ಪುತ್ತೂರು: ಪ್ರಯಾಣಿಕ ಬಸ್ಸಿನಲ್ಲಿ ಹತ್ತಿದ ನಂತ್ರ, ಆತ ಕುಡಿದಿರಲೀ, ಹೇಗಾದರೂ ಇರಲಿ ಆತನನ್ನು ಆತ ತಲುಪುವ ಸ್ಥಳಕ್ಕೆ ಕರೆದೊಯ್ಯಬೇಕಾಗಿರೋದು ಸಾರಿಗೆ ಬಸ್ ( KSRTC Bus ) ನಿರ್ವಾಹಕ, ಚಾಲಕನ ಕರ್ತವ್ಯ. ಆದ್ರೇ ಇಲ್ಲೊಬ್ಬ ಕೆ ಎಸ್ ಆರ್ ಟಿ ಸಿ ನಿರ್ವಾಹಕ ಮಾತ್ರ ಕುಡಿದು ಬಸ್ ಹತ್ತಿದಂತ ಪ್ರಯಾಣಿಕನೊಬ್ಬನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕಾಲಿನಿಂದ ಒದ್ದು ಹೊರಗೆ ತಳ್ಳಿದ್ದಾನೆ. ಆ ಘಟನೆ ನಡೆದಿದ್ದು ಎಲ್ಲಿ ಎನ್ನುವ ಬಗ್ಗೆ ಮುಂದೆ ಸುದ್ದಿ ಓದಿ..
Karnataka Rain: ರಾಜ್ಯದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ: ಹವಾಮಾನ ಇಲಾಖೆಯಿಂದ ರೆಡ್ ಅಲರ್ಟ್ ಘೋಷಣೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಈಶ್ವರಮಂಗಲ ಮಾರ್ಗವಾಗಿ ಸುಳ್ಯಪದವು ಕಡೆಗೆ ಸಂಜೆ ತೆರಳುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಗೆ ಪಾನಮತ್ತನಾಗಿದ್ದಂತ ಪ್ರಯಾಣಿಕನೊಬ್ಬ ಏರಿದ್ದಾನೆ. ಹೀಗೆ ಬಸ್ಸನ್ನು ಏರಿದಂತ ಪ್ರಯಾಣಿಕನನ್ನು ಹತ್ತಿಸಿಕೊಳ್ಳದೇ ನಿರ್ವಾಹಕ ಕೆಳಗೆ ಇಳಿಯುವಂತೆ ಸೂಚಿಸಿದ್ದಾನೆ.
BIG NEWS: ಬೆಂಗಳೂರಿನಲ್ಲಿ ಭಾರೀ ಮಳೆಗೆ 600 ಮನೆ, 130 ಅಪಾರ್ಮೆಂಟ್ ಜಲಾವೃತ: 4,500 ಕುಟುಂಬಗಳು ಕಂಗಾಲು
ಕಂಡಕ್ಟರ್ ಮಾತಿಗೆ ಒಪ್ಪದಂತ ಪಾನಮತ್ತ ಪ್ರಯಾಣಿಕ ಮಾತ್ರ ಬಸ್ಸಿನಿಂದ ಇಳಿದಿಲ್ಲ. ಈ ವೇಳೆಗೆ ಸಿಟ್ಟುಗೊಂಡಂತ ನಿರ್ವಾಹಕ ಆತನ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬಸ್ಸಿನ ಡೋರಿನಿಂದ ಕಾಲಿನಿಂದ ಒದ್ದಿದ್ದಾನೆ. ಆಗ ಪಾನಮತ್ತ ಪ್ರಯಾಣಿಕ ರಸ್ತೆಗೆ ಅಂಗಾತ ಬಿದ್ದು ಪೆಟ್ಟುಗೊಂಡಿರೋ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
BIG NEWS: ಇಂದು ಪ್ರಧಾನಿ ಮೋದಿಯಿಂದ ಇಂಡಿಯಾ ಗೇಟ್ ಬಳಿ ʻನೇತಾಜಿʼ ಅವರ 28 ಅಡಿ ಎತ್ತರದ ಪ್ರತಿಮೆ ಅನಾವರಣ!
ಈ ವಿಷಯ ತಿಳಿದಂತ ರೈತ ಸಂಘದ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ, ಸಾರಿಗೆ ಬಸ್ ನಿರ್ವಾಹಕನ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಸಂಬಂಧ ಪಟ್ಟಂತ ಅಧಿಕಾರಿಗಳು ಈ ನಡೆ ತೋರಿದಂತ ನಿರ್ವಾಹಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.