ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಟ ದರ್ಶನ್ ಸೇರಿದಂತೆ ಎಲ್ಲಾ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇದೀಗ ಮಾಜಿ ಉಪಮೇಯರು ಒಬ್ಬರು ನಟ ದರ್ಶನ್ ಅವರಿಗೆ ಹಣ ಸಹಾಯ ಮಾಡಿದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಅವರಿಗೆ ವಿಚಾರಣೆ ಹಾಜರಾಗಿ ಎಂದು ನೋಟಿಸ್ ನೀಡಿತ್ತು.
ಹೌದು ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಅವರಿಗೆ ಮಾಜಿ ಉಪಮೇಯರ್ ಮೋಹನ್ ರಾಜ್ ಅವರು ದರ್ಶನ್ ಅವರಿಗೆ 40 ಲಕ್ಷ ಹಣ ನೀಡಿದ್ದರು ಎಂದು ಆರೋಪ ಕೇಳಿಬಂದಿದೆ. ಹಾಗಾಗಿ ಉಪ ಮೇಯರ್ ಮೋಹನ್ ರಾಜ್ ಇದಿ ಪೊಲೀಸ್ ವಿಚಾರಣೆಗೆ ಹಾಜರಾಗಿದ್ದಾರೆ.
ರೇಣುಕಾ ಸ್ವಾಮಿ ಕೊಲೆಯಾದ ದಿನದಂದೇ ದರ್ಶನ್ ಅವರು ಮೋಹನ್ ರಾಜ್ ಅವರ ಬಳಿ ನಲವತ್ತು ಲಕ್ಷ ಯಾಕೆ ತೆಗೆದುಕೊಂಡರು? ಹಾಗೂ ಏನು ಕಾರಣ ಎಂಬುದರ ಕುರಿತು ಪೊಲೀಸರು ಉಪಮೇಯರ್ ಮೋಹನ್ ರಾಜ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಮಾಜಿ ಉಪಮೇಯ ಮೋಹನ್ ರಾಜ್ ಇದೀಗ ಬೆಂಗಳೂರಿನ ಬಸವೇಶ್ವರ ಠಾಣೆಗೆ ಹಾಜರಾಗಿದ್ದಾರೆ. ನಟ ದರ್ಶನ್ ಗೆ ಸಂಬಂಧಪಟ್ಟಂತೆ ಮೋಹನ್ ರಾಜ್ ಅವರು 40 ಲಕ್ಷ ರೂಪಾಯಿ ಹಣ ನೀಡಿದ್ದರು. ನೋಟಿಸ್ ನೀಡಿದ ಬೆನ್ನೆಲು ಇದೀಗ ಉಪಮೇಯರ್ ಮೋಹನ್ ರಾಜ್ ಬಸವೇಶ್ವರನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾರೆ.