ತುಮಕೂರು: ರಾಜ್ಯ ಸರ್ಕಾರದ ಆಡಳಿತದ ಬಗ್ಗೆ ಸಚಿವ ಮಾಧುಸ್ವಾಮಿ ( Minister JC Madhuswamy ) ಮಾತನಾಡಿದ್ದಂತ ಆಡಿಯೋ ವೈರಲ್ ( Audio Viral ) ಆಗಿತ್ತು. ಕಾಂಗ್ರೆಸ್ ರಾಜೀನಾಮೆಗೂ ಒತ್ತಾಯಿಸಿತ್ತು. ಆದ್ರೇ.. ಆ ಆಡಿಯೋ ತುಂಬಾ ಹಳೆಯದಾಗಿದೆ. ನನಗೆ ಸರ್ಕಾರ, ಸಿಎಂ ಮೇಲೆ ಗೌರವವಿದೆ. ಒಂದು ವೇಳೆ ಸಿಎಂ ರಾಜೀನಾಮೆ ಕೇಳಿದ್ರೇ.. ನೀಡೋದಕ್ಕೂ ಸಿದ್ಧ ಎಂಬುದಾಗಿ ಹೇಳಿದ್ದಾರೆ.
‘ಅಪಘಾತರಹಿತ ಸೇವೆ’ ಸಲ್ಲಿಸಿದಂತ ಬಿಎಂಟಿಸಿಯ ‘168 ಚಾಲಕ’ರಿಗೆ ‘ಮುಖ್ಯಮಂತ್ರಿ ಚಿನ್ನದ ಪದಕ’
ಇಂದು ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಜೆಸಿ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಈಗ ವೈರಲ್ ಆಗಿರುವಂತ ಆಡಿಯೋ ಯಾವಾಗಿನದು ಎಂಬ ನೆನಪು ಇಲ್ಲ. ಆ ಆಡಿಯೋ ತುಂಬಾ ಹಳೆಯದಾಗಿದೆ. ನನಗೆ ಸರ್ಕಾರ, ಸಿಎಂ ಬೊಮ್ಮಾಯಿ ಮೇಲೆ ಗೌರವವಿದೆ ಎಂಬುದಾಗಿ ಹೇಳಿದರು.
ಅನಾಮಿಕ ವ್ಯಕ್ತಿ ಕಾಲ್ ಮಾಡಿದಾಗ ನಾನು ಮ್ಯಾನೇಜ್ ಮಾಡೋದಕ್ಕೆ ಮಾತನಾಡಿದ್ದೆ. ನನಗೆ ಆತ ಕಾಲ್ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾನೆ ಎಂಬುದು ಗೊತ್ತಿಲ್ಲ. ಹೀಗೆ ಮಾಡೋದು ಅಪರಾಧ ಆಗಿದೆ. ಹೀಗಾಗಿ ಆ ಆಡಿಯೋ ಬಿಡುಗಡೆ, ಪ್ರಸಾರ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ನನ್ನ ವಿರುದ್ಧ ಯಾರೂ ಷಡ್ಯಂತ್ರ ಮಾಡಿಲ್ಲ. ಹೀಗಾಗಿ ನಾನು ಯಾರ ಮೇಲೂ ದೂಷಣೆ ಮಾಡಲಾಗೋದಿಲ್ಲ. ಈಗಾಗಲೇ ಸಿಎಂ ಈ ಬಗ್ಗೆ ಕೇಳಿದಾಗ ಸ್ಪಷ್ಟನೆ ನೀಡಿದ್ದೇನೆ. ಆಡಿಯೋ ವೈರಲ್ ವಿಚಾರವಾಗಿಯೇ ರಾಜೀನಾಮೆ ನೀಡುವ ಪ್ರಮೇಯವಿಲ್ಲ. ಒಂದು ವೇಳೆ ಸಿಎಂ ರಾಜೀನಾಮೆ ಕೇಳಿದ್ರೇ.. ನಾನು ಕೊಡೋದಕ್ಕೂ ಸಿದ್ಧನಿದ್ದೇನೆ ಎಂದರು.