ಬೆಂಗಳೂರು: ನಮಗೆ ನಮ್ಮ ಪಕ್ಷ ಹಾಗೂ ರಾಹುಲ್ ಗಾಂಧಿ ( Rahul Gandhi ) ಅವರ ಸಿದ್ಧಾಂತ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇದ್ದು, ನಮಗೆ ಭಾರತ ಜೋಡೋ ಯಾತ್ರೆಯಲ್ಲಿ ಸಿಕ್ಕಿರುವ ಜನಮನ್ನಣೆ ಪಕ್ಷದ ಬಲವರ್ದನೆಗೆ ಉತ್ತೇಜನವಾಗಿದೆ. ಬಿಜೆಪಿ ( BJP ) ಸ್ನೇಹಿತರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕೇ ಹೊರತು ಪಲಾಯನ ವಾದ ಮಾಡಬಾರದು ಎಂಬುದಾಗಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ರಮೇಶ್ ಬಾಬು ( Ramesh Babu ) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಬಿಜೆಪಿ 2008, 2013 ಹಾಗೂ 2018ರ ಚುನಾವಣೆ ಸಮಯದಲ್ಲಿ ಸಂಕಲ್ಪದ ಹೆಸರಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಅದ್ಯಾವುದನ್ನು ಜಾರಿಗೊಳಿಸದೇ ಈಗ ಜನಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿ ಜನಸಂಕಲ್ಪ ಯಾತ್ರೆ ಮಾಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಬಿಜೆಪಿಯ ಪ್ರಣಾಳಿಕೆ ವಿಚಾರವಾಗಿ ಕಾಂಗ್ರೆಸ್ ಪಕ್ಷ ನಿಮ್ಮ ಬಳಿ ಇದೆಯಾ ಉತ್ತರ ಎಂಬ ಸಾಮಾಜಿಕ ಜಾಲತಾಣದಲ್ಲಿ ಆಂದೋಲನ ಮಾಡುತ್ತಿದ್ದು, ಇದುವರೆಗೂ ಸುಮಾರು 50 ಪ್ರಶ್ನೆಗಳನ್ನು ಕೇಳಲಾಗಿದ್ದು, ಅವುಗಳಲ್ಲಿ ಒಂದಕ್ಕೂ ಉತ್ತರ ನೀಡಿಲ್ಲ ಎಂದರು.
ʻಆಧಾರ್ ಕಾರ್ಡ್ʼನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ | Aadhaar Card
ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ, ನಳೀನ್ ಕುಮಾರ್ ಕಟೀಲ್, ಯಡಿಯೂರಪ್ಪ, ಶ್ರೀರಾಮುಲು ಅವರು ಸಂಕಲ್ಪ ಯಾತ್ರೆಯಲ್ಲಿ ಮಾತನಾಡುತ್ತಿರುವ ಮಾತುಗಳು ಕೇಶವಕೃಪದಿಂದ ಬಂದಿರುವ ಸ್ಕ್ರಿಪ್ಟ್ ಆಗಿದ್ದು, ಸರ್ಕಾರ ತಮ್ಮ ಸಾಧನೆ ಹೇಳುವ ಬದಲು ಕಾಂಗ್ರೆಸ್ ನಾಯಕರ ವಿರುದ್ಧ ವೈಯಕ್ತಿಕ ಟೀಕೆಗಳನ್ನಷ್ಟೇ ಮಾಡುತ್ತಿದ್ದಾರೆ. ನಮಗೆ ವೈಯಕ್ತಿಕ ಟೀಕೆ ಮೇಲೆ ಆಸಕ್ತಿ ಇಲ್ಲ. ಹೀಗಾಗಿ ನಾವು ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ಅಬ್ಬಬ್ಬಾ..! ಬರೀ ‘ಗುಜರಿ’ ಮಾರಿ 6 ತಿಂಗಳಲ್ಲಿ ‘ರೈಲ್ವೇ ಇಲಾಖೆ’ ಗಳಿಸಿದ ಆದಾಯವೆಷ್ಟು ಗೊತ್ತಾ..? |Indian Railways
ನಮಗೆ ನಮ್ಮ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ಸಿದ್ಧಾಂತ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇದ್ದು, ನಮಗೆ ಭಾರತ ಜೋಡೋ ಯಾತ್ರೆಯಲ್ಲಿ ಸಿಕ್ಕಿರುವ ಜನಮನ್ನಣೆ ಪಕ್ಷದ ಬಲವರ್ದನೆಗೆ ಉತ್ತೇಜನವಾಗಿದೆ. ಬಿಜೆಪಿ ಸ್ನೇಹಿತರು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡಬೇಕೇ ಹೊರತು ಪಲಾಯನ ವಾದ ಮಾಡಬಾರದು. ಬೊಮ್ಮಾಯಿ ಅವರು ಗುರುತರವಾದ ಭ್ರಷ್ಟಾಚಾರ ಆರೋಪಕ್ಕೆ ಸ್ಪಷ್ಟನೆ ನೀಡದೇ, ರಾಹುಲ್ ಗಾಂಧಿ ಅವರನ್ನು ಪ್ರಶ್ನಿಸುತ್ತಿದ್ದಾರೆ. ಗುತ್ತಿಗೆದಾರರ ಸಂಘ, ಶಾಲಾ ಆಡಳಿತ ಮಂಡಳಿ ಸಂಘ ಸೇರಿದಂತೆ ಹಲವರ ಆರೋಪಗಳ ಬಗ್ಗೆ ಬಿಟ್ ಕಾಯಿನ್ ಹಗರಣದಿಂದ, ಸಹಾಯಕ ಪ್ರಾದ್ಯಾಪಕ, ಪಿಡಬ್ಲ್ಯೂಡಿ, ಪಿಎಸ್ಐ, ನೀರಾವರಿ ಇಲಾಖೆ ಅಕ್ರಮಗಶು, ನಿಮ್ಮ ಪಕ್ಷದವರು ಎತ್ತಿರುವ ಅನುಮಾನಗಳಿಗೆ ಬಿಜೆಪಿ ಉತ್ತರಿಸಬೇಕಿದೆ ಎಂದು ಆಗ್ರಹಿಸಿದರು.