ಬೆಂಗಳೂರು: ಅಗತ್ಯ ಮೂಲಸೌಕರ್ಯದ ಕೊರತೆ ಹಿನ್ನಲೆಯಲ್ಲಿ ರಾಜ್ಯದ ನಾಲ್ಕು ಎಂಜಿನಿಯರಿಂಗ್ ಕಾಲೇಜಗಳಿಗೆ ( Engineering College ) ವಿಟಿಯು ( VTU ) ಬೀಗ ಜಡಿದಿದೆ. ಜೊತೆಗೆ 2022-23ನೇ ಶೈಕ್ಷಣಿಕ ಸಾಲಿನಲ್ಲಿ ಈ ನಾಲ್ಕು ಕಾಲೇಜುಗಳಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಎಚ್ಚರಿಕೆ ನೀಡಿದೆ.
ಮೈಸೂರು ದಸರಾ 2022: ಇಂದು ಅರಮನೆಗೆ ದಸರಾ ಗಜಪಡೆಗಳ ಆಗಮನ
ಮೂಲ ಸೌಕರ್ಯ ಕೊರತೆಯ ಹಿನ್ನಲೆಯಲ್ಲಿ ಕಾರವಾರದ ಗಿರಿಜಾ ಬಾಯಿ ಸೈಲ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ, ಬೆಂಗಳೂರಿನ ಆಚ್ಯುತಾ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆಜಿಎಫ್ ನ ಶ್ರೀವಿನಾಯಕ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ತಿಪಟೂರಿನ ಶ್ರೀಬಸವೇಶ್ವರ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಮಾನ್ಯತೆಯನ್ನು ವಿಟಿಯು ರದ್ದುಗೊಳಿಸಿದೆ.
ಇನ್ಮುಂದೆ ‘ಎಲ್ಲಾ ಎಲೆಕ್ಟ್ರಾನಿಕ್ ಉಪಕರಣ’ಕ್ಕೂ ಒಂದೇ ಮಾದರಿಯ ‘ಚಾರ್ಜರ್’.! | One charger for all gadgets
ಇದಲ್ಲದೇ ಈ ಕಾಲೇಜುಗಳಿಗೆ 2022-23ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ, 3ನೇ ಸೆಮಿಸ್ಟರ್ ಲ್ಯಾಟರ್ ಎಂಟ್ರಿ ಪ್ರವೇಶವನ್ನು ರದ್ದು ಮಾಡಿದೆ. ಈ ಕಾಲೇಜುಗಳಿಗೆ 2022-23ನೇ ಸಾಲಿನಲ್ಲಿ ಸೀಟುಗಳ ಹಂಚಿಕೆ ಮಾಡದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೂ ವಿಟಿಯು ಮನವಿ ಮಾಡಿದೆ.
Rain in Karnataka: ಇಂದಿನಿಂದ ರಾಜ್ಯದಲ್ಲಿ ತಗ್ಗಲಿದೆ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ