ಬೆಂಗಳೂರು: ಕೋವಿಡ್ ಕಾರಣದಿಂದ ಕಳೆದ ಮೂರು ವರ್ಷಗಳಿಂದ ಸಾಧಾರಣವಾಗಿ ದತ್ತ ಜಯಂತಿಯನ್ನು ಆಚರಿಸಲಾಗಿತ್ತು. ಈಗ ಕೊರೋನಾ ಪ್ರಮಾಣ ಕಡಿಮೆಯಾಗಿರುವುದರಿಂದ ಈ ಬಾರಿ ಅದ್ಧೂರಿಯಾಗಿ ದತ್ತ ಜಯಂತಿ ಆಚರಣೆ ಮಾಡುವುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಘೋಷಿಸಿದರು.
BREAKING: ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಬಾಲಕ ಸಾವು ಪ್ರಕರಣ: ಕೆಲಸದಿಂದ ಆಂಬುಲೆನ್ಸ್ ಚಾಲಕ ವಜಾ
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ದತ್ತ ಪೀಠದ ಬಗ್ಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇನೆ. ಅರ್ಚಕರ ನೇಮಕ ಮಾಡಲು ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ. ದತ್ತಾತ್ರೇಯ ದೇವರ ಹೆಸರಿನಲ್ಲಿ 1680 ಎಕರೆ ಜಾಗವಿದೆ. ಆ ಜಾಗವನ್ನು ಅಂದಿನ ಕಾಲದ ಸಚಿವರ ಹೆಸರಿಗೆ ಅಕ್ರಮವಾಗಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಜಾಗ ಮಂಜೂರು ಮಾಡಲಾಗಿದೆ. ಜಾಗ ಮಂಜೂರು ಆಗಿರುವ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಬೇಕು. ಮರಳಿ ದತ್ತಾತ್ರೇಯ ದೇವರ ಜಾಗವನ್ನು ನೀಡಬೇಕು ಎಂಬುದಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಒತ್ತಾಯಿಸಿದರು.
ಕೋಲಾರದಲ್ಲಿ ದಲಿತ ಯುವಕ ಉದಯ್ ಆತ್ಮಹತ್ಯೆ ಕೇಸ್: ಇಬ್ಬರು ಆರೋಪಿಗಳ ಬಂಧನ