ಬೆಂಗಳೂರು: ರಾಜ್ಯಾಧ್ಯಂತ ಭಾರೀ ಮಳೆಯಿಂದಾಗಿ ( Heavy Rain ) ಜನ ಜೀವನ ತತ್ತರಿಸಿ ಹೋಗುವಂತೆ ಆಗಿದೆ. ಮಳೆಯಿಂದಾಗಿ ನೀರು ನಿಂತ ಪ್ರದೇಶಗಳಲ್ಲಿ ಸಾಂಗ್ರಾಮಿಕ ರೋಗಗಳು( Infectious disease ), ಡೆಂಗ್ಯೂ( Dengue ), ಮಲೇರಿಯಾದಂತ ( Malaria ) ರೋಗಗಳ ಸಂಖ್ಯೆ ಕೂಡ ಉಲ್ಬಣಿಸುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆಯಿಂದ ( Karnataka Health Department ) ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹಾಗೂ ನಿರ್ವಹಣೆಗಾಗಿ ಮಾರ್ಗಸೂಚಿಯನ್ನು ಪ್ರಕಟಿಸಿದೆ.
ಬಿಜೆಪಿ ‘ಜನೋತ್ಸವ ಕಾರ್ಯಕ್ರಮ’ದ ಹೆಸರು ‘ಜನಸ್ಪಂದನ’ವಾಗಿ ಬದಲು: ಸೆ.10ರ ‘ಶನಿವಾರ’ದಂದು ಕಾರ್ಯಕ್ರಮ ಫಿಕ್ಸ್
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಪ್ರವಾಹ, ನೆರೆಯಿಂದ ಉಂಟಾಗ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಅಧಿಕವಾಗಿರುತ್ತದೆ. ಈ ಹಿನ್ನಲೆಯಲ್ಲಿ ಪರಿಸ್ಥಿತಿ ತುರ್ತಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಹಾಗೂ ನಿರ್ವಹಮೆಗಾಗಿ ಸನ್ನದ್ಧವಾಗುವಂತೆ ತಿಳಿಸಿದ್ದಾರೆ.
ಇನ್ನೂ ಸಾಂಕ್ರಾಮಿಕ ರೋಗಗಳ ನಿರ್ವಹಣೆಗಾಗಿ ಸಮಗ್ರ ಕ್ರಿಯಾ ಯೋಜನೆಯನ್ನು ಆರೋಗ್ಯ ಕೇಂದ್ರಗಳಲ್ಲಿ ಕೈಗೊಳ್ಳುವುದು. ಆ ಯೋಜನೆಯಂತೆ ಮಾನವ ಸಂಪನ್ಮೂಲ, ಟೆಸ್ಟಿಂಗ್ ಕಿಟ್, ಔಷಧಿಗಳು, ರಾಸಾಯನಿಕ, ಉಪಕರಣಗಳು ಹಾಗೂ ಪ್ರಮಾಣಿತ ಕಾರ್ಯಾಚರಣ ವಿಧಾನಗಳನ್ನು ಕೈಗೊಳ್ಳುವಂತೆ ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗಗಳ ಚಿಕಿತ್ಸೆ ಮತ್ತು ನಿರ್ವಹಣೆಯನ್ನು ಎನ್ ಸಿ ಡಿಸಿ ಹಾಗೂ ಎನ್ ಸಿ ವಿಬಿಡಿ ಸಿ ಭಾರತ ಮತ್ತು ಈ ನಿರ್ದೇಶನಾಲಯದಿಂದ ಸೂಚಿಸಿರುವ ಪ್ರಾಮಾಣಿತ ಕಾರ್ಯಾಚರಣ ವಿಧಾನಗಳ ಅನ್ವಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ನಡೆಸಬೇಕು. ಯಾವುದೇ ರೀತಿಯ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ, ತಾಲೂಕು ಮಟ್ಟದ ತ್ವರಿತ ಪ್ರತಿಕ್ರಿಯಾ ತಂಡಗಳು ಅಗತ್ಯ ಔಷಧಗಳು, ಸಲಕರಣೆಗಳು, ವಾಹನ ಸೌಲಭ್ಯದೊಂದಿಗೆ ಸನ್ನದ್ಧವಾಗಿರುವಂತೆ ಸೂಚಿಸಿದ್ದಾರೆ.
ವರದಿ : ವಸಂತ ಬಿ ಈಶ್ವರಗೆರೆ