ದಾವಣಗೆರೆ : ಶಾಸಕ ಇಕ್ಬಾಲ್ ಹುಸೇನ್ ಜನವರಿ 6ನೇ ತಾರೀಕು ಅಥವಾ 9ನೇ ತಾರೀಕಿನಂದು ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ ಇವರ ಒಂದು ಹೇಳಿಕೆಗೆ ಶಾಸಕ ಶಿವಗಂಗಾ ಬಸವರಾಜ ಪ್ರತಿಕ್ರಿಯೆ ನೀಡಿದ್ದು ಡಿಕೆ ಶಿವಕುಮಾರ್ ಸಿಎಂ ಆದರೆ ಮೊದಲು ಖುಷಿಪಡುವುದು ನಾನೇ ಡಿಕೆ ಶಿವಕುಮಾರ್ ನನಗೆ ಆರಾಧ್ಯ ದೈವ ಎಂದು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದು ಯತಿಂದ್ರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಹೈಕಮಾಂಡ್ ಗೆ ತಿಳಿಸುವುದಾಗಿ ಹೀಗಾಗಿ ಕಲೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಕ್ರಮದ ಬಗ್ಗೆ ತೀರ್ಮಾನ ಮಾತಾಡುತ್ತಾರೆ. ಯತೀಂದ್ರ ಮಾತನಾಡಿದರು ತಪ್ಪು ನಾನು ಮಾತನಾಡಿದರು ಕೂಡ ಅದು ತಪ್ಪೇ. ಈ ಹಿಂದೆ ಮಾತನಾಡಿದವರು ಈಗ ಅನುಭವಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಕೆಎನ್ ರಾಜಣ್ಣಗೆ ಶಾಸಕ ಶಿವಗಂಗಾ ಬಸವರಾಜ್ ಟಾಂಗ್ ನೀಡಿದರು.
ಜನವರಿ 6 ರಂದು ಡಿಕೆ ಶಿವಕುಮಾರ್ ಪಟ್ಟಾಭಿಷೇಕ ಆದರೆ ನಾನೇ ಮೊದಲು ಖುಷಿ ಪಡುತ್ತೇನೆ ಡಿಸಿಎಂ ಡಿಕೆ ಶಿವಕುಮಾರ್ ಗೆ ಆರು ಹಾಗೂ 9 ಅದೃಷ್ಟದ ಸಂಖ್ಯೆಗಳು. ಇವಳೇ ಡಿಕೆ ಶಿವಕುಮಾರ್ ಸಿಎಂ ಆದರೆ ನಾನೇ ಮೊದಲು ಖುಷಿ ಪಡುತ್ತೇನೆ ಡಿಕೆ ಶಿವಕುಮಾರ್ ಆರಾಧ್ಯ ದೈವ ಡಿನ್ನರ್ ಮೀಟಿಂಗಿಗೆ ವಿಶೇಷವಾದ ಅರ್ಥ ಕಲ್ಪಿಸುವುದು ಬೇಡ. ಶಾಸಕರು ಎಲ್ಲರೂ ನಿತ್ಯ ಸೇರುತ್ತಾ ಇರುತ್ತೇವೆ. ಜೊತೆಗೆ ಊಟ ಮಾಡುತ್ತೇವೆ ಊಟ ಉಪಹಾರ ಸಾಮಾನ್ಯ ಅವುಗಳಿಗೆ ವಿಶೇಷತೆ ಕಲ್ಪಿಸಬೇಡಿ ಎಂದು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಹೇಳಿಕೆ ನೀಡಿದರು.








