ಕಾರವಾರ: ಶಿಕ್ಷಕ ದಿನಾಚರಣೆಯಂದೇ ( Teacher Day 2022 ) ಮಾಜಿ ಶಿಕ್ಷಣ ಸಚಿವ ಪ್ರಭಾಕರ ರಾಣೆ ( Farmer Education Minister Prabhakar Rane ) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದಂತ ಮಾಜಿ ಶಿಕ್ಷಣ ಸಚಿವ ಪ್ರಭಾಕರ್ ರಾಣೆ ಅವರು, ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಹೀಗೆ ಚಿಕಿತ್ಸೆ ಪಡೆಯುತ್ತಿದ್ದಂತ ಅವರು, ಇಂದು ಚಿಕಿತ್ಸೆ ಫಲಿಸದೇ ನಿಧನರಾಗಿರೋದಾಗಿ ತಿಳಿದು ಬಂದಿದೆ.
ಅಂದಹಾಗೇ 1983ರಿಂದ ಮೂರು ಬಾರಿಗೆ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಪ್ರಭಾಕರ್ ರಾಣೆ, ಕಾರವಾರ-ಜೊಯಿಡಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1993ರಲ್ಲಿ ವೀರಪ್ಪ ಮೊಯ್ಲಿ ಅವರು ಸಿಎಂ ಆಗಿದ್ದಂತ ಸಂದರ್ಭದಲ್ಲಿ ಶಿಕ್ಷಣ ಸಚಿವರಾಗಿದ್ದರು.
ಈ KSRTC ಚಾಲಕ, ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆಗಳ ಮಹಾಪೂರ: ನಿಗಮದಿಂದಲೂ ಅಭಿನಂದನೆ