ಬೆಂಗಳೂರು: ನಗರದಲ್ಲಿರುವಂತ ಸಲಾರ್ ಪುರಿಯಾ ಸತ್ವ ಗ್ರೂಪ್ ನ ಕಚೇರಿ, ಮುಖ್ಯಸ್ಥರ ನಿವಾಸಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಲಕ್ಷಾಂತರ ನಗದು, ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಿರೋದಾಗಿ ತಿಳಿದು ಬಂದಿದೆ.
ಇಂದು ಬೆಂಗಳೂರಿನ ಹಲಸೂರಿನ ಯಲ್ಲಪ್ಪಚೆಟ್ಟಿ ಲೇ ಔಟ್ ನಲ್ಲಿರುವಂತ ಕಚೇರಿ, ಇಂದಿರಾನಗರದ ಡಿಫೆನ್ಸ್ ಕಾಲೋನಿಯಲ್ಲಿರುವ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಸಾಲಾರ್ ಪುರಿಯಾ ಸತ್ವ ಗ್ರೂಪ್ ಮೇಲೆ ನಡೆದಂತ ಇಡಿ ದಾಳಿಯಲ್ಲಿ, 316 ಬ್ಯಾಂಕ್ ಖಾತೆಗಳಲ್ಲಿದ್ದ 49.99 ಕೋಟಿ ಹಣವನ್ನು ಫ್ರೀಜ್ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ 29 ಲಕ್ಷ ನಗದು, ವಿದೇಶಿ ಕರೆನ್ಸಿಯನ್ನು ಜಪ್ತಿ ಮಾಡಲಾಗಿದೆ ಎಂಬುದಾಗಿ ತಿಳಿದು ಬಂದಿದೆ.
ಅಂದಹಾಗೇ ಸಲಾರ್ ಪುರಿಯಾ ಸತ್ವ ಗ್ರೂಪ್ ನಿಂದ ಹೀರಾ ಗ್ರೂಪ್ ಜೊತೆಗೆ ಅಕ್ರಮ ಹಣ ವರ್ಗಾವಣೆ ಕಂಡು ಬಂದ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಮನಕಲಕುವ ಘಟನೆ : ಅಣ್ಣನ ಸಾವಿನಿಂದ ಮನನೊಂದು ತಂಗಿಯೂ ಆತ್ಮಹತ್ಯೆಗೆ ಶರಣು