ಬೆಂಗಳೂರು: ನೀನು ನನ್ನ ಸ್ಟೇರಿಂಗ್ ಮುಟ್ಟಬೇಡ, ನಾನು ನಿನ್ನ ಸ್ಟೇರಿಂಗ್ ಮುಟ್ಟೋಲ್ಲ ಅಷ್ಟೇ ಎನ್ನುವಂತಿಗೆ ಕಾಂಗ್ರೆಸ್ ಬಸ್ ಯಾತ್ರೆ ಎಂಬುದಾಗಿ ಬಿಜೆಪಿ ಕರ್ನಾಟಕ ( BJP Karnataka ) ವ್ಯಂಗ್ಯ ಮಾಡಿದೆ.
‘ಬೆಳಗಾವಿ ಅಧಿವೇಶನ’ದಲ್ಲಿ ಭಾಗಿಯಾಗುವ ‘ಸರ್ಕಾರಿ ನೌಕರ’ರ ಗಮನಕ್ಕೆ: ‘ಐಡಿ ಕಾರ್ಡ್’ ಧರಿಸುವುದು ಕಡ್ಡಾಯ
ಈ ಬಗ್ಗೆ ಟ್ವಿಟ್ ( Twitter ) ಮಾಡಿದ್ದು, ಡಬಲ್ ಎಂಜಿನ್ ಸರ್ಕಾರದಿಂದ ದೇಶವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವಾಗಲೇ, ಕಾಂಗ್ರೆಸ್ ( Congress ) ಎರಡು ಸ್ಟೇರಿಂಗ್ನ ಬಸ್ ಯಾತ್ರೆಗೆ ಅಣಿಯಾಗುತ್ತಿದೆ. ಡಿಕೆ ಶಿವಕುಮಾರ್ (DK Shivakumar ), ಸಿದ್ಧರಾಮಯ್ಯ ( Siddaramaiah ), ಎರಡೂ ಸ್ಟೇರಿಂಗ್ ಕಿತ್ತುಕೊಂಡು, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೂಲೆಗೆ ತಳ್ಳಿರೋದು ನೋಡಿದ್ರೆ ಈ ಬಸ್ ಯಾತ್ರೆ ಪಂಕ್ಚರ್ ಆಗೋದು ಗ್ಯಾರಂಟಿ ಎಂದು ಲೇವಡಿ ಮಾಡಿದೆ.
ಡಬಲ್ ಎಂಜಿನ್ ಸರ್ಕಾರದಿಂದ ದೇಶವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವಾಗಲೇ, ಕಾಂಗ್ರೆಸ್ ಎರಡು ಸ್ಟೇರಿಂಗ್ನ ಬಸ್ ಯಾತ್ರೆಗೆ ಅಣಿಯಾಗುತ್ತಿದೆ. @DKShivakumar, @siddaramaiah ಎರಡೂ ಸ್ಟೇರಿಂಗ್ ಕಿತ್ತುಕೊಂಡು, @kharge ಅವರನ್ನು ಮೂಲೆಗೆ ತಳ್ಳಿರೋದು ನೋಡಿದ್ರೆ ಈ ಬಸ್ ಯಾತ್ರೆ ಪಂಕ್ಚರ್ ಆಗೋದು ಗ್ಯಾರಂಟಿ.#DoubleSteeringINC pic.twitter.com/mIbTDVDZU5
— BJP Karnataka (@BJP4Karnataka) December 14, 2022
ಸಿದ್ಧರಾಮಯ್ಯ ಮತ್ತು ಡಿಕೆ ಶಿವಕುಮಾರ್ ಜಗಳ ಬೀದಿಗೆ ಬರುತ್ತಿದ್ದಂತೆ ಎಲ್ಲಿ ತನ್ನ ಮಗನ ಪ್ರಧಾನಿ ಕನಸು ಬೀದಿಪಾಲು ಆದೀತು ಎಂದು ಬೆದರಿದ ಸೋನಿಯಾ ಗಾಂಧಿ, ತಕ್ಷಣವೇ ತಮ್ಮ ‘ಕೈ’ಗೊಂಬೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕರೆಸಿ, ಜಗಳ ಬಂದ್ ಮಾಡಿಸಲು ತಾಕೀತು ಮಾಡಿದ್ದಾರೆ. ಇದಕ್ಕೆ ‘ಜೀ ಹುಜೂರ್’ ಎಂದು ಸಭೆ ಕರೆಸಿದ್ದು ಎಂದಿದೆ.
.@siddaramaiah ಮತ್ತು @DKShivakumar ಜಗಳ ಬೀದಿಗೆ ಬರುತ್ತಿದ್ದಂತೆ ಎಲ್ಲಿ ತನ್ನ ಮಗನ ಪ್ರಧಾನಿ ಕನಸು ಬೀದಿಪಾಲು ಆದೀತು ಎಂದು ಬೆದರಿದ ಸೋನಿಯಾ ಗಾಂಧಿ, ತಕ್ಷಣವೇ ತಮ್ಮ 'ಕೈ'ಗೊಂಬೆ @khargeಯವರನ್ನು ಕರೆಸಿ, ಜಗಳ ಬಂದ್ ಮಾಡಿಸಲು ತಾಕೀತು ಮಾಡಿದ್ದಾರೆ. ಇದಕ್ಕೆ 'ಜೀ ಹುಜೂರ್' ಎಂದು ಸಭೆ ಕರೆಸಿದ್ದು.#CorruptCongress
6/7— BJP Karnataka (@BJP4Karnataka) December 14, 2022
ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕರ ಪ್ರಕಾರ ಕಾಂಗ್ರೆಸ್ ಎಂಬುದು ದೇಶದ ಅಭಿವೃದ್ಧಿ ಮಾಡುವ ಯಾವುದೇ “ದುರುದ್ದೇಶ”ಗಳೇ ಇಲ್ಲದ ಶುದ್ಧ ಮನಸ್ಸಿನ ಭ್ರಷ್ಟ ಪಕ್ಷ. ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಇವರ ಹುನ್ನಾರ ಇದೀಗ ಬಯಲಾಗಿದೆ. ಗುಜರಾತ್ನಲ್ಲಾದಂತೆ, ಕರ್ನಾಟಕದಲ್ಲೂ ಜನರು ಪಾಠ ಕಲಿಸುತ್ತಾರೆ ಎಂದು ವಾಗ್ಧಾಳಿ ನಡೆಸಿದೆ.
ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕರ ಪ್ರಕಾರ @INCKarnataka ಎಂಬುದು ದೇಶದ ಅಭಿವೃದ್ಧಿ ಮಾಡುವ ಯಾವುದೇ "ದುರುದ್ದೇಶ"ಗಳೇ ಇಲ್ಲದ ಶುದ್ಧ ಮನಸ್ಸಿನ ಭ್ರಷ್ಟ ಪಕ್ಷ.
ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಇವರ ಹುನ್ನಾರ ಇದೀಗ ಬಯಲಾಗಿದೆ. ಗುಜರಾತ್ನಲ್ಲಾದಂತೆ, ಕರ್ನಾಟಕದಲ್ಲೂ ಜನರು ಪಾಠ ಕಲಿಸುತ್ತಾರೆ.#CorruptCongress
7/7— BJP Karnataka (@BJP4Karnataka) December 14, 2022