Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಕೆನಡಾ ಹೊಸ ಇತಿಹಾಸ: ಬೋಸ್ನಿಯಾ ವಿರುದ್ಧದ ಪಂದ್ಯ ‘ಡ್ರಾ’; ಚೊಚ್ಚಲ ವಿಶ್ವಕಪ್ ಪಾಯಿಂಟ್ ಗೆದ್ದು ಸಂಭ್ರಮಿಸಿದ ಕೆನಡಿಯನ್ನರು!

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

​ಗ್ರಾಹಕರೇ ಎಚ್ಚರ, ಹೋಟೆಲ್ ಹಾಗೂ ಆಹಾರ ಕಂಪನಿಗಳಿಗೆ ಕಟ್ಟುನಿಟ್ಟಿನ ವಾರ್ನಿಂಗ್: ಊಟದಲ್ಲಿ ‘ಪಿನ್’ ಪತ್ತೆಯಾದ ಬೆನ್ನಲ್ಲೇ FSSAI ತುರ್ತು ಆದೇಶ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ನಕಲಿ ನಂದಿನಿ ತುಪ್ಪ ಜಾಲ ಪತ್ತೆ : 8350 ಲೀಟ‌ರ್ ನಕಲಿ ತುಪ್ಪ ಜಪ್ತಿ, ಸಿಸಿಬಿ ಪೊಲೀಸರಿಂದ ನಾಲ್ವರು ಅರೆಸ್ಟ್
KARNATAKA

ಬೆಂಗಳೂರಲ್ಲಿ ನಕಲಿ ನಂದಿನಿ ತುಪ್ಪ ಜಾಲ ಪತ್ತೆ : 8350 ಲೀಟ‌ರ್ ನಕಲಿ ತುಪ್ಪ ಜಪ್ತಿ, ಸಿಸಿಬಿ ಪೊಲೀಸರಿಂದ ನಾಲ್ವರು ಅರೆಸ್ಟ್

By ಸುರೇಶ್‌
Nandini ghee price hiked by Rs 30
Nandini ghee price hiked by Rs 30

ಬೆಂಗಳೂರು : ಕರ್ನಾಟಕ ಹಾಲು ಮಹಾಮಂಡಳದ (ಕೆಎಂಎಫ್) ನಂದಿನಿ ಬ್ಯಾಂಡ್ ಹೆಸರಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿದ್ದ ನಂದಿನಿ ಪಾರ್ಲರ್ ಮಳಿಗೆ ಮಾಲಿಕ ಹಾಗೂ ಆತನ ಮಗ ಸೇರಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆ ಸಮೀಪದ ಅಜಾದ್ ನಗರದ ನಿವಾಸಿ ಮಹೇಂದ್ರ, ಆತನ ಮಗ ದೀಪಕ್, ವಾಹನ ಚಾಲಕ ಮುನಿರಾಜು ಹಾಗೂ ತಮಿಳುನಾಡಿನ ಅಭಿ ಅರಸ್ ಬಂಧಿತನಾಗಿದ್ದು, ಆರೋಪಿಗಳಿಂದ 8,350 ಲೀಟರ್‌ನಕಲಿ ತುಪ್ಪ ಹಾಗೂ ನಾಲ್ಕು ವಾಹನಗಳನ್ನು ಜಪ್ತಿ ಮಾಡಲಾಗಿದೆ. ದಾಳಿ ವೇಳೆ ತಪ್ಪಿಸಿಕೊಂಡಿರುವ ನಕಲಿ ತುಪ್ಪ ತಯಾರಿಕಾ ಘಟಕದ ಮಾಲಿಕ ಶಿವಕುಮಾರ್‌ ಸೇರಿ ಇತರರ ಪತ್ತೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಚಾಮರಾಜಪೇಟೆಯಲ್ಲಿ ಆರೋಪಿ ಮಹೇಂದ್ರ ಹೊಂದಿದ್ದ ನಂದಿನಿ ಪಾರ್ಲರ್ ನಲ್ಲಿ ನಕಲಿ ತುಪ್ಪ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಶುಕ್ರವಾರ ಸಿಸಿಬಿ ಹಾಗೂ ಕೆಎಂಎಫ್ ಜಾಗೃತ ದಳ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಜಾಲ ಬಯಲಾಯಿತು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್‌ಸಿಂಗ್ ತಿಳಿಸಿದ್ದಾರೆ.

ಚಂದ್ರಶೇಖ‌ರ್ ಕೆಎಂಎಫ್‌ ಪರವಾನಗೆ ಪಡೆದಿದ್ದ. ಚಾಮರಾಜಪೇಟೆಯಲ್ಲಿ ಆತನ ನಂದಿನಿ ಪಾರ್ಲರ್ ಇತ್ತು. ಕೆಎಂಎಫ್‌ನಿಂದ ನಂದಿನಿ ತುಪ್ಪ ಖರೀದಿಸಿ ಬಳಿಕ ಆ ತುಪ್ಪವನ್ನು ತಮಿಳುನಾಡಿನ ಅವಿನಾಶಿಗೆ ಸಾಗಿಸುತ್ತಿದ್ದ. ಅಲ್ಲಿ ನಕಲಿ ತುಪ್ಪ ತಯಾರಿಕೆ ಘಟಕವನ್ನು ಆರೋಪಿ ಶಿವಕುಮಾರ್‌ ನಡೆಸುತ್ತಿದ್ದ.

ನಂದಿನಿ ತುಪ್ಪಕ್ಕೆ ಡಾಲ್ದಾ ಹಾಗೂ ಪಾಮೋಲಿವ್ ಎಣ್ಣೆ ಬೆರೆಸಿ, ಮತ್ತೆ ನಂದಿನಿ ಬ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಬರುತ್ತಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕಲಬೆರಕೆ ತುಪ್ಪಕ್ಕೆ ಕೆ.ಜಿ.ಗೆ 300 ರು. ಇತ್ತು. ಬಳಿಕ ನಂದಿನಿ ತುಪ್ಪದ ಬ್ಯಾಂಡ್ ಹೆಸರಿನಲ್ಲಿ 700 ರು.ಗೆ ಜನರಿಗೆ ಮಹೇಂದ್ರ ಮಾರಾಟ ಮಾಡುತ್ತಿದ್ದ, ಕಳೆದೊಂದು ವರ್ಷದಿಂದ ಈ ಕಲಬೆರಕೆ ದಂಧೆ ನಡೆದಿರುವ ಮಾಹಿತಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

2 Mins Read

ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ಕೇಂದ್ರದ PM ಆವಾಸ್ ಯೋಜನೆಯಡಿ ಮತ್ತೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

2 Mins Read

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಸಮಯ ಪಾಲನೆಗೆ `ಜಿಯೋ ಟ್ಯಾಗ್ಡ್’ ವ್ಯವಸ್ಥೆ ಜಾರಿ

2 Mins Read
Recent News

​ವಿಶ್ವಕಪ್ ಫುಟ್‌ಬಾಲ್‌ನಲ್ಲಿ ಕೆನಡಾ ಹೊಸ ಇತಿಹಾಸ: ಬೋಸ್ನಿಯಾ ವಿರುದ್ಧದ ಪಂದ್ಯ ‘ಡ್ರಾ’; ಚೊಚ್ಚಲ ವಿಶ್ವಕಪ್ ಪಾಯಿಂಟ್ ಗೆದ್ದು ಸಂಭ್ರಮಿಸಿದ ಕೆನಡಿಯನ್ನರು!

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

​ಗ್ರಾಹಕರೇ ಎಚ್ಚರ, ಹೋಟೆಲ್ ಹಾಗೂ ಆಹಾರ ಕಂಪನಿಗಳಿಗೆ ಕಟ್ಟುನಿಟ್ಟಿನ ವಾರ್ನಿಂಗ್: ಊಟದಲ್ಲಿ ‘ಪಿನ್’ ಪತ್ತೆಯಾದ ಬೆನ್ನಲ್ಲೇ FSSAI ತುರ್ತು ಆದೇಶ!

ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ಕೇಂದ್ರದ PM ಆವಾಸ್ ಯೋಜನೆಯಡಿ ಮತ್ತೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

State News
KARNATAKA

ALERT : ಸತತ ಎಷ್ಟು `EMI’ ಬಾಕಿಯಾದರೆ ಬ್ಯಾಂಕ್ ನಿಮ್ಮ ಮನೆಯನ್ನು ಹರಾಜು ಹಾಕಬಹುದು? ಸಾಲಗಾರರು ತಿಳಿಯಲೇಬೇಕಾದ ವಿಷಯ.!

By kannadanewsnow57 KARNATAKA 2 Mins Read

ಬೆಂಗಳೂರು: ಇಂದಿನ ದಿನಗಳಲ್ಲಿ ಸ್ವಂತ ಮನೆ ಹೊಂದುವ ಕನಸಿನೊಂದಿಗೆ ಲಕ್ಷಾಂತರ ಜನರು ಗೃಹ ಸಾಲ (Home Loan) ಪಡೆದುಕೊಳ್ಳುತ್ತಿದ್ದಾರೆ. ಆದರೆ,…

ಮನೆ ಇಲ್ಲದವರಿಗೆ ಗುಡ್ ನ್ಯೂಸ್ : ಕೇಂದ್ರದ PM ಆವಾಸ್ ಯೋಜನೆಯಡಿ ಮತ್ತೆ ಅರ್ಜಿ ಆಹ್ವಾನ, ಈ ದಾಖಲೆಗಳು ಕಡ್ಡಾಯ

BIG NEWS : ರಾಜ್ಯ `ಸರ್ಕಾರಿ ನೌಕರರೇ’ ಗಮನಿಸಿ : ಸಮಯ ಪಾಲನೆಗೆ `ಜಿಯೋ ಟ್ಯಾಗ್ಡ್’ ವ್ಯವಸ್ಥೆ ಜಾರಿ

ರಾಜ್ಯಾದ್ಯಂತ ಮುಂದಿನ 3 ದಿನ ಭಾರಿ ಮಳೆ : ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.