ದೆಹಲಿ: ಗುರುವಾರ ದೆಹಲಿ-ಮೀರತ್ ಎಕ್ಸ್ಪ್ರೆಸ್ವೇ (ಡಿಎಂಇ) ನಲ್ಲಿ ಭೀಕರ ಅಪಘಾತ ನಡೆದಿದೆ. ನಿಂತಿದ್ದ ಟ್ರಕ್ಗೆ ಎಸ್ಯುವಿ ಕಾರು ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಕುಶಾಲಿಯಾ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐವರಿದ್ದ ಎಸ್ಯುವಿ ಟ್ರಕ್ಗೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ವೇಳೆ 10 ವರ್ಷದ ಬಾಲಕಿಯೊಬ್ಬಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸುಮಿತ್ (34), ಯಾಗಿತ್ (7), ತೇಜ್ಪಾಲ್ (48) ಮತ್ತು ಅವರ ಪತ್ನಿ ಬಬ್ಲಿ (40) ಎಂದು ಗುರುತಿಸಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಅಪಘಾತದ ನಂತರ ಅಪರಿಚಿತ ಟ್ರಕ್ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದ, ತನಿಖೆ ಮುಂದುವರೆದಿದೆ.
Shocking News : ಫೈಜರ್ ಲಸಿಕೆ ಪಡೆದ ಶೇ.40ರಷ್ಟು ಮಹಿಳೆಯರಿಗೆ ಗರ್ಭಪಾತ ; ಶಾಕಿಂಗ್ ವರದಿ
Shocking News : ವಿಚಿತ್ರವಾದ್ರೂ ಸತ್ಯ ; ಯುವಕ ತಬ್ಬಿದ ಪೋರ್ಸ್ಗೆ ಯುವತಿ ಎದೆಯ ಮೂರು ಮೂಳೆ ಪೀಸ್.!