ಶಿವಮೊಗ್ಗ: ಶಾಸಕ ಹಾಲಪ್ಪನವರಿಗೆ ಆಗಾಗ ಅತ್ಯಾಚಾರದ ಕೇಸಿನ ನೆನಪಾಗುತ್ತದೆ. ಅದಕ್ಕಾಗಿ ಅವರು ನನ್ನ ಮೇಲೆ ಸುಳ್ಳು ಅತ್ಯಾಚಾರದ ಕೇಸ್ ಹಾಕಲು ಮತ್ತು ಎಲ್ ಬಿ ಕಾಲೇಜಿನ ಗಲಾಟೆ ವೇಳೆ ನನ್ನ ಮೇಲೆ ಕೇಸ್ ಪ್ರಯತ್ನ ನೆಡೆಯುತ್ತಿದೆ ಎಂಬುದಾಗಿ ಸಾಗರ ಶಾಸಕ ಹರತಾಳು ಹಾಲಪ್ಪ ವಿರುದ್ಧ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ವಾಗ್ದಾಳಿ ನಡೆಸಿದ್ದಾರೆ.
ಇಂದು ಸಾಗರದ ಪತ್ರಿಕಾ ಭವನದಲ್ಲಿ ನೆಡೆದ ಸುದ್ದಿ ಗೊಷ್ಟಿಯಲ್ಲಿ ಮಾತನಾಡಿದ ಅವರು, ಎಲ್ ಬಿ ಕಾಲೇಜಿನ ಗಲಾಟೆಯಲ್ಲಿ ಶಾಸಕ ಹಾಲಪ್ಪನವರ ಪಾತ್ರ ಇದ್ದರು, ಅವರ ಮೇಲೆ ಪ್ರಕರಣ ದಾಖಲಾಗಿಲ್ಲ. ಎಲ್ ಬಿ ಕಾಲೇಜಿನ ನೆಡೆದ ಗಲಾಟೆಯ ಒಂದು ಘಂಟೆ ವಿಡಿಯೋ ನಮ್ಮ ಬಳಿ ಇದೆ ಎಂಬುದಾಗಿ ಸ್ಪೋಟಕ ಬಾಂಬ್ ಸಿಡಿಸಿದರು.
ಕಚ್ಚೆಹರುಕ ಸಾಗರದ ಶಾಸಕ ಹಾಲಪ್ಪ
ಶಾಸಕ ಹಾಲಪ್ಪನವರಿಗೆ ಆಗಾಗ ಅತ್ಯಾಚಾರದ ಕೇಸಿನ ನೆನಪಾಗುತ್ತದೆ. ಅದಕ್ಕಾಗಿ ಅವರು ನನ್ನ ಮೇಲೆ ಸುಳ್ಳು ಅತ್ಯಾಚಾರದ ಕೇಸ್ ಹಾಕಲು ಮತ್ತು ಎಲ್ ಬಿ ಕಾಲೇಜಿನ ಗಲಾಟೆ ವೇಳೆ ನನ್ನ ಮೇಲೆ ಕೇಸ್ ಪ್ರಯತ್ನ ನೆಡೆಯುತ್ತಿದೆ. ಈ ಹಿಂದೆ ಅತ್ಯಾಚಾರ ಕೇಸ್ ವಿಚಾರದಲ್ಲಿ ಪ್ರತಿಯಾಗಿ ಅವರ ಕಛೇರಿಗೆ ಯುವತಿಯನ್ನು ನುಗ್ಗಿಸಿ ವೆಂಕಟೇಶ್ ಮೇಲೆ ಸುಳ್ಳು ಕೇಸ್ ಹಾಕಿಸಿದ್ದರು ಎಂಬುದಾಗಿ ಗಂಭೀರ ಆರೋಪ ಮಾಡಿದರು.
ಸಾಗರ ತಾಲೂಕಿನಲ್ಲಿ ಬೀಕರ ಮಳೆಯಿಂದ ಜನ ಮನೆ ಕಳೆದುಕೊಂಡ ಸ್ಥಿತಿಯಲ್ಲಿ ಇದ್ದರು, ಬಾತ್ ರೂಂ ಮತ್ತು ಲೈಟ್ ಕಂಬ ಉದ್ಘಾಟನೆ ಮಾಡಿ ಪೋಸ್ ಕೊಡುತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಓಸಿ ರಾಜ ಬಿ ಜೆ ಪಿ ಗಲಾಟೆಗೆ ಹಣ ನೀಡುತ್ತಾನೆ. ಅವನು ಓಸಿ ದಂಧೆ ನೆಡೆಸಿದರು. ಓಸಿ ರಾಜನ ಮೇಲೆ ಪೋಲಿಸ್ ಇಲಾಖೆ ಯಾವುದೇ ಕ್ರಮ ತೆಗದುಕೊಳ್ಳಬಾರದೆಂದು ಶಾಸಕ ಒತ್ತಡ ಹೇರುತಿದ್ದಾರೆ ಎಂದು ಕಿಡಿಕಾರಿದರು.
ವರದಿ : ಉಮೇಶ್ ಮೊಗವೀರ, ಸಾಗರ