ನವದೆಹಲಿ: ಈಗಾಗಲೇ ಒಮ್ಮೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ( National Herald case ) ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ( Congress interim President Sonia Gandhi ) ಅವರನ್ನು ಜಾರಿ ನಿರ್ದೇಶನಾಲಯದ ( Enforcement Directorate ) ಅಧಿಕಾರಿಗಳು ದಿನವಿಡೀ ವಿಚಾರಣೆ ನಡೆಸಿದ್ದರು. ಈ ಬಳಿಕ ಮತ್ತೆ ಜುಲೈ.25ರಂದು ವಿಚಾರಣೆಗೆ ಹಾಜರಾಗುವಂತೆ ಇಂದು ಸಮನ್ಸ್ ಜಾರಿ ಮಾಡಿದೆ ಎಂಬುದಾಗಿ ಮೂಲಗಳಿಂದ ತಿಳಿದು ಬಂದಿದೆ.
ಒಂದೆಡೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಯುವ ನಾಯಕ ರಾಹುಲ್ ಗಾಂಧಿಗೆ ಇಡಿ ಕಿರಿಕುಳ ವಿರೋಧಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ ತೀವ್ರ ಗೊಳಿಸಿತ್ತು. ನಿನ್ನೆಯಷ್ಟೇ ಈ ಸಂಬಂಧ ಬೃಹತ್ ಪ್ರತಿಭಟನೆಯನ್ನು ಕೂಡ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಕಾಂಗ್ರೆಸ್ ನಾಯಕರು ವ್ಯಕ್ತ ಪಡಿಸಿದ್ದರು.
ಎಚ್ಚರ..! ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ಭಿಕ್ಷಾಟನೆ, ದುಡಿಮೆಗೆ ತೊಡಗಿಸುವುದು ಅಪರಾಧ
ಈ ಬೆನ್ನಲ್ಲೇ ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆಗೆ ಜುಲೈ 25ರ ಬದಲು ಜುಲೈ 26ರಂದು ಹಾಜರಾಗುವಂತೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಜಾರಿ ನಿರ್ದೇಶನಾಲಯ ಹೊಸ ಸಮನ್ಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
Job Alert: KPSCಯಿಂದ ‘ಮೋಟಾರು ವಾಹನ ನಿರೀಕ್ಷಕ’ರ ಅಂತಿಮ ಆಯ್ಕೆ ಪಟ್ಟಿ ಪ್ರಕಟ