ಚಿತ್ರದುರ್ಗ: ಸಿ.ಟಿ ರವಿ ( BJP CT Ravi ) ಅವರು 2007ರಲ್ಲಿ ಎಲ್ಲಿ ಬಂದು ಯಾರ ಬಳಿ ಮತ್ತು ಯಾವುದಕ್ಕಾಗಿ ಬಕೆಟ್ ಹಿಡಿದರು ಎಂಬುದನ್ನು ಮೊದಲು ನೆನಪಿಸಿಕೊಳ್ಳಲಿ. ಮತ್ತೊಬ್ಬರಿಗೆ ಬಕೆಟ್ ರಾಜಕಾರಣಿ ಎಂದು ಹೇಳುವ ನೈತಿಕತೆಯೇ ಅವರಿಗಿಲ್ಲ ಎಂದು ಚಾಮರಾಜಪೇಟೆ ಶಾಸಕರು ಮತ್ತು ಮಾಜಿ ಸಚಿವರಾದ ಬಿ ಜೆಡ್ ಜಮೀರ್ ಅಹ್ಮದ್ ಖಾನ್ ( MLA Zameer Ahmad Khan ) ತಿರುಗೇಟು ನೀಡಿದ್ದಾರೆ.
ನಿಮ್ಗೆ ಪೋಟೋಗ್ರಫಿ, ವೀಡಿಯೋಗ್ರಫಿ ಅಂದ್ರೇ ಇಷ್ಟನಾ.? ಇಲ್ಲಿದೆ ತರಬೇತಿಗೆ ಸುವರ್ಣಾವಕಾಶ
ಚಿತ್ರದುರ್ಗದಲ್ಲಿ ಸಿದ್ದರಾಮಯ್ಯ ( Siddaramaiah ) ಅವರ ಕಾರ್ಯಕ್ರಮದ ಪ್ರಯುಕ್ತ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಂಡು, ಜಿಲ್ಲೆಯ ಕಾಂಗ್ರೆಸ್ ಕಛೇರಿಗೆ ಭೇಟಿ ನೀಡುವ ವೇಳೆ, ಅವರು ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಒಕ್ಕಲಿಗರ ಬಗ್ಗೆ ಏನಾದರೂ ತಪ್ಪಾಗಿ ಮಾತನಾಡಿದ್ದರೆ, ತೋರಿಸಲಿ. ತಪ್ಪಿದ್ದರೆ ಕ್ಷಮೆ ಕೇಳುತ್ತೇನೆ. ನಿನ್ನೆಯೇ ನಾನು ಬಿಡಿಸಿ ಹೇಳಿದ್ದೇನೆ. ಹೆಚ್ ಡಿ ದೇವೇಗೌಡರೇ ನನ್ನ ರಾಜಕೀಯ ಗುರುಗಳು. ನಾನು ಒಕ್ಕಲಿಗರ ನಡುವೆ ಬೆಳೆದಿರುವ ಹುಡುಗ. ಉಪ ಚುನಾವಣೆ ವೇಳೆ ದೇವೇಗೌಡರು ನನಗಾಗಿ ಹಗಲು ರಾತ್ರಿ ಶ್ರಮಿಸಿದ್ದಾರೆ ಎಂದರು.
ಯಾರು ಬೇಕಾದರೂ ‘ಶ್ರೀಮಂತ’ರಾಗಬಹುದು: ಅದೇಗೆ ಎನ್ನುವ ‘ಸಿಂಪಲ್ ಮಾಹಿತಿ’ ಇಲ್ಲಿದೆ.!
2023 ರ ಚುನಾವಣೆಗಾಗಿ ನನ್ನ ವಿರುದ್ಧ ಹೀಗೆ ಇಲ್ಲದ ಗಿಮಿಕ್ ಮಾಡಲಾಗುತ್ತಿದೆ. ಸಿ.ಟಿ ರವಿ ಅವರಿಗೆ ಮತ್ತೊಬ್ಬರನ್ನು ಬಕೆಟ್ ರಾಜಕಾರಣಿ ಎಂದು ಕರೆಯುವ ನೈತಿಕತೆಯೇ ಇಲ್ಲ. 2007ರಲ್ಲಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಸದಾಶಿವನಗರದ ಗೆಸ್ಟ್ ಹೌಸಿಗೆ ಬಂದು ಯಾರ ಬಳಿ, ಯಾವುದಕ್ಕಾಗಿ ಬಕೆಟ್ ಹಿಡಿದರು ಎಂಬುದಕ್ಕೆ ನಾನೇ ಸಾಕ್ಷಿ ಇದ್ದೇನೆ. ಮೊದಲು ಅದನ್ನು ನೆನಪಿಸಿಕೊಳ್ಳಲಿ. ಬಕೆಟ್ ರಾಜಕಾರಣವನ್ನು ಅವರನ್ನು ನೋಡಿ ಕಲಿಬೇಕು ಎಂದು ವಾಗ್ಧಾಳಿ ನಡೆಸಿದರು.
‘ಬೆಸ್ಕಾಂ ಗ್ರಾಹಕ’ರಿಗೆ ಗುಡ್ ನ್ಯೂಸ್: ಉಚಿತವಾಗಿ ಗ್ರಾಹಕ ಸ್ನೇಹಿ ‘ಡಿಜಿಟಲ್ ಮೀಟರ್’ ಅಳವಡಿಕೆ
ಎಲ್ಲ ರಾಜಕಾರಣಿಗಳಿಗೂ ಅಧಿಕಾರದ ಆಸೆ ಇರುತ್ತದೆ. ಹಾಗಂತ ನಾವು ಬಿಜೆಪಿ ನಾಯಕರಂತೆ ಜಾತಿ ರಾಜಕಾರಣ ಮಾಡಲು ಹೋಗುವುದಿಲ್ಲ. ನನಗೆ ಹೈಕಮಾಂಡ್ ಯಾವುದೇ ನೋಟೀಸ್ ನೀಡಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಲು ಇಚ್ಛಿಸುತ್ತೇನೆ. ಸುರ್ಜೇವಾಲ ಅವರು ಮಾತ್ರ ದೂರವಾಣಿ ಕರೆ ಮಾಡಿ, ಪಕ್ಷಕ್ಕೆ ಡ್ಯಾಮೇಜ್ ಆಗುವ ಹೇಳಿಕೆ ನೀಡಬೇಡಿ. ಇದೆಲ್ಲ ಬೇಡ, ಇಲ್ಲಿಗೇ ನಿಲ್ಲಿಸಿ ಅಂದಿದ್ದಾರೆ. ನಾವು ಸುಮ್ಮನಾಗಿದ್ದೇವೆ ಅಷ್ಟೇ ಎಂದು ಅವರು ಹೇಳಿದರು.