Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬಗ್ಗೆ ನನಗೆ ‘ಅಸೂಯೆ’ ಇಲ್ಲ: ಸೂಪರ್‌ಸ್ಟಾರ್ ರಜನಿಕಾಂತ್ ಸ್ಪಷ್ಟನೆ

ಹೋರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿ ದಾಟಿ ಗುಜರಾತ್‌ನ ಕಂಡ್ಲಾ ಬಂದರು ತಲುಪಿದ ಎಲ್‌ಪಿಜಿ ನೌಕೆ ‘ಸಿಮಿ’!

​’ನೀಟ್ ಪೇಪರ್ ಲೀಕ್’ ತನಿಖೆ ಚುರುಕು: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಿಬಿಐ ಮೆಗಾ ದಾಳಿ, ತೀವ್ರಗೊಂಡ ಶೋಧ ಕಾರ್ಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ‘ಸಿಎಂ ಸಿದ್ಧರಾಮಯ್ಯ ನಕಲಿ ಶಿಫಾರಸ್ಸು ಪತ್ರ’ ಹಂಚಿದವರ ವಿರುದ್ಧ ‘FIR’ ದಾಖಲು
KARNATAKA

BREAKING: ‘ಸಿಎಂ ಸಿದ್ಧರಾಮಯ್ಯ ನಕಲಿ ಶಿಫಾರಸ್ಸು ಪತ್ರ’ ಹಂಚಿದವರ ವಿರುದ್ಧ ‘FIR’ ದಾಖಲು

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಆರೋಗ್ಯ ಇಲಾಖೆಯಿಂದ ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಲು ಶಿಫಾರಸ್ಸು ಮಾಡಿದಂತ ಪತ್ರವೊಂದು ವೈರಲ್ ಆಗಿತ್ತು. ಇದೇ ಪತ್ರವನ್ನು ಶಾಸಕ ಸುನೀಲ್ ಕುಮಾರ್ ಕಾರ್ಕಳ ಕೂಡ ಶೇರ್ ಮಾಡಿ, ಸಿಎಂ ವಿರುದ್ಧ ಕಿಡಿಕಾರಿದ್ದರು. ಈ ಬೆನ್ನಲ್ಲೇ ನಕಲಿ ಶಿಫಾರಸ್ಸು ಪತ್ರ ಸಿದ್ಧಮಾಡಿ, ಹಂಚಿದವರ ವಿರುದ್ಧ ಸರ್ಕಾರ ಎಫ್ಐಆರ್ ದಾಖಲಿಸಿದೆ.

ಈ ಕುರಿತಂತೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವಾಗಿಸುವ ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ಮತ್ತೊಂದು ವಿಫಲ ಹುನ್ನಾರವಿದು. ಸುನೀಲ್ ಕುಮಾರ್ ಅವರೇ, ದಿನಾಂಕವಿಲ್ಲದ, ರೆಫರೆನ್ಸ್ ಸಂಖ್ಯೆಯಿಲ್ಲದ ಒಂದು ನಕಲಿ ಪತ್ರವನ್ನು ಹಿಡಿದು ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿರುವ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಲು ನಮ್ಮ ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂಬುದು ತಿಳಿಯದಷ್ಟು ಬೌದ್ಧಿಕ ದಿವಾಳಿತನವೇ? ಈ ನಕಲಿ ಪತ್ರದ ಬಗ್ಗೆ ನಮ್ಮ ಮುಖ್ಯಮಂತ್ರಿ ಕಾರ್ಯಾಲಯದಿಂದ ಈಗಾಗಲೇ ದೂರು ದಾಖಲಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿರುವ ‘ಪರಶುರಾಮ ಥೀಮ್ ಪಾರ್ಕ್’ ನಲ್ಲಿ ಅನಾಥವಾಗಿರುವ ಪರುಶುರಾಮ ಪ್ರತಿಮೆ ಬಗ್ಗೆ ನಿಜವಾಗಿ ನೀವು ವಿಚಾರಮಾಡಬೇಕಾದದ್ದು. ಕಿಕ್ ಬ್ಯಾಕ್ ಅನುಮಾನ ಇರುವುದು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ, ಥೀಮ್ ಪಾರ್ಕ್ ನಿರ್ಮಾಣ ಯೋಜನೆಯಲ್ಲಿ. ದೊಡ್ಡ ಸಂಭ್ರಮದ ಕಾರ್ಯಕ್ರಮ ಮಾಡಿ ʼಕೊಡಲಿ ಹಿಡಿದ ಪರುಶುರಾಮʼನನ್ನೇ ಅತಂತ್ರ ಮಾಡಿದ ಮಹಾನುಭಾವರು ನೀವು… ಪರಶುರಾಮನ ಪಂಚೇಂದ್ರಿಯಕ್ಕೂ (ಪಂಚ ಅಂಗಕ್ಕೂ) ಅಪಚಾರ ಮಾಡಿದ ನಿಮ್ಮಿಂದ ನೈತಿಕತೆ, ಪಾರದರ್ಶಕ ಆಡಳಿತದ ಪಾಠ ಕಲಿಯಬೇಕಾದ ದಿವಾಳಿತನ ನಮ್ಮ ಸರ್ಕಾರಕ್ಕಾಗಲಿ, ಜನನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲಿ – ನನಗಾಗಲಿ ಇಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.

ಸಾರ್ವಜನಿಕರ ಹಣವನ್ನು ನುಂಗುವುದು ‘ಕ್ರಿಮಿನಲ್ ಅಫೆನ್ಸ್’ ಎಂದು ನ್ಯಾಯಾಧೀಶರೇ ಹೇಳಿರುವಾಗ ನಾಚಿಕೆ ಬಿಟ್ಟು ನಕಲಿ ದಾಖಲೆಗಳೊಂದಿಗೆ ತಿರುಗಾಡುತ್ತಿದ್ದೀರಿ. ನಮ್ಮ ಇಲಾಖೆ ಬಗ್ಗೆ ಸುಳ್ಳು ಹರಡುವ ಮೊದಲು, ನ್ಯಾಯಾಲಯದಲ್ಲಿ ನಿಮ್ಮ ಹಗರಣಗಳಿಗೆ ಉತ್ತರ ನೀಡಲು ಸಿದ್ಧರಾಗಿ. ಸತ್ಯದ ಕುಣಿಕೆಯಲ್ಲಿ ಬಿದ್ದಿರುವ ನಿಮ್ಮ ಸುಳ್ಳುಗಳ ಸರಮಾಲೆಯನ್ನು ಕಂಡು ರೇಜಿಗೆಯಾಗಿದೆ ಎಂದು ಗುಡುಗಿದ್ದಾರೆ.

ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರು, ಶುಶ್ರೂಷಕರು ಸೇರಿದಂತೆ 5600ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಕೌನ್ಸಿಲಿಂಗ್‌ ಮೂಲಕ ವರ್ಗಾವಣೆ ಮಾಡಿ ಆಡಳಿತಕ್ಕೆ ಪಾರದರ್ಶಕತೆ ತಂದ ಹೆಗ್ಗಳಿಕೆ ನಮ್ಮದು ಎಂದಿದ್ದಾರೆ.

ಈ ಜ್ವಲಂತ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇದೆಯಾ?

* ಸುನೀಲ್‌ ಕುಮಾರ್‌ ಅವ್ರೆ, ನೀವು ಇಂಧನ ಸಚಿವರಾಗಿದ್ದಾಗ ರಾಜ್ಯದಲ್ಲಿ ಎಷ್ಟು ಪ್ರಮಾಣದ ವಿದ್ಯುತ್‌ ಉದ್ಪಾದನೆ ಮಾಡಿದ್ರೀ?

* ಕೌನ್ಸಿಲಿಂಗ್‌ ಮೂಲಕ ಎಷ್ಟು ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡಿದ್ರೀ?

* ಇಂಧನ ಇಲಾಖೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ರೀ?

* ಕಾರ್ಕಳದ ಜನರು ಮತ ಕೊಟ್ಟು ಗೆಲ್ಲಿಸಿದ್ದಕ್ಕಾಗಿ ಋಣಭಾರ ಕಮ್ಮಿ ಮಾಡಿಕೊಳ್ಳುವುದಕ್ಕಾದರೂ ಉಡುಪಿ ಜಿಲ್ಲೆಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ?

ಇವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಈ ರೀತಿ ನಿರಂತರವಾಗಿ ಆತ್ಮವಂಚನೆ ಮಾಡಿಕೊಂಡು, ನಂಬಿದವರಿಗೂ ವಂಚಿಸಿ ಜನರ ಮಧ್ಯೆ ಅದೇಗೇ ತಿರುಗಾಡುವಿರಿ??!! ಎಂಬುದಾಗಿ ಪ್ರಶ್ನಿಸಿದ್ದಾರೆ.

ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವಾಗಿಸುವ ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ಮತ್ತೊಂದು ವಿಫಲ ಹುನ್ನಾರವಿದು. ಸನ್ಮಾನ್ಯ @SunilKumarK ಅವರೇ, ದಿನಾಂಕವಿಲ್ಲದ, ರೆಫರೆನ್ಸ್ ಸಂಖ್ಯೆಯಿಲ್ಲದ ಒಂದು ನಕಲಿ ಪತ್ರವನ್ನು ಹಿಡಿದು ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿರುವ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ? ಆರೋಗ್ಯ ಇಲಾಖೆಯ… https://t.co/o3XvnYVOvt pic.twitter.com/Ma55QHB5IN

— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) February 13, 2026

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಪರೀಕ್ಷೆ-1ಕ್ಕೆ KSRTC ಬಸ್ಸಲ್ಲಿ ಉಚಿತವಾಗಿ ತೆರಳಲು ಅವಕಾಶ

BIG NEWS : ಇಷ್ಟು ಮೊತ್ತದ ಬ್ಯಾಂಕ್ ವಹಿವಾಟುಗಳಿಗೆ ಇನ್ಮುಂದೆ `ಪ್ಯಾನ್ ಕಾರ್ಡ್’ ಅಗತ್ಯವಿಲ್ಲ : ಹೊಸ ರೂಲ್ಸ್ ಜಾರಿ !

Share. Facebook Twitter LinkedIn WhatsApp Email

Related Posts

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

5 Mins Read

BIG NEWS : 2208ಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ : HD ಕುಮಾರಸ್ವಾಮಿ ಭವಿಷ್ಯ

2 Mins Read

BIG NEWS : ಮೈಸೂರಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ HD ರೇವಣ್ಣ, ಜಿಟಿ ದೇವೇಗೌಡ ಫೋಟೋಗೆ ಕೊಕ್‌!

2 Mins Read
Recent News

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಬಗ್ಗೆ ನನಗೆ ‘ಅಸೂಯೆ’ ಇಲ್ಲ: ಸೂಪರ್‌ಸ್ಟಾರ್ ರಜನಿಕಾಂತ್ ಸ್ಪಷ್ಟನೆ

ಹೋರ್ಮುಜ್ ಜಲಸಂಧಿಯ ಅಪಾಯಕಾರಿ ಹಾದಿ ದಾಟಿ ಗುಜರಾತ್‌ನ ಕಂಡ್ಲಾ ಬಂದರು ತಲುಪಿದ ಎಲ್‌ಪಿಜಿ ನೌಕೆ ‘ಸಿಮಿ’!

​’ನೀಟ್ ಪೇಪರ್ ಲೀಕ್’ ತನಿಖೆ ಚುರುಕು: ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಸಿಬಿಐ ಮೆಗಾ ದಾಳಿ, ತೀವ್ರಗೊಂಡ ಶೋಧ ಕಾರ್ಯ!

ಬಂದೂಕು ತೋರಿಸಿ ಬೆದರಿಸಿದ ದರೋಡೆಕೋರರು: ಪ್ರಾಣದ ಹಂಗು ತೊರೆದು ಕಳ್ಳರನ್ನೇ ಓಡಿಸಿದ ನಾಸಿಕ್ ಜ್ವೆಲ್ಲರಿ ಅಂಗಡಿ ಸಿಬ್ಬಂದಿ!

State News
KARNATAKA

BIG NEWS: ‘ಸಾರಿಗೆ ನೌಕರ’ರೇ ಮುಷ್ಕರ ಒಂದೇ ಪರಿಹಾರವಲ್ಲ: ಅದಕ್ಕೂ ಮೊದಲು ಈ ಸುದ್ದಿ ಓದಿ!

By ವಸಂತ ಬಿ ಈಶ್ವರಗೆರೆ KARNATAKA 5 Mins Read

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು (KSRTC, BMTC, NWKRTC, KKRTC) ರಾಜ್ಯದ ರಕ್ತನಾಳಗಳಿದ್ದಂತೆ. ಪ್ರತಿದಿನ ಲಕ್ಷಾಂತರ ಜನಸಾಮಾನ್ಯರನ್ನು,…

BIG NEWS : 2208ಕ್ಕೆ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ : HD ಕುಮಾರಸ್ವಾಮಿ ಭವಿಷ್ಯ

BIG NEWS : ಮೈಸೂರಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ HD ರೇವಣ್ಣ, ಜಿಟಿ ದೇವೇಗೌಡ ಫೋಟೋಗೆ ಕೊಕ್‌!

ಬೆಂಗಳೂರಲ್ಲಿ ಪ್ರೇಯಸಿ ಕೊಂದು ಕೆರೆಗೆ ಶವ ಎಸೆದು ಪರಾರಿ : ಪ್ರಿಯಕರ ಅರೆಸ್ಟ್!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.