ನವದೆಹಲಿ: ಇಡಿ, ಸಿಬಿಐ ಕೇಸ್ ನಿಂದಾಗಿ ( CBI Case ) ನನ್ನ ಜೊತೆಗೆ ಬ್ಯುಸಿನೆಸ್, ನನ್ನ ಪೋನ್ ರಿಸೀವ್ ಮಾಡೋದಕ್ಕೆ ಎಲ್ಲರೂ ಭಯ ಪಡುತ್ತಿದ್ದಾರೆ. ಮುಂದಿನ ವಾರ ಸಿಬಿಐ ವಿಚಾರಣೆ, ಕೋರ್ಟ್ ಕೇಸ್ ಇದೆ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ( DK Shivakumar ) ಹೇಳಿದ್ದಾರೆ.
ಇಂದು ಇಡಿ ವಿಚಾರಣೆಗೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಮೂರನೇ ಬಾರಿ ಇಡಿ ಅಧಿಕಾರಿಳು ಸಮನ್ಸ್ ನೀಡಿದ್ದಾರೆ. ನನ್ನ ಜೊತೆ ವ್ಯವಹಾರ ಮಾಡಲು ಹೆದರುತ್ತಿದ್ದಾರೆ. ನನ್ನ ಜೊತೆ ವ್ಯವಹರಿಸುತ್ತಿದ್ದವರನ್ನು ವಿಚಾರಣೆ ಮಾಡುತ್ತಿದ್ದಾರೆ. ನನ್ನ ಪೋನ್ ರಿಸೀವ್ ಮಾಡಲು ಭಯಪಡುತ್ತಿದ್ದಾರೆ ಎಂದರು.
Viral News : ಮೂವರು ವ್ಯಕ್ತಿಗಳಿಂದ ನಾಯಿಯನ್ನು ನೇಣು ಬಿಗಿದು ಸಾಯಿಸಿದ ‘ಹೃದಯ ವಿದ್ರಾವಕ video’ | WATCH
ನನಗೆ ಒಂದಾದ ಮೇಲೆ ಒಂದು ಸಮನ್ಸ್ ನೀಡುತ್ತಿದ್ದಾರೆ. ಮುಂದಿನ ವಾರ ಸಿಬಿಐ ವಿಚಾರಣೆ, ಕೋರ್ಟ್ ಕೇಸ್ ಇದೆ ಎಂಬುದಾಗಿ ಇಡಿ ನೀಡಿದ್ದಂತ ಸಮನ್ಸ್ ಸಂಬಂಧ ವಿಚಾರಣೆಗೆ ಹಾಜರಾಗುವ ಮುನ್ನಾ ಡಿ.ಕೆ ಶಿವಕುಮಾರ್ ಹೇಳಿದರು.