ನ್ಯೂಯಾರ್ಕ್: ಭಾರತ ಸೇರಿಂದತೆ ಇತರ ದೇಶಗಳಲ್ಲೂ ಸಹ ದೀಪಾವಳಿ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮ ದೇಶದಲ್ಲಿ ದೀಪಾವಳಿ ಹಬ್ಬಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಆದ್ರೆ, ಇದೀಗ ನ್ಯೂಯಾರ್ಕ್ನಲ್ಲೂ ದೀಪಾವಳಿಯ ಪ್ರಯುಕ್ತ ಸಾರ್ವಜನಿಕ ಶಾಲಾ ರಜೆ ಎಂದು ಘೋಷಿಸಲಾಗಿದೆ ಎಂದು ಅಲ್ಲಿನ ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರ
ದೀಪಾವಳಿಯು ನ್ಯೂಯಾರ್ಕ್ ನಗರದಲ್ಲಿ 2023 ರಿಂದ ಸಾರ್ವಜನಿಕ ಶಾಲಾ ರಜೆಯಾಗಿರುತ್ತದೆ ಎಂದು ಮೇಯರ್ ಎರಿಕ್ ಆಡಮ್ಸ್ ಹೇಳಿದ್ದಾರೆ. ಇದರಿಂದ ಮಕ್ಕಳಿಗೆ ಹಬ್ಬದ ಬಗ್ಗೆ ಅರಿವು ಮೂಡಿಸಲು ಉತ್ತೇಜಿಸುತ್ತದೆ ಮತ್ತು ಹಬ್ಬದ ಮಹತ್ವದ ಬಗ್ಗೆ ಸಂದೇಶವನ್ನು ಸಾರುತ್ತದೆ ಎಂದು ಹೇಳಿದ್ದಾರೆ.
ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್ಕುಮಾರ್ ಮತ್ತು ನ್ಯೂಯಾರ್ಕ್ ಸಿಟಿ ಸ್ಕೂಲ್ಸ್ ಚಾನ್ಸೆಲರ್ ಡೇವಿಡ್ ಬ್ಯಾಂಕ್ಸ್ ಜೊತೆಗೂಡಿದ ಆಡಮ್ಸ್ ಅವರು ಪ್ರಚಾರದ ಸಮಯದಲ್ಲಿ ತಮ್ಮ ಸಂಭಾಷಣೆಯಲ್ಲಿ ದೀಪಾವಳಿ ಮತ್ತು ಬೆಳಕಿನ ಹಬ್ಬ ಎಂದರೆ ಏನು ಎಂಬುದರ ಕುರಿತು ಸಾಕಷ್ಟು ತಿಳಿದುಕೊಂಡಿದ್ದೇನೆ ಎಂದು ಗುರುವಾರ ಹೇಳಿದರು.
ನ್ಯೂಯಾರ್ಕ್ ನಗರದ ಸಾರ್ವಜನಿಕ ಶಾಲೆಗಳಲ್ಲಿ ದೀಪಾವಳಿಯನ್ನು ರಜಾದಿನವೆಂದು ಘೋಷಿಸಿದ ಅವರು, “ಈ ಆಚರಣೆಯ ಸಮಯವನ್ನು ಅಂಗೀಕರಿಸುವ ಅಸಂಖ್ಯಾತ ಸಂಖ್ಯೆಯ ಜನರಿಗೆ ನಾವು ಜೋರಾಗಿ ಮತ್ತು ಸ್ಪಷ್ಟವಾದ ಸಂದೇಶವನ್ನು ಕಳುಹಿಸಲು ಬಯಸುತ್ತೇವೆ. ಇದು ಶೈಕ್ಷಣಿಕ ಕ್ಷಣವಾಗಿದೆ. ಏಕೆಂದರೆ, ನಾವು ದೀಪಾವಳಿಯನ್ನು ಆಚರಿಸುವ ಮೂಲಕ ನಾವು ದೀಪಾವಳಿಯ ಬಗ್ಗೆ ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸಲಿದ್ದೇವೆ. ಬೆಳಕಿನ ಹಬ್ಬ ಎಣದರೇನು ಮತ್ತು ನಿಮ್ಮೊಳಗೆ ದೀಪವನ್ನು ಹೇಗೆ ಬೆಳಗಿಸಬೇಕು ಎಂಬುದರ ಕುರಿತು ನಾವು ಮಾತನಾಲಿದ್ದೇವೆ ಎಂದು ಹೇಳಿದರು.
BIG NEWS: ಬಿಲಿಯನೇರ್ ʻಎಲಾನ್ ಮಸ್ಕ್ʼ ʻಟ್ವಿಟರ್ʼನ ಮಾಲೀಕರಾದ್ರೆ, ಕಂಪನಿಯ 75% ಉದ್ಯೋಗಿಗಳ ವಜಾ ಸಾಧ್ಯತೆ: ವರದಿ
BIGG NEWS: ಚಿಕ್ಕಬಳ್ಳಾಪುರದಲ್ಲಿ ಎನ್ ಇಪಿ ಪೊಲಿಟಿಕಲ್ ಸೈನ್ಸ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ
BIGG NEWS : ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ : ಮದರಸಾಗಳಲ್ಲಿ ಹೊಸ ಶಿಕ್ಷಣ ಪದ್ಧತಿ ಜಾರಿ?