ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಅತ್ಯಂತ ಪ್ರಮುಖವಾದಂತಹ ಕ್ಷೇತ್ರ ಹಾಗೂ ಜಿದ್ದಾಜಿದ್ದಿ ಕ್ಷೇತ್ರ ಅಂದರೆ ಬೆಂಗಳೂರು ಗ್ರಾಮಾಂತರವಾಗಿತ್ತು. ಈ ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾಕ್ಟರ್ ಸಿ ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ ವಿರುದ್ಧ ಭರ್ಜರಿ ಜಯ ದಾಖಲಿಸಿದ್ದಾರೆ. ತಮ್ಮನ ಸೋಲಿನ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಇದು ನನ್ನ ವಯಕ್ತಿಕ ಸೋಲು ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರದಲ್ಲಿ ಡಿಕೆ ಸುರೇಶ್ ಸೋಲಿನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಇದು ನನ್ನ ವೈಯಕ್ತಿಕ ಸೋಲು.ಅದನ್ನು ಒಪ್ಪಿಕೊಳ್ಳುತ್ತೇನೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ಬೆಂಗಳೂರು ಗ್ರಾಮಾಂತರದಲ್ಲಿ ಓವರ್ ಕಾನ್ಫಿಡೆನ್ಸ್ ನಲ್ಲಿ ಇದ್ದೆ. ಬಿಜೆಪಿ ನಾಯಕರು ಕೂಡ ಒಳ್ಳೆಯ ತಂತ್ರಗಾರಿಕೆಯನ್ನು ಮಾಡಿದ್ದರು ಎಂದರು.
ಜೆಡಿಎಸ್ ಬದಲಿ ಬಿಜೆಪಿಯಿಂದಲೇ ಅಭ್ಯರ್ಥಿಯನ್ನು ನಿಲ್ಲಿಸಿದರು. ಮಾಗಡಿ ರಾಮನಗರ ಕ್ಷೇತ್ರದಲ್ಲಿ ನಮಗೆ ಚೆನ್ನಾಗಿ ಮತ ಬಂದಿತ್ತು. ಆದರೆ ಬೆಂಗಳೂರು ದಕ್ಷಿಣ ಭಾಗದಲ್ಲಿ ಕಡಿಮೆ ಮತಗಳು ಬಂದಿವೆ.ಎಚ್ ಡಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ ಸೋತಿದ್ದರು.ಈಗ ನನ್ನ ಸಹೋದರ ಸೋತಿದ್ದಾರೆ. ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 60,000 ಲೀಡ್ ನಿರೀಕ್ಷೆ ಇತ್ತು. ಆದರೆ ಕನಕಪುರದಲ್ಲಿ ಬಂದಿದ್ದು 20,000 ಮತ ಲೀಡ್ ಅಷ್ಟೇ ಎಂದು ಡಿಕೆ ಶಿವಕುಮಾರ್ ತಿಳಿಸಿದರು.
ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಕೆ ಸುರೇಶ್ ಸ್ಪರ್ಧೆಯ ವಿಚಾರವಾಗಿ ಮಾತನಾಡಿದ ಅವರು, ಚನ್ನಪಟ್ಟಣ ಬಗ್ಗೆ ಗೊತ್ತಿಲ್ಲ. ಸೋಲಿನ ದುಃಖದಿಂದ ಹೊರಬಂದಿಲ್ಲ ಇನ್ನೂ ನಿದ್ರೆ ಮೂಡ್ನಲ್ಲೇ ಇದ್ದೇನೆ ಎಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.