮೇಲಿನ ದಾಳಿಗೆ ತಕ್ಕ ಪಾಠ ಕಲಿಸಲು ಸಜ್ಜಾಗಿದ್ದ ಇರಾನ್, ಅಮೆರಿಕಾದ ಮಿಲಿಟರಿ ತಾಣಗಳನ್ನೇ ಟಾರ್ಗೆಟ್ ಮಾಡಿ ಈ ಪ್ರತಿದಾಳಿ ನೆರವೇರಿಸಿದೆ. ಈ ದಾಳಿಯಿಂದಾಗಿ ಬಹರೈನ್ ವಾಯುನೆಲೆಯಲ್ಲಿ ಭಾರಿ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಹಾಗೂ ಹಾನಿ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.

ಕುವೈತ್ ನೆಲೆಗಳ ಮೇಲೂ ಏಕಕಾಲಕ್ಕೆ ದಾಳಿ: ಇರಾನ್‌ನ ಆಕ್ರೋಶ ಕೇವಲ ಬಹರೈನ್‌ಗೆ ಮಾತ್ರ ಸೀಮಿತವಾಗಿಲ್ಲ. ಇದೇ ವೇಳೆ ಕುವೈತ್‌ನಲ್ಲಿರುವ ಅಮೆರಿಕಾದ ಆಯಕಟ್ಟಿನ ಸೇನಾ ನೆಲೆಗಳ ಮೇಲೂ ಇರಾನ್ ಡ್ರೋನ್‌ಗಳು ಮುಗಿಬಿದ್ದಿವೆ. ಕುವೈತ್‌ನಲ್ಲಿರುವ ಅಮೆರಿಕಾದ ಎರಡು ಪ್ರಮುಖ ವಾಯು ನೆಲೆಗಳ ಮೇಲೆ ಏಕಕಾಲಕ್ಕೆ ಇರಾನ್ ಪಡೆಗಳು ದಾಳಿ ನಡೆಸಿ ಧ್ವಂಸಗೊಳಿಸಿವೆ.

ಅಲಿ ಅಲ್ ಸಲೀಂ ಮತ್ತು ಅಹಮದ್ ಜಬೇರ್ ವಾಯುನೆಲೆಗಳು ಧ್ವಂಸ: ಕುವೈತ್‌ನಲ್ಲಿರುವ ಅತ್ಯಂತ ಸುರಕ್ಷಿತ ಎನ್ನಲಾಗುವ ‘ಅಲಿ ಅಲ್ ಸಲೀಂ’ (Ali Al Salem Air Base) ಮತ್ತು ‘ಅಹಮದ್ ಅಲ್ ಜಬೇರ್’ (Ahmad al-Jaber Air Base) ವಾಯು ನೆಲೆಗಳ ಮೇಲೆ ಇರಾನ್ ಪಡೆಗಳು ಏಕಕಾಲದಲ್ಲಿ ಭೀಕರವಾಗಿ ದಾಳಿ ಮಾಡಿವೆ. ಈ ಎರಡೂ ವಾಯುನೆಲೆಗಳು ಅಮೆರಿಕಾದ ವಾಯುಸೇನಾ ಕಾರ್ಯಾಚರಣೆಗೆ ಅತ್ಯಂತ ಪ್ರಮುಖವಾಗಿದ್ದವು. ಇರಾನ್‌ನ ಈ ರಣತಂತ್ರದ ದಾಳಿಯು ಅಮೆರಿಕಾಗೆ ದೊಡ್ಡ ಆಘಾತವನ್ನು ನೀಡಿದೆ.

ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ: ಇರಾನ್‌ನ ಈ ಸರಣಿ ಡ್ರೋನ್ ದಾಳಿಗಳಿಂದಾಗಿ ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ಯುದ್ಧದ ಭೀತಿ ಎದುರಾಗಿದೆ. ಅಮೆರಿಕಾದ ರಕ್ಷಣಾ ಇಲಾಖೆ ಹಾಗೂ ಸೇನಾ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಮೂಡಿದೆ. ಇರಾನ್‌ನ ಈ ದಿಟ್ಟ ಸರಣಿ ದಾಳಿಗೆ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಹೇಗೆ ಪ್ರತಿಕ್ರಿಯಿಸಲಿವೆ ಎಂಬುದರ ಮೇಲೆ ಮುಂದಿನ ಜಾಗತಿಕ ಸ್ಥಿತ್ಯಂತರಗಳು ನಿರ್ಧಾರವಾಗಲಿವೆ.

Share. Facebook Twitter LinkedIn WhatsApp Email

Related Posts

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಕೇವಲ 3 ತಿಂಗಳಲ್ಲಿ ಚಿನ್ನ 17 ಸಾವಿರ, ಬೆಳ್ಳಿ 50 ಸಾವಿರ ರೂ.ಇಳಿಕೆ.!

2 Mins Read

BIG NEWS : ಭಾರತದ ಮಾವಿನ ಹಣ್ಣುಗಳ ಆಮದು ನಿಷೇಧಿಸಿದ ನೇಪಾಳ.!

2 Mins Read

BREAKING : ತಿಪಟೂರು ಶಾಸಕ ಷಡಕ್ಷರಿ ಆರೋಗ್ಯದಲ್ಲಿ ಏರುಪೇರು : ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ!

1 Min Read
Recent News

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

BREAKING NEWS

BREAKING : ಅಮೇರಿಕ ಸೇನಾ ನೆಲೆಗಳ ಮೇಲೆ ಇರಾನ್ ಭೀಕರ ಡ್ರೋನ್ ದಾಳಿ : ಹೊತ್ತಿ ಉರಿದ 2 ಸೇನಾ ನೆಲೆಗಳು!

BREAKING : ಹಾವೇರಿಯಲ್ಲಿ ನಿಧಿ ಆಸೆಗೆ ಬಸವೇಶ್ವರ, ಈಶ್ವರ ಮೂರ್ತಿ ಕಿತ್ತು ಹಾಕಿದ ದುಷ್ಕರ್ಮಿಗಳು : ನಾಲ್ವರು ಅರೆಸ್ಟ್!

ಆಭರಣ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್ : ಕೇವಲ 3 ತಿಂಗಳಲ್ಲಿ ಚಿನ್ನ 17 ಸಾವಿರ, ಬೆಳ್ಳಿ 50 ಸಾವಿರ ರೂ.ಇಳಿಕೆ.!

State News
KARNATAKA

BIG NEWS : ಪೋಷಕರೇ ಗಮನಿಸಿ : 18 ವರ್ಷ ದಾಟಿದ ಮಕ್ಕಳಿಗೆ ತಪ್ಪದೇ ಈ 4 ಸರ್ಕಾರಿ ದಾಖಲೆಗಳನ್ನು ಮಾಡಿಸಿ.!

By kannadanewsnow57 KARNATAKA 2 Mins Read

ಬೆಂಗಳೂರು : ಮಕ್ಕಳು 18 ವರ್ಷ ಪೂರೈಸಿದ ತಕ್ಷಣ ಕಾನೂನುಬದ್ಧವಾಗಿ ವಯಸ್ಕರಾಗುತ್ತಾರೆ. ಭಾರತದಲ್ಲಿ 18 ವರ್ಷ ದಾಟುತ್ತಿದ್ದಂತೆ ಹಲವು ಕಾನೂನು…

BREAKING : ಹಾವೇರಿಯಲ್ಲಿ ನಿಧಿ ಆಸೆಗೆ ಬಸವೇಶ್ವರ, ಈಶ್ವರ ಮೂರ್ತಿ ಕಿತ್ತು ಹಾಕಿದ ದುಷ್ಕರ್ಮಿಗಳು : ನಾಲ್ವರು ಅರೆಸ್ಟ್!

BREAKING : ಬೆಂಗಳೂರಿನಲ್ಲಿ ನಕಲಿ ಅಂಕಪಟ್ಟಿ ಜಾಲ ಪತ್ತೆ: ಸಿಸಿಬಿ ಪೊಲೀಸರಿಂದ ಪ್ರಮುಖ ಆರೋಪಿಯ ಬಂಧನ

ಒಂದೆಡೆ ಜೈಲಲ್ಲಿ ಪುಸ್ತಕ ಓದುತ್ತಾ ಸೈಲೆಂಟ್ ಆದ ನಟ ದರ್ಶನ್ : ಇತ್ತ ಆತ್ಮಚರಿತ್ರೆ ಬರೆಯಲು ಆರಂಭಿಸಿದ ಪವಿತ್ರಾ ಗೌಡ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.