ಬೆಂಗಳೂರು: ನಗರದಲ್ಲಿ ಗಣೇಶೋತ್ಸವಕ್ಕೆ ಕೊರೋನಾ ಬಳಿಕ, ಎರಡು ವರ್ಷಗಳ ನಂತ್ರ ಗಣೇಶ ಹಬ್ಬವನ್ನು ( Ganesh Festival ) ಸಡಗರ ಸಂಭ್ರಮದಿಂದ ಆಚರಿಸಲಾಗುತ್ತದೆ. ಆಗಸ್ಟ್ 31, 2022ರಂದು ಗಣೇಶ ಹಬ್ಬದಂದು ಕೂರಿಸಿದಂತ ಗಣಪತಿಗಳನ್ನು ನಗರದ ವಿವಿಧ ಪ್ರದೇಶಗಳಲ್ಲಿ ಬಿಬಿಎಂಪಿಯಿಂದ ( BBMP ) ನಿಗದಿಪಡಿಸಿದ್ದಂತ ಪ್ರದೇಶಗಳಲ್ಲಿ ವಿಸರ್ಜನೆ ಮಾಡಲಾಗಿದೆ. ಹಾಗಾದ್ರೇ ಯಾವ ವಲಯ ವ್ಯಾಪ್ತಿಯಲ್ಲಿ ಎಷ್ಟು ಗಣೇಶ ಮೂರ್ತಿಗಳನ್ನು ಈವರೆಗೆ ವಿಸರ್ಜನೆ ಮಾಡಲಾಗಿದೆ ಎನ್ನುವ ಬಗ್ಗೆ ಮುಂದೆ ಓದಿ..
BIGG NEWS : ಬೆಂಗಳೂರಿಗೆ ಆಗಮಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್ : ನಗರದಲ್ಲಿ ಭಾರೀ ಕಟ್ಟೆಚ್ಚರ
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜನೆ ಮಾಡಿರುವ ಮಾಹಿತಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದಿನಾಂಕ: 31/08/2022 ರಂದು ಸಂಚಾರಿ/ಮೊಬೈಲ್ ಟ್ಯಾಂಕರ್ ಹಾಗೂ ಕಲ್ಯಾಣಿ/ಹೊಂಡಗಳಲ್ಲಿ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ.
BIGG NEWS: ಹುಬ್ಬಳ್ಳಿಯ ಈದ್ಗಾ ಮೈದಾನದಿಂದ ʼಸಾವರ್ಕರ್ʼ ಪೋಸ್ಟರ್ ಇರುವ ಬ್ಯಾನರ್ ತೆರವು
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜನೆ ಮಾಡಿರುವ ಮಣ್ಣಿನ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ:
ಪಶ್ಚಿಮ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 34,471
ಪಿ.ಓ.ಪಿ ಗಣೇಶ ಮೂರ್ತಿಗಳು: 306
ದಕ್ಷಿಣ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 68,521
ಪಿ.ಓ.ಪಿ ಗಣೇಶ ಮೂರ್ತಿಗಳು: 11,402
ದಾಸರಹಳ್ಳಿ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 1,382
ಪಿ.ಓ.ಪಿ ಗಣೇಶ ಮೂರ್ತಿಗಳು: 22
ಪೂರ್ವ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 12,750
ಪಿ.ಓ.ಪಿ ಗಣೇಶ ಮೂರ್ತಿಗಳು: 0
ಆರ್.ಆರ್.ನಗರ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 14,479
ಪಿ.ಓ.ಪಿ ಗಣೇಶ ಮೂರ್ತಿಗಳು: 152
ಬೊಮ್ಮನಹಳ್ಳಿ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 6,136
ಪಿ.ಓ.ಪಿ ಗಣೇಶ ಮೂರ್ತಿಗಳು: 131
ಯಲಹಂಕ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 6000
ಪಿ.ಓ.ಪಿ ಗಣೇಶ ಮೂರ್ತಿಗಳು: 73
ಮಹದೇವಪುರ ವಲಯ
ಮಣ್ಣಿನ ಗಣೇಶ ಮೂರ್ತಿಗಳು: 4155
ಪಿ.ಓ.ಪಿ ಗಣೇಶ ಮೂರ್ತಿಗಳು: 0