ಬಾಗಲಕೋಟೆ: ಕಾಂಗ್ರೆಸ್ ಮುಖಂಡರ ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶಕ್ಕೆ ಮೊದಲು ಅನುಮತಿ ನೀಡಿ, ಆ ಬಳಿಕ ಟಿಪ್ಪು ಸುಲ್ತಾನ್ ಭಾವಚಿತ್ರ ವಿವಾದದ ಕಾರಣ ತಹಶೀಲ್ದಾರ್ ಅನುಮತಿ ರದ್ದುಪಡಿಸಿದ್ದರು. ಇದರಿಂದ ಕೋಪಗೊಂಡಿದ್ದಂತ ಕಾಂಗ್ರೆಸ್ ನ ಮಾಜಿ ಶಾಸಕ ವಿಜಾಯನಂದ ಕಾಶಪ್ಪನವರು ಸೇರಿದಂತೆ ಅನೇಕರು ತಹಶೀಲ್ದಾರ್ ವಿರುದ್ಧ ಹರಿಹಾಯ್ದಿದ್ದರು. ಜೀವಬೆದರಿಕೆ ಕೂಡ ಹಾಕಿದ್ದರು ಎನ್ನಲಾಗಿದೆ. ಈ ಆರೋಪದಲ್ಲಿ ಇದೀಗ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಮಾದಪ್ಪನ ಹಾಡನ್ನು ಕೆಟ್ಟದಾಗಿ ಬಿಂಬಿಸಿದಾಗ ಎಲ್ಲಿಗೆ ಹೋಗಿತ್ತು ನಿಮ್ಮ ಬುದ್ದಿ ನಟ ರಿಷಬ್ ಶೆಟ್ಟಿ ಜನತೆ ಪ್ರಶ್ನೆ
ನವೆಂಬರ್ 27ರಂದು ಬಾಗಲಕೋಟೆಯ ಇಳಕಲ್ ಪಟ್ಟಣದ ಕಂಠಿ ಸರ್ಕಲ್ ನಲ್ಲಿ ಸರ್ವಧರ್ಮ ಸೌಹಾರ್ದ ಭಾವೈಕ್ಯತಾ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಇಳಕಲ್ ತಹಶೀಲ್ದಾರ್ ಅನುಮತಿ ಕೂಡ ನೀಡಿದ್ದರು. ಆದ್ರೇ ಸಂಘಟಕರು ಸಾಮಾಜಿಕ ಜಾಲತಾಣದಲ್ಲಿ ಟಿಪ್ಪು ಸುಲ್ತಾನ್ ಭಾವಚಿತ್ರ ಹಾಕಿದ್ದ ಕಾರಮ, ಮೆರವಣಿಗೆಯಲ್ಲಿ ಟಿಪ್ಪು ಭಾವಚಿತ್ರ ಕಾಣಿಸಿಕೊಂಡು, ವಿವಾದಕ್ಕೆ ಕಾರಣವಾಗಿ, ಕಾನೂನು ಸುವ್ಯವ್ಥೆಗೆ ಧಕ್ಕೆಯಾಗುವ ಹಿನ್ನಲೆಯಲ್ಲಿ ಅನುಮತಿಯನ್ನು ರದ್ದುಗೊಳಿಸಿದ್ದರು.
ಈ ನಡುವೆಯೂ ಅಕ್ರಮ ಕೂಟ ರಚಿಸಿಕೊಂಡಿದ್ದಂತ ಕಾಂಗ್ರೆಸ್ ನ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಸೇರಿದಂತೆ ಅನೇಕರು ಇಳಕಲ್ ನ ಕಂಠಿ ಸರ್ಕಲ್ ನಲ್ಲಿ ಗುಂಪು ಗೂಡಿ ಕಾರ್ಯಕ್ರಮ ನಡೆಸಿದ್ದರು. ಈ ವೇಳೆ ಇಳಕಲ್ ತಹಶೀಲ್ದಾರ್ ಮೊದಲು ಅನುಮತಿ ನೀಡಿ, ಈಗ ರದ್ದುಪಡಿಸಿದ್ದಾರೆ. ಚುನಾವಣೆ ಹತ್ತಿರವಿದೆ. ನಮ್ಮ ಸರ್ಕಾರ ಬರುತ್ತದೆ. ಆಗ ಈ ತಹಶೀಲ್ದಾರ್ ಎಲ್ಲಿಯೇ ಇದ್ದರೂ ಬಿಡುವುದಿಲ್ಲ ಎಂಬುದಾಗಿ ಹೇಳಿದ್ದರು.
ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆಯ ನೌಕರ ಮಹೇಶ್ ಎಂಬುವರು ಡಿ.1ರಂದು ಇಳಕಲ್ ಪೊಲೀಸ್ ಠಾಣೆಗೆ ತೆರಳಿ ತಹಶೀಲ್ದಾರ್ ಗೆ ಜೀವ ಬೆದರಿಕೆಯ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರನ್ನು ಪ್ರಕರಣದಲ್ಲಿ 2ನೇ ಆರೋಪಿ ಮಾಡಿದ್ದರೇ, ಅವರ ಸಂಬಂಧಿ ಮುತ್ತಣ್ಣ ಕಲ್ಗುಡಿ ಮೊದಲನೇ ಆರೋಪಿ ಮಾಡಿ ಎಫ್ಐಆರ್ ದಾಖಲಿಸಿದ್ದಾರೆ.