ಕೊಲ್ಲಂ: ಆತ ಮೀನು ವ್ಯಾಪಾರ ಮಾಡಿಕೊಂಡಿದ್ದ. ಈ ವ್ಯಾಪಾರಕ್ಕಾಗಿ ಮಾಡಿದಂತ ಸಾಲವನ್ನು ತೀರಿಸದ ಕಾರಣ, ಮನೆ ಜಪ್ತಿಗೂ ಬ್ಯಾಂಕ್ ನೋಟಿಸ್ ನೀಡಿತ್ತು. ಇನ್ನಾವುದೇ ಮಾರ್ಗ ತಿಳಿಯದೇ ಮನೆ ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸೋ ಯೋಚನೆಯಲ್ಲಿ ಇದ್ದವನಿಗೆ ಅದೃಷ್ಟ ಖುಲಾಯಿಸಿದೆ. ಬರೋಬ್ಬರಿ 70 ಲಕ್ಷ ಲಾಟರಿ ಹೊಡೆದಿದೆ. ಅದೆಲ್ಲಿ ಎನ್ನುವ ಬಗ್ಗೆ ಮುಂದೆ ಓದಿ..
Rain In Karnataka : ರಾಜ್ಯದಲ್ಲಿ ಇನ್ನೂ 6 ದಿನ ಭಾರೀ ಮಳೆ : ಈ ಜಿಲ್ಲೆಗಳಲ್ಲಿ `ಯೆಲ್ಲೋ ಅಲರ್ಟ್’ ಘೋಷಣೆ
ಕೇರಳದ ಕೊಲ್ಲಂನ ಮೀನು ಪೊಕುಂಜು ಮೀನು ವ್ಯಾಪಾರ ಮಾಡಿಕೊಂಡಿದ್ದನು. ಮೀನು ವ್ಯಾಪಾರಕ್ಕಾಗಿ ಬ್ಯಾಂಕ್ ನಿಂದ ಪಡೆದಂತ ಸಾಲ ತೀರಿಸಲು ಆಗಿರಲಿಲ್ಲ. ಹೀಗೆ ಇರುವಾಗಲೇ ಮೀನು ಮಾರಾಟ ಮಾಡೋದಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ದಾರಿಯಲ್ಲಿ ಸಿಕ್ಕಂತ ಲಾಟರಿ ಮಾರಾಟಗಾರನಿಂದ ಅಕ್ಷಯ್ ಲಾಟರಿ ಖರೀದಿಸಿದ್ದನು.
ಮೀನು ಮಾರಾಟ ಮಾಡಿ ಮನೆಗೆ ವಾಪಾಸ್ ಬರುವ ವೇಳೆಗೆ ಬ್ಯಾಂಕ್ ನಿಂದ ಪಡೆದಂತ ಸಾಲ ತೀರಿಸದ ಕಾರಣ, ಮನೆ ಜಪ್ತಿಯ ನೋಟಿಸ್ ಬಂದಿತ್ತು. ಈ ನೋಟಿಸ್ ಕಂಡು ಶಾಕ್ ಆದಂತ ಆತ, ಮನೆಯನ್ನು ಮಾರಾಟ ಮಾಡಿ ಬ್ಯಾಂಕ್ ಸಾಲ ತೀರಿಸೋ ನಿರ್ಧಾರ ಕೈಗೊಂಡಿದ್ದನು.
BIG NEWS : ತಮಿಳುನಾಡಿನಲ್ಲಿ 60ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳಿಗೆ ವಾಂತಿ-ಭೇದಿ, ಆಸ್ಪತ್ರೆಗೆ ದಾಖಲು
ಮನೆಯನ್ನು ಮಾರಾಟ ಮಾಡಿ, ಸಾಲ ತೀರಿಸೋ ಯೋಚನೆಯಲ್ಲಿದ್ದಂತ ಪೊಕುಂಜಗೆ ತಾನು ಖರೀದಿಸಿದಂತ ಲಾಟರಿ ಟಿಕೆಟ್ ಫಲಿತಾಂಶ ಏನಾಗಿದೆ ಎಂದು ನೋಡಿದಾಗ, ಆತ ಟಿಕೆಟ್ ಖರೀದಿಸಿದಂತ ಕೆಲವೇ ಗಂಟೆಯಲ್ಲಿ ಮೊದಲ ಬಹುಮಾನ ಬಂದಿತ್ತು. ಬರೋಬ್ಬರಿ 70 ಲಕ್ಷ ರೂ ಲಾಟರಿ ಬಹುಮಾನ ಬಂದಿದೆ. ಈ ಮೂಲಕ ಮೀನು ಮಾರಾಟಗಾರ ಅದೃಷ್ಠವನ್ನು ಚಾಕ್ ಪಾಟ್ ಖುಲಾಯಿಸಿದೆ.