ಡೆನ್ಮಾರ್ಕ್‌ನಲ್ಲಿ ನಡೆದ ಸಂಸತ್ತಿನ ಚುನಾವಣೆಗಳ ಸುಮಾರು 10 ವಾರಗಳ ನಂತರ ಮೈತ್ರಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಮೆಟ್ಟೆ ಫ್ರೆಡೆರಿಕ್ಸೆನ್ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
ಸೋಷಿಯಲ್ ಡೆಮೋಕ್ರಾಟ್ ಪಕ್ಷದ ಫ್ರೆಡೆರಿಕ್ಸೆನ್ ಅವರು ನಾಲ್ಕು ಪಕ್ಷಗಳನ್ನು ಒಳಗೊಂಡ ಹೊಸ ಕೇಂದ್ರ-ಎಡ (centre-left) ಸರ್ಕಾರವನ್ನು ಮುನ್ನಡೆಸಲಿದ್ದಾರೆ.
ಸೋಮವಾರ ತಡರಾತ್ರಿ, ಫ್ರೆಡೆರಿಕ್ಸೆನ್ ಅವರು ತಮ್ಮ ಸೋಷಿಯಲ್ ಡೆಮೋಕ್ರಾಟ್ಸ್, ಸೋಷಿಯಲಿಸ್ಟ್ ಪೀಪಲ್ಸ್ ಪಾರ್ಟಿ, ಬಲಪಂಥೀಯ ಉದಾರವಾದಿ ಪಕ್ಷವಾದ ವೆನ್ಸ್ಟ್ರೆ (Venstre) ಮತ್ತು ಮಧ್ಯಮಪಂಥೀಯ ಮಾಡರೇಟ್ಸ್ ಪಕ್ಷಗಳನ್ನೊಳಗೊಂಡ ಮೈತ್ರಿಕೂಟವನ್ನು ರಚಿಸುವ ತಮ್ಮ ಇಂಗಿತವನ್ನು ರಾಜ ಫ್ರೆಡೆರಿಕ್ X ಅವರಿಗೆ ತಿಳಿಸಿದರು.
”ರಾಜಮನೆತನದ ಆಹ್ವಾನದ ಮೇರೆಗೆ, ಹಂಗಾಮಿ ಪ್ರಧಾನಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರು ಇಂತಹ ಸರ್ಕಾರವನ್ನು ರಚಿಸಲು ಮುಂದಾಗಿದ್ದಾರೆ” ಎಂದು ಡೆನ್ಮಾರ್ಕ್‌ನ ರಾಜಮನೆತನದ ಹೇಳಿಕೆ ತಿಳಿಸಿದೆ.ಫ್ರೆಡೆರಿಕ್ಸೆನ್ ಅವರು ಮಂಗಳವಾರ ಹೊಸ ಸರ್ಕಾರದ ಆದ್ಯತೆಗಳನ್ನು ಮಂಡಿಸಲು ಯೋಜಿಸಿದ್ದಾರೆ. ಬುಧವಾರದಂದು ಹೊಸ ಸಚಿವರನ್ನು ರಾಜರಿಗೆ ಪರಿಚಯಿಸಲು ದಿನಾಂಕ ನಿಗದಿಪಡಿಸಲಾಗಿದೆ.








