ಕೋಲಾರ: ನಗರದಲ್ಲಿನ ದಲಿತ ಯುಕನೊಬ್ಬ ನಿಂದನೆಯಿಂದಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದನು. ಈ ಪ್ರಕರಣ ಸಂಬಂಧ ಇಂದು ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ನಿನ್ನೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ದಲಿತ ಯುವಕ ಉದಯ್ ಆತ್ಮಹತ್ಯೆ ಪ್ರಕರಣ ಆರೋಪಿಗಳ ಬಂಧನ ಮಾಡುವಂತೆ ಪೊಲೀಸರಿಗೆ ಖಡಕ್ ಕ್ಲಾಸ್ ತೆಗೆದುಕೊಂಡಿದ್ದರು. ಈ ಬೆನ್ನಲ್ಲೇ ಇಂದು ನಂಗಲಿ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನೂ ದಲಿತ ಯುವಕ ಉದಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಮತ್ತಿಬ್ಬರು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಅವರ ಪತ್ತೆಗೂ ನಂಗಲಿ ಠಾಣೆಯ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಮೂಲಕ ದಲಿತ ಯುವಕ ಉದಯ್ ಆತ್ಮಹತ್ಯೆಗೆ ನಿಂದಿಸಿದಂತ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದಂತೆ ಆಗಿದೆ.
BREAKING: ಮಧುಗಿರಿಯ ಕೊಡಿಗೇನಹಳ್ಳಿಯಲ್ಲಿ ಬಾಲಕ ಸಾವು ಪ್ರಕರಣ: ಕೆಲಸದಿಂದ ಆಂಬುಲೆನ್ಸ್ ಚಾಲಕ ವಜಾ
ಅಂದಹಾಗೇ ಕೋಲಾರ ಜಿಲ್ಲೆಯ ಮುಳುಬಾಗಿಲು ತಾಲೂಕಿನ ಬೇವನಹಳ್ಳಿ ಗ್ರಾಮದ ದಲಿತ ಯುವಕ ಉದಯ್ ಗೆ ನಾಲ್ವರು ನಿಂದನೆ ಮಾಡಿದ್ದರು. ಈ ನಿಂದನೆಯಿಂದಾಗಿ ಬೇಸತ್ತು ಉದಯ್ ಆತ್ಮಹತ್ಯೆಗೆ ಶರಣಾಗಿದ್ದನು.