ನವದೆಹಲಿ: ಜನಪ್ರಿಯ ಆಯುರ್ವೇದ ಮೂಲಿಕೆ ‘ಅಶ್ವಗಂಧ’ವನ್ನು ಆಹಾರ ಉತ್ಪನ್ನಗಳಲ್ಲಿ ಬಳಸುವ ಕುರಿತು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಮಹತ್ವದ ಸಲಹೆಗಳನ್ನು ನೀಡಿದೆ. ಆಹಾರ ಪದಾರ್ಥಗಳಲ್ಲಿ ಅಶ್ವಗಂಧದ ಬೇರುಗಳು ಮತ್ತು ಅವುಗಳ ಸಾರವನ್ನು (Extract) ಬಳಸಲು ಮಾತ್ರ ಅನುಮತಿ ನೀಡಲಾಗಿದ್ದು, ಎಲೆಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಅಶ್ವಗಂಧದ ಎಲೆಗಳನ್ನು ಯಾವುದೇ ರೂಪದಲ್ಲಿ (ಹಸಿ ಎಲೆ, ಪುಡಿ ಅಥವಾ ಸಾರ) ಆರೋಗ್ಯ ಪೂರಕ ಆಹಾರಗಳು (Supplements) ಅಥವಾ ನ್ಯೂಟ್ರಾಸ್ಯುಟಿಕಲ್ಸ್‌ಗಳಲ್ಲಿ ಬಳಸುವಂತಿಲ್ಲ.
ಅಶ್ವಗಂಧದ ಎಲೆಗಳಲ್ಲಿ ಹೆಚ್ಚಿನ ಪ್ರಮಾಣದ ರಾಸಾಯನಿಕ ಅಂಶಗಳಿದ್ದು (Withanolides), ಅವು ಯಕೃತ್ತಿನ (Liver) ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಅಥವಾ ವಿಷಕಾರಿಯಾಗಬಹುದು ಎಂಬ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರ ಆಯುಷ್ ಸಚಿವಾಲಯವು ಕೂಡ ಈ ಹಿಂದೆ ಅಶ್ವಗಂಧದ ಎಲೆಗಳ ಬಳಕೆಯನ್ನು ಮಾಡದಂತೆ ಸೂಚಿಸಿತ್ತು. ಈಗ FSSAI ಅದನ್ನು ಆಹಾರ ನಿಯಮಾವಳಿಗಳ ಅಡಿಯಲ್ಲಿ ಜಾರಿಗೆ ತಂದಿದೆ.








