ಬೆಂಗಳೂರು : ಬಿಜೆಪಿಯ ಬಣ ಬಡಿದಾಟ ಇದೀಗ ಬೀದಿಗೆ ಬಂದಿದ್ದು, ಒಂದು ಕಡೆ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ ಹಾಗೂ ಸಂಸದ ಕೆ. ಸುಧಾಕರ್ ಅವರು ವಾಗ್ದಾಳಿ ನಡೆಸುತ್ತಿದ್ದರೆ, ಇನ್ನೊಂದು ಕಡೆ ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಅವರ ನಡುವೆ ಬಿರುಕು ಮೂಡಿದೆ. ನಿನ್ನೆ ಬಿವೈ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ ಸಂಸದ ಕೆ ಸುಧಾಕರ್ ವಿರುದ್ಧ ಇದೀಗ ಶಾಸಕ ಎಸ್ ಆರ್ ವಿಶ್ವನಾಥ್ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿರಲು ಕೋವಿಡ್ ಹಗರಣಗಳೆ ಕಾರಣ ಎಂದು ಆರೋಪಿಸಿದ್ದಾರೆ.
ನೀನು ಮಂತ್ರಿ ಆಗಿದ್ದಾಗ ದುರಹಂಕಾರಿ ಆಗಿರಲಿಲ್ಲವೇ? ಶಾಸಕರ ಮಂತ್ರಿಗಳ ಫೋನ್ ತೆಗೆಯುತ್ತಿದ್ದೇಯ? ಯಲಹಂಕ ಕಾರ್ಯಕರ್ತರು ಹೋದರೆ ಮನೆಗೆ ಸೇರಿಸುತ್ತಿದ್ದೆಯ? ನಿನಗೆ ತಾಕತ್ತಿದ್ದರೆ ಬೇರೆ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸು. ಯಲಹಂಕದಲ್ಲಿ ನೀನು ಒಂದು ವೋಟ ಲೀಡರ್ ತೆಗೆದುಕೋ. ಕೋವಿಡ್ನಿಂದ ಸತ್ತ ಆತ್ಮಗಳ ಆಶೀರ್ವಾದ ನಿನಗೆ ಇರಬೇಕು. ಪಕ್ಷದ ಸಿಸ್ಟಮ್ ನಿನಗೆ ಗೊತ್ತಿರಲಿ ಸುಧಾಕರ್.
ಕ್ಷೇತ್ರದಲ್ಲಿ ಬಂದು ನನ್ನ ವಿರುದ್ಧವೇ ಎತ್ತಿ ಕಟ್ಟುವ ಕೆಲಸ ಮಾಡಿದೆ. ಕೇವಲ ಜಿಲ್ಲಾಧ್ಯಕ್ಷರ ವಿಚಾರಕ್ಕೆ ಬಹಿರಂಗವಾಗಿ ಹೇಳಿದ್ದು ತಪ್ಪಲ್ವಾ? ವರಿಷ್ಠರ ಜೊತೆ ಮಾತಾಡಿ ನೀನು ತೀರ್ಮಾನ ತೆಗೆದುಕೊಳ್ಳುವುದು, ಪಕ್ಷ ಬಿಟ್ಟು ಹೋಗ್ತಿಯಾ? ನಿನ್ನ ದುಡ್ಡು ಪ್ರಭಾವವೆಲ್ಲ ನಡೆಯಲ್ಲ. ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಬಲಿಸಿದ್ದು ಗೊತ್ತಿಲ್ವಾ? ಎಂದು ಕಿಡಿ ಕಾರಿದರು.
ಇಷ್ಟ ಇದ್ದರೆ ಇರು. ನಿನ್ನಂತಹ ಲಕ್ಷಾಂತರ ಜನ ಪಕ್ಷದಲ್ಲಿ ಇದ್ದಾರೆ. 40 ವರ್ಷ ರಾಜಕೀಯ ಮಾಡಿ ಬಾಯಿ ಮುಚ್ಚಿಕೊಂಡು ಇದ್ದೇವೆ. ನಾವು ಅಧಿಕಾರಕ್ಕೆ ಬರದಿರಲು ನಿಮ್ಮ ಕೋವಿಡ್ ಹಗರಣಗಳೆ ಕಾರಣ ಎಂದು ಬೆಂಗಳೂರಿನಲ್ಲಿ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಸಂಸದ ಕೆ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.