ಕತಾರ್: ಫಿಫಾ ಫುಟ್ಬಾಲ್ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಮೊರೊಕ್ಕೊ ವಿರುದ್ಧ ಭರ್ಜರಿ ಜಯ ಗಳಿಸಿ ಫೈನಲ್ಗೆ ಎಂಟ್ರಿ ಕೊಟ್ಟಿರುವ ಫ್ರಾನ್ಸ್ ತಂಡಕ್ಕೆ ಇದೀಗ ಫೈನಲ್ ಪಂದ್ಯಕ್ಕೂ ಮುನ್ನವೇ ‘ಐವರು ಆಟಗಾರರು ಅಸ್ವಸ್ಥ’ಗೊಂಡಿದ್ದು, ಹೆಚ್ಚು ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.!
ಈಗಾಗಲೇ ಫಿಫಾ ವಿಶ್ವಕಪ್ ಫೈನಲ್ ಹಂತದ ವರೆಗೆ ಸಾಗಿದೆ. ಫೈನಲ್ಗೆ ಫ್ರಾನ್ಸ್ ಮತ್ತು ಅರ್ಜೆಂಟಿನಾ ತಂಡಗಳು ಲಗ್ಗೆ ಇಟ್ಟಿವೆ. ಡಿ.18 ಭಾನುವಾರ ಫೈನಲ್ ಪಂದ್ಯ ನಡೆಯಲಿದೆ. ಆದರೆ ಫೈನಲ್ ಪಂದ್ಯವಾಡಲು ಸಿದ್ಧವಾಗುತ್ತಿರುವ ಫ್ರಾನ್ಸ್ನ 5 ಮಂದಿ ಆಟಗಾರರು ವಿಪರೀತ ಶೀತದಿಂದ ಬಳಲುತ್ತಿದ್ದಾರೆ. ರಾಫೆಲ್ ವರಾನೆ, ಇಬ್ರಾಹಿಂ ಕೋನಾಟೆ, ದಯೋಟ್ ಉಪಮೆಕಾನೊ, ಆಡ್ರಿಯನ್ ರಾಬಿಯೊಟ್ ಮತ್ತು ಕಿಂಗ್ಸ್ಲಿ ಕೋಮನ್ ಸೇರಿ ಐವರು ಅಸ್ವಸ್ಥಗೊಂಡು ತಂಡದಿಂದ ದೂರ ಉಳಿದಿದ್ದಾರೆ.
‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.!
ದಯೋಟ್ ಉಪಮೆಕಾನೊ, ಆಡ್ರಿಯನ್ ರಾಬಿಯೊಟ್ ಮತ್ತು ಕಿಂಗ್ಸ್ಲಿ ಕೋಮನ್ ಮೂವರಿಗೆ ಅನಾರೋಗ್ಯ ಕಾಡಿತ್ತು. ಬಳಿಕ ರಾಫೆಲ್ ವರಾನೆ ಮತ್ತು ಇಬ್ರಾಹಿಂ ಕೋನಾಟೆಗೂ ಹರಡಿತ್ತು. ಹಾಗಾಗಿ ಈಗಾಗಲೇ ಈ ಐವರ ಮೇಲೆ ತಂಡದ ಆರೋಗ್ಯ ಸಿಬ್ಬಂದಿ ಹೆಚ್ಚಿನ ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಟ ಆಡುತ್ತಾರಾ ಅನ್ನೋದನ್ನು ಕಾದು ನೋಡಬೇಕಾಗಿದೆ
‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.!