ಪುಣೆ: ವಿದೇಶಗಳಲ್ಲಿ ಕೊರೋನಾ ಸೋಂಕಿನ ಕೇಸ್ ಗಳ ( Coronavirus Case ) ಸಂಖ್ಯೆ ಮತ್ತೆ ಏರಿಕೆ ಕಂಡಿದೆ. ಅದರಲ್ಲೂ ಚೀನಾದಲ್ಲಿ ಭಾರೀ ಆತಂಕವನ್ನೇ ಹುಟ್ಟಿಸಿದೆ. ಇದೀಗ ಚೀನಾದಲ್ಲಿ ಸ್ಪೋಟಕೊಂಡು, ಹೆಚ್ಚು ಆತಂಕ ಹುಟ್ಟಿಸಿರುವಂತ ಬಿಎಫ್.7 ಒಮಿಕ್ರಾನ್ ಉಪತಳಿ ( Omicron Variant ) ಮಾತ್ರ, ಎರಡು ವರ್ಷದ ಹಿಂದೆಯೇ ಪತ್ತೆಯಾಗಿದ್ದು ಎಂಬುದಾಗಿ ತಿಳಿದು ಬಂದಿದೆ.
“ನನ್ನ ಹಳೆ ನಂಬರಿನ್ನೂ ಚಾಲ್ತಿಯಲ್ಲಿದೆ, ಕೋವಿಡ್ ಸಹಾಯಕ್ಕಾಗಿ ಕರೆ ಮಾಡ್ಬೋದು” ; ನಟ ಸೋನು ಸೂದ್
ಹೌದು ವಿದೇಶಗಳಲ್ಲಿ ಸ್ಪೋಟಕೊಂಡಿರುವಂತ ಒಮಿಕ್ರಾನ್ ಉಪತಳಿ ಬಿಎಫ್.7 ಹೊಸದಾಗಿ ಪತ್ತೆಯಾದ ತಳಿಯೇನೂ ಅಲ್ಲ. 2021ರ ಫೆಬ್ರವರಿಯಲ್ಲಿ ಮೊದಲು ಕಾಣಿಸಿಕೊಂಡಿದ್ದಂತ ಉಪತಳಿಯಾಗಿದೆ. ಇದೀಗ ಈ ತಳಿ ವಿವಿಧ ದೇಶಗಳಲ್ಲಿ ಸುಮಾರು ಎರಡು ವರ್ಷಗಳ ಬಳಿಕ ಕಾಣಿಸಿಕೊಂಡಿದೆ.
2023 Election: ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಇಲ್ಲ – ಸಿಎಂ ಬೊಮ್ಮಾಯಿ
ಅಂದಹಾಗೇ ಇದುವರೆಗೂ ಜಿನೋಮ್ ಸೀಕ್ವೆನ್ಸಿಂಗ್ ವೇಳೆ ಖಚಿತಪಟ್ಟ ಪ್ರಕರಣಗಳ ಸಂಖ್ಯೆ 47,881 ಮಾತ್ರವಾಗಿದೆ ಎಂಬುದಾಗಿ ಅಂಕಿ ಅಂಶಗಳಿಂದ ತಿಳಿದು ಬಂದಿದೆ. ಈ ಉಪತಳಿ ಕಾಣಿಸಿಕೊಂಡ 91 ದೇಶಗಳ ಪೈಕಿ ಎಲ್ಲೂ ಯಾವುದೇ ಅನಾಹುತವನ್ನು, ಹೆಚ್ಚು ಪರಿಣಾಮವನ್ನು ಬೀರಿಲ್ಲ. ಹೀಗಾಗಿ ಭಾರತದಲ್ಲಿಯೂ ಈ ಉಪ ತಳಿ ಕುರಿತಂತೆ ಯಾವುದೇ ಆತಂಕ ಬೇಡ ಎಂಬುದಾಗಿ ತಜ್ಞರು ಹೇಳುತ್ತಿದ್ದಾರೆ.