ದೆಹಲಿ: ತನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಪ್ರಯಾಣಿಕರೊಬ್ಬರು ಹೇಳಿದ ನಂತ್ರ ಗುರುವಾರ ದೆಹಲಿಗೆ ತೆರಳುತ್ತಿದ್ದ ಇಂಡಿಗೋ ವಿಮಾನವನ್ನು ಪಾಟ್ನಾ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲಾಗಿದೆ ಎಂದು ವರದಿಯಾಗಿದೆ.
ನಿನ್ನೆ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ (6e 2126)ದಲ್ಲಿದ್ದ ಪ್ರಯಾಣಿಕರೊಬ್ಬರು ತನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಹೇಳಿಕೊಂಡಿದ್ದಾರೆ. ಇದನ್ನು ಕೇಳಿದ ಸಿಬ್ಬಂದಿಗಳು ಕೂಡಲೇ ವಿಮಾನವನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿಸಲಾಗಿದೆ ಎಂದು ವರದಿಯಾಗಿದೆ.
ತುರ್ತು ಲ್ಯಾಂಡಿಂಗ್ ನಂತ್ರ, ಬಾಂಬ್ ಸ್ಕ್ವಾಡ್ ಮತ್ತು ಪೊಲೀಸರು ಪರಿಶೀಲನೆ ನಡೆಸಿದರು. ಆದ್ರೆ, ಆತನ ಬ್ಯಾಗನ್ನು ಮತ್ತಷ್ಟು ಪರಿಶೀಲಿಸಲಾಗಿತ್ತಾದರೂ ಬಾಂಬ್ ಪತ್ತೆಯಾಗಿರಲಿಲ್ಲ. ಹೀಗಾಗಿ, ಪ್ರಯಾಣಿಕರನ್ನು ವಶಕ್ಕೆ ಪಡೆಯಲಾಗಿದ್ದು, ವಿಮಾನವನ್ನು ಹೆಚ್ಚಿನ ತಪಾಸಣೆ ನಡೆಸಲಾಗುತ್ತಿದೆ ಎನ್ನಲಾಗಿದೆ.
#UPDATE | A Delhi-bound IndiGo flight (6e 2126) was reportedly grounded at Patna airport after a passenger claimed that he had a bomb in his bag after which his bag was checked and no bomb was found. Passenger arrested, plane being checked further https://t.co/WSDKIXiEGf
— ANI (@ANI) July 21, 2022
Bihar | Visuals from Patna airport where the Bomb squad & Police personnel are conducting inspection after a man in a Delhi-bound flight reportedly claimed that he had a bomb in his bag. His bag was checked further & no bomb was found pic.twitter.com/BkNxpjZ2QC
— ANI (@ANI) July 21, 2022
ಎಲ್ಲಾ ಪ್ರಯಾಣಿಕರನ್ನು ಪಾಟ್ನಾ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೋಗುವ ಇಂಡಿಗೋ ವಿಮಾನದಿಂದ (6e 2126) ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಇನ್ನೂ, ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
BIGG NEWS : ನೀತಿ ಆಯೋಗದ ನಾವೀನ್ಯತಾ ಸೂಚ್ಯಂಕ ಬಿಡುಗಡೆ ; ಸತತ 3ನೇ ವರ್ಷವೂ ‘ಕರ್ನಾಟಕಕ್ಕೆ ಅಗ್ರಸ್ಥಾನ’