ಮುಂಬೈ: ಮುಂಬೈನ ಘಾಟ್ಕೋಪರ್ನಲ್ಲಿರುವ ಪಾರೇಖ್ ಆಸ್ಪತ್ರೆ ಬಳಿ ಅಗ್ನಿ ಅವಘಡ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳು ಜಮಾಹಿವೆ.
ಸಮೀಪದ ವಿಶ್ವಾಸ್ ಕಟ್ಟಡದಲ್ಲಿರುವ ಜುನೋಸ್ ಪಿಜ್ಜಾ ರೆಸ್ಟೊರೆಂಟ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಘಟನೆಯಲ್ಲಿ ಗಾಯಗೊಂಡ 22ಕ್ಕೂ ಅಧಿಕ ಜನರನ್ನು ಪರಾಖ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಂಬೈ ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
#WATCH | Maharashtra: Fire breaks out near Parekh Hospital in Mumbai's Ghatkopar. Eight fire tenders have reached the spot. Further details awaited: Mumbai Fire Brigade pic.twitter.com/iiKUAIGEAh
— ANI (@ANI) December 17, 2022
ಘಟನೆಯಲ್ಲಿ ಇದುವರೆಗೂ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಘಾಟ್ಕೋಪರ್ ಪೂರ್ವ ಪ್ರದೇಶದಲ್ಲಿರುವ ಗ್ರೌಂಡ್ ಪ್ಲಸ್ ಆರು ಅಂತಸ್ತಿನ ವಿಶ್ವಾಸ್ ಕಟ್ಟಡದ ವಿದ್ಯುತ್ ಮೀಟರ್ ಕೋಣೆಯಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಪೊಲೀಸರು ಸ್ಥಳದಲ್ಲಿದ್ದು ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.
ಗುರುವಾರ ಮಧ್ಯ ಮುಂಬೈನ 61 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ನಂತರ ಈ ಘಟನೆ ನಡೆದಿದೆ.
‘ಯುವತಿ’ಯಲ್ಲಿ ಈ ಗುಣಗಳಿದ್ರೆ, ಮದುವೆಯಾಗೋಕೆ ಹಿಂಜರಿಯ್ಬೇಡಿ ; ಯುವಕರಿಗೆ ‘ಆಚಾರ್ಯ ಚಾಣಕ್ಯರ’ ಸಲಹೆ.!
ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಈಗ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕವೂ ಮಾನಸಿಕ ಆರೋಗ್ಯ ಸೇವೆ ಲಭ್ಯ