ಬೆಂಗಳೂರು: ಭಾರತ ಮಹಿಳೆಯ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪ್ ಕರುಣಾ ಜೈನ್ ( former Indian women’s team wicketkeeper, Karuna Jain ) ಅವರು, ಕ್ರಿಕೆಟ್ ನ ಎಲ್ಲಾ ಮಾದರಿಗಳಿಗೆ ಭಾನುವಾರ ನಿವೃತ್ತಿಯನ್ನು ಘೋಷಿಸಿದ್ದಾರೆ.
Karnataka Rain: ಇಂದು, ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಈ ಕುರಿತಂತೆ ಮಾಹಿತಿ ನೀಡಿರುವಂತ ಅವರು, ತುಂಬಾ ಸಂತಸ ಮತ್ತು ತೃಪ್ತಿಯ ಭಾವನೆಯೊಂದಿಗೆ ಕ್ರಿಕೆಟ್ ನ ಎಲ್ಲಾ ಪ್ರಕಾರಗಳಿಂದ ನಿವೃತ್ತಿ ಪ್ರಕಟಿಸುತ್ತಿದ್ದೇನೆ. ಅಲ್ಲದೇ ಆಟಕ್ಕೆ ಮರಳಿ ಕೊಡುಗೆ ನೀಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ‘ಪುಣ್ಯಕೋಟಿ ದತ್ತು ಯೋಜನೆ’ಗೆ ಜುಲೈ.28ಕ್ಕೆ ಚಾಲನೆ
ಅಂದಹಾಗೇ ಬೆಂಗಳೂರು ಮೂಲಕ ಕರುಣಾ ಜೈನ್ ವೃತ್ತಿ ಬದುಕಿನಲ್ಲಿ ಭಾರತ, ಕರ್ನಾಟಕ, ಪುದುಚೇರಿ ಮತ್ತು ದಕ್ಷಿಣ ವಲಯ ತಂಡಗಳನ್ನು ಪ್ರತಿನಿಧಿಸಿದ್ದಾರೆ. 2005ರ ನವೆಂಬರ್ ನಲ್ಲಿ ದಿಲ್ಲಿಯಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಿದ್ದ ಅವರು, 5 ಟೆಸ್ಟ್ ಪಂದ್ಯಗಳನ್ನಾಡಿದ್ದು 195 ರನ್ ಗಳಿಸಿದ್ದಾರೆ. 44 ಏಕದಿನ ಪಂದ್ಯಗಳಲ್ಲಿ 987 ರನ್ ಕಲೆ ಹಾಕಿದ್ದಾರೆ.