ನವದೆಹಲಿ: ನಿನ್ನೆ ರಾಮಾನಾಥ ಕೋವಿಂದ್ ( Ramanath Kovind ) ಅವರ ಅಧಿಕಾರಾವಧಿ ಅಂತ್ಯಗೊಂಡ ಕಾರಣ, ದೇಶದ 15ನೇ ರಾಷ್ಟ್ರಪತಿಯಾಗಿ, ಇಂದು ದ್ರೌಪದಿ ಮುರ್ಮು ( Draupadi Murmu ) ಅವರು ಪ್ರಮಾಣವಚನ ಸ್ವೀಕರಿಸಿ, ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ರಾಷ್ಟ್ರಪತಿ ಚುನಾವಣೆಯಲ್ಲಿ ಭಾರೀ ಬಹುತದೊಂದಿಗೆ ಎನ್ ಡಿಎ ಬೆಂಬಲಿತ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಗೆಲುವು ಸಾಧಿಸಿದ್ದರು. ಇಂತಹ ಅವರು ಇಂದು 15ನೇ ರಾಷಅಟ್ರಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದು ಬೆಳಿಗ್ಗೆ 10.15ಕ್ಕೆ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈ ವೇಳೆ ಉಪಸ್ಥಿತರಿರಲಿದ್ದಾರೆ.
ಅಂದಹಾಗೇ 64 ವರ್ಷದ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಹುದ್ದೆಗೆ ಏರುತ್ತಿರುವಂತ ಮೊದಲ ಆದಿವಾಸಿ ಮಹಿಳೆಯಾಗಿದ್ದಾರೆ.