Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

ಸಚಿವ ಡಿ. ಸುಧಾಕರ್ ನಿಧನ ಹಿನ್ನಲೆ: ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆ

​’ನಾನು ಎಲ್ಲರಿಗೂ ಮುಖ್ಯಮಂತ್ರಿ’: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ‘ಜೈ ಶ್ರೀರಾಮ್’ ಘೋಷಣೆ ತಡೆದ ಸುವೇಂದು ಅಧಿಕಾರಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ನಿಮ್ಮ ಮಕ್ಕಳಲ್ಲಿ​ ಥೈರಾಯ್ಡ್‌ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಅಘಾತಕಾರಿ ಕಾರಣ | Thyroid in children
INDIA

ನಿಮ್ಮ ಮಕ್ಕಳಲ್ಲಿ​ ಥೈರಾಯ್ಡ್‌ ಸಮಸ್ಯೆ ಕಾಡ್ತಿದ್ಯಾ? ಇಲ್ಲಿದೆ ಅಘಾತಕಾರಿ ಕಾರಣ | Thyroid in children

By ವಸಂತ್‌ ಬಿ ಈಶ್ವರಗೆರೆ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ : ಮಕ್ಕಳಲ್ಲೂ ಕೂಡ ಅನೇಕ ಕಾರಣಗಳಿಂದ ಥೈರಾಯ್ಡ್‌ ಸಮಸ್ಯೆ ಉಂಟಾಗುತ್ತದೆ. ಇದು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರಂಭದಲ್ಲಿಯೇ ಗುರುತಿಸಿ ಚಿಕಿತ್ಸೆ ಕೊಡಿಸುವುದು ಒಳ್ಳೆಯದು. ಥೈರಾಯ್ಡ್ ಗ್ರಂಥಿಯು ಸಾಕಷ್ಟು ಹಾರ್ಮೋನುಗಳನ್ನು ಉತ್ಪಾದಿಸಲು ವಿಫಲವಾದಾಗ ಹೈಪೋಥೈರಾಯ್ಡಿಸಮ್ ಉಂಟಾಗುತ್ತದೆ.

ಈ ಹೈಪೋಥೈರಾಯ್ಡಿಸಮ್‌ ಸಮಸ್ಯೆ ದೊಡ್ಡವರಲ್ಲಿ ಮಾತ್ರವಲ್ಲ ಚಿಕ್ಕ ಮಕ್ಕಳಲ್ಲಿಯೂ ಉಂಟಾಗುತ್ತದೆ.ಆದ್ದರಿಂದ ಥೈರಾಯ್ಡ್‌ ಗ್ರಂಥಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಮಕ್ಕಳಿಗೆ ಸರಿಯಾದ ರೀತಿಯ ಆಹಾರವನ್ನು ನೀಡುವುದು ಮುಖ್ಯವಾಗಿರುತ್ತದೆ. ಹಾಗಾದರೆ ಮಕ್ಕಳಲ್ಲಿ ಹೈಪೋಥೈರಾಯ್ಡಿಸಮ್‌ನಂತಹ ಥೈರಾಯ್ಡ್‌ ಸಮಸ್ಯೆ ಕಾಣಿಸಿಕೊಳ್ಳಲು ಕಾರಣವೇನು, ಯಾವೆಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಬಗ್ಗೆ ಡಾ ಅಲ್ಕಾ ವಿಜಯನ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ ಇಲ್ಲಿದೆ ನೋಡಿ.

​ಮಕ್ಕಳಲ್ಲಿ ಥೈರಾಯ್ಡ್‌ ಸಮಸ್ಯೆಗೆ ಕಾರಣಗಳೆಂದರೆ
* ಆಟೋ ಇಮ್ಯೂನ್‌ ಸಮಸ್ಯೆ
*ಅಯೋಡಿನ್ ಕೊರತೆ
*ಕರುಳಿನ ಆರೋಗ್ಯ ಸರಿಯಾಗಿ ಇಲ್ಲದೇ ಇರುವುದು

ಪ್ರೌಢಾವಸ್ಥೆಯ ಹಂತದಲ್ಲಿ ಸರಿಯಾಗಿ ಹಾರ್ಮೋನುಗಳು ಉತ್ಪತ್ತಿಯಾಗದೇ ಇದ್ದರೆ ಥೈರಾಯ್ಡ್‌ ಸಮಸ್ಯೆ ಕಾಡುತ್ತದೆ.
​ಆಯಾಸಸಾಮಾನ್ಯವಾಗಿ ಥೈರಾಯ್ಡ್‌ ಸಮಸ್ಯೆ ಕಾಣಿಸಿಕೊಂಡರೆ ಆಯಾಸ ಕಾಡುತ್ತದೆ. ಅದು ಮಕ್ಕಳಲ್ಲಿಯೂ ಕಾಡುತ್ತದೆ. ಥೈರಾಯ್ಡ್‌ ಸಮಸ್ಯೆ ಇದ್ದರೆ ಮಕ್ಕಳು ಜಡ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಲ್ಲದೆ ದೈಹಿಕವಾಗಿ ಸದೃಢರಾಗಿರುವುದಿಲ್ಲ. ಜೊತೆಗೆ ಹೊರಗೆ ಹೋಗಿ ಆಟವಾಡುವುದಾಗಲಿ, ಇತರ ಮಕ್ಕಳೊಂದಿಗೆ ಬೆರೆಯದೆ ದಣಿದಂತೆ ಕುಳಿತುಕೊಳ್ಳುವುದನ್ನು ಕಾಣಬಹುದಾಗಿದೆ.

​ವಯಸ್ಸಿಗೆ ಮೀರಿದ ದೇಹದ ತೂಕ
ಇತ್ತೀಚೆಗೆ ಸಣ್ಣ ಮಕ್ಕಳಲ್ಲಿಯೇ ಬೊಜ್ಜಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಜಂಕ್‌ಫುಡ್‌ಗಳ ಸೇವನೆ ಒಂದು ಕಾರಣವಾದರೆ ಥೈರಾಯ್ಡ್‌ ಸಮಸ್ಯೆ ಇನ್ನೊಂದು ಕಾರಣವಾಗಿರುತ್ತದೆ. ಮಕ್ಕಳಲ್ಲಿ ಥೈರಾಯ್ಡ್‌ ಸಮಸ್ಯೆ ಉಂಟಾದರೆ ದೇಹದಲ್ಲಿ ತೂಕ ಏರಿಕೆಯಾಗುವುದನ್ನು ಕಾಣಬಹುದಾಗಿದೆ. ಅಲ್ಲದೆ ಜೀರ್ಣಶಕ್ತಿ ಕೂಡ ನಿಧಾನವಾಗುತ್ತದೆ. ಇದರಿಂದ ದೇಹದ ತೂಕ ವಯಸ್ಸಿಗಿಂತ ಹೆಚ್ಚಾಗಿ ಬೆಳೆಯಲು ಕಾರಣವಾಗುತ್ತದೆ.

ಮಕ್ಕಳಲ್ಲಿ ಥೈರಾಯ್ಡ್‌ ಸಮಸ್ಯೆ

 

View this post on Instagram

 

A post shared by Dr Alka Vijayan, Ayurveda (BAMS) (@dralkaayurveda)

​ಮಲಬದ್ಧತೆ

ಮಕ್ಕಳಲ್ಲಿ ಮಲಬದ್ಧತೆ ಸಾಮಾನ್ಯ. ಆದರೆ ಪದೇ ಪದೇ ಮಲಬದ್ಧತೆಯಾಗುವುದು, ಏನು ಮಾಡಿದರೂ ಸರಿಯಾಗದೇ ಇರುವ ಸ್ಥಿತಿ ಇದ್ದರೆ ಅದು ಹೈಪೋಥೈರಾಯ್ಡಿಸಮ್‌ನ ಲಕ್ಷಣವೂ ಆಗಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅಂತಹ ಸಂದರ್ಭದಲ್ಲಿ ಥೈರಾಯ್ಡ್‌ ಪರೀಕ್ಷೆ ಮಾಡಿಸುವುದು ಉತ್ತಮ

​ಬೆಳವಣಿಗೆಯ ಕೊರತೆ

ಬೆಳೆಯುವ ಮಕ್ಕಳಲ್ಲಿ ಎತ್ತರ, ದೇಹ ಎಲ್ಲವೂ ಬದಲಾಗುತ್ತಿರುತ್ತದೆ. ಆದರೆ ಥೈರಾಯ್ಡ್‌ ಸಮಸ್ಯೆ ಇದ್ದರೆ ಮಕ್ಕಳ ಬೆಳವಣಿಗೆಗೆ ಕುಂಠಿತವಾಗುತ್ತದೆ. ಇದರಿಂದಾಗಿ ಮಕ್ಕಳು ಎತ್ತರವಾಗದೇ ಇರುವುದು, ತೂಕ ಹೆಚ್ಚಳವಾಗುವುದನ್ನು ಕಾಣಬಹುದು. ಇದು ಹಾರ್ಮೋನುಗಳ ಉತ್ಪತ್ತಿಯಲ್ಲಿ ವ್ಯತ್ಯಾಸವಾದಾಗ ಉಂಟಾಗುತ್ತದೆ. ಆದ್ದರಿಂದ ಥೈರಾಯ್ಡ್‌ ಗ್ರಂಥಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುವುದನ್ನು ಮರೆಯುವಂತಿಲ್ಲ.

ಮಕ್ಕಳಲ್ಲಿ ಬೆಳವಣಿಗೆ

​ಇತರ ಲಕ್ಷಣಗಳೆಂದರೆಮಕ್ಕಳಲ್ಲಿ ಬೆಳವಣಿಗೆಯ ಕುಂಠಿತವನ್ನು ಹೈಪೋಥೈರಾಯ್ಡಿಸಮ್‌ ಉಂಟು ಮಾಡುತ್ತದೆ. ಹೀಗಾಗಿ ಮಕ್ಕಳಲ್ಲಿ ಚಟುವಟಿಕೆ ಕಡಿಮೆಯಾಗಬಹುದು. ಅಲ್ಲದೆ ಸರಿಯಾಗಿ ಪ್ರತಿಕ್ರಿಯೆ ನೀಡದೇ ಇರುವುದು, ಏಕಾಗ್ರತೆಯ ಕೊರತೆ, ಸದಾ ಆಯಾಸದ ಲಕ್ಷಣಗಳನ್ನು ಹೊಂದಿರುತ್ತಾರೆ.

ಮಕ್ಕಳಲ್ಲಿ ಥೈರಾಯ್ಡ್‌ ಸಮಸ್ಯೆ ಕ್ರಮೇಣ ಗೊತ್ತಾಗುವ ಕಾರಣ ಸಣ್ಣ ಪುಟ್ಟ ಲಕ್ಷಣಗಳನ್ನು ಗುರುತಿಸಿ ಕಾಲಕಾಲಕ್ಕೆ ತಕ್ಕ ಹಾಗೆ ವೈದ್ಯರ ಬಳಿ ತಪಾಸಣೆ ಮಾಡಿಸುವುದು ಒಳಿತು. ಇದರಿಂದ ಭವಿಷ್ಯದಲ್ಲಿ ಬರುವ ಅಪಾಯವನ್ನು ತಡೆಯಬಹುದಾಗಿದೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಪತ್ರಕರ್ತನ ನೆರವಿಗಾಗಿ ಮನವಿ

ಇನ್ ಸ್ಟಾಗ್ರಾಂ ಪ್ರೇಯಸಿ ಶ್ವೇತಾ ಆತ್ಮಹತ್ಯೆ ಕೇಸ್: ಪ್ರಿಯಕರ ಅರೆಸ್ಟ್

Share. Facebook Twitter LinkedIn WhatsApp Email

Related Posts

​’ನಾನು ಎಲ್ಲರಿಗೂ ಮುಖ್ಯಮಂತ್ರಿ’: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ‘ಜೈ ಶ್ರೀರಾಮ್’ ಘೋಷಣೆ ತಡೆದ ಸುವೇಂದು ಅಧಿಕಾರಿ!

1 Min Read
ದಳಪತಿ ವಿಜಯ್ ರಾಜಕೀಯ ಪ್ರವೇಶ - [Dalapathi Vijay Politics], ತ್ರಿಶಾ ಕೃಷ್ಣನ್ ತಿಳಿ ನೀಲಿ ಸೀರೆ - [Trisha Krishnan in Blue Saree], ತಮಿಳಗ ವೆಟ್ರಿ ಕಳಗಂ ಮುಖ್ಯಮಂತ್ರಿ - [TVK Chief Minister Vijay]

​’ಆಕೆಯೇನಕ್ಕೆ ಅಲ್ಲಿಗೆ ಬಂದಿದ್ದಾರೆ?’: ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಟಿ ತ್ರಿಶಾ ವಿರುದ್ಧ ನೆಟ್ಟಿಗರ ಆಕ್ರೋಶ!

1 Min Read
Vijay 5

ಸಿಎಂ ವಿಜಯ್ ಆಡಳಿತಕ್ಕೆ ವೇಗ: ಪಿ. ಸೆಂಥಿಲ್‌ಕುಮಾರ್ ಮತ್ತು ಜಿ. ಲಕ್ಷ್ಮಿ ಪ್ರಿಯಾ ನೂತನ ಕಾರ್ಯದರ್ಶಿಗಳಾಗಿ ನೇಮಕ!

1 Min Read
Recent News

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

ಸಚಿವ ಡಿ. ಸುಧಾಕರ್ ನಿಧನ ಹಿನ್ನಲೆ: ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆ

​’ನಾನು ಎಲ್ಲರಿಗೂ ಮುಖ್ಯಮಂತ್ರಿ’: ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ‘ಜೈ ಶ್ರೀರಾಮ್’ ಘೋಷಣೆ ತಡೆದ ಸುವೇಂದು ಅಧಿಕಾರಿ!

ದಳಪತಿ ವಿಜಯ್ ರಾಜಕೀಯ ಪ್ರವೇಶ - [Dalapathi Vijay Politics], ತ್ರಿಶಾ ಕೃಷ್ಣನ್ ತಿಳಿ ನೀಲಿ ಸೀರೆ - [Trisha Krishnan in Blue Saree], ತಮಿಳಗ ವೆಟ್ರಿ ಕಳಗಂ ಮುಖ್ಯಮಂತ್ರಿ - [TVK Chief Minister Vijay]

​’ಆಕೆಯೇನಕ್ಕೆ ಅಲ್ಲಿಗೆ ಬಂದಿದ್ದಾರೆ?’: ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಟಿ ತ್ರಿಶಾ ವಿರುದ್ಧ ನೆಟ್ಟಿಗರ ಆಕ್ರೋಶ!

State News
KARNATAKA

ಸಚಿವ ಡಿ.ಸುಧಾಕರ್ ಅಂತಿಮ ದರ್ಶನದ ವೇಳೆ ಬಿಕ್ಕಿ ಬಿಕ್ಕಿ ಅತ್ತ ಡಿಸಿಎಂ ಡಿ.ಕೆ ಶಿವಕುಮಾರ್

By ವಸಂತ್‌ ಬಿ ಈಶ್ವರಗೆರೆ KARNATAKA 1 Min Read

ಚಿತ್ರದುರ್ಗ: ದಶಕಗಳ ಕಾಲದ ಆತ್ಮೀಯ ಸ್ನೇಹಿತ, ಸಂಪುಟ ಸಹೋದ್ಯೋಗಿ ಡಿ. ಸುಧಾಕರ್ ಅವರ ಅಕಾಲಿಕ ನಿಧನದಿಂದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

ಸಚಿವ ಡಿ. ಸುಧಾಕರ್ ನಿಧನ ಹಿನ್ನಲೆ: ನೂತನ ಶಾಸಕರ ಪ್ರಮಾಣವಚನ ಕಾರ್ಯಕ್ರಮ ಮುಂದೂಡಿಕೆ

ಮಲೆನಾಡು ಭಾಗದ ಜನರಿಗೆ ಉನ್ನತ ಶಿಕ್ಷಣ ಒದಗಿಸುವುದೇ ಎಂ.ಡಿ.ಎಫ್ ಗುರಿ: ಅಧ್ಯಕ್ಷ ಬಿ.ಆರ್.ಜಯಂತ್

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿಯದ್ದು ಗೆಲುವಲ್ಲ, ಅದು ವ್ಯವಸ್ಥಿತ ಷಡ್ಯಂತ್ರ; ಸಾಗರದಲ್ಲಿ ಬಿ.ಕೆ. ಹರಿಪ್ರಸಾದ್ ಹೇಳಿಕೆ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.