ಶಿವಮೊಗ್ಗ: ಸಾಹಿತಿ ಕೆ.ಎಸ್. ಭಗವಾನ್ ಗೆ ಸಾಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಸೇಷನ್ ನ್ಯಾಯಾಲಯ ನಿರೀಕ್ಷಿಣಾ ಜಾಮೀನು ಮಂಜೂರು ಮಾಡಿದೆ.
BIGG NEWS: ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಭಾರಿ ಮಳೆ; ಮತ್ತೆ ಹೆಚ್ಚಾದ ರಸ್ತೆಗುಂಡಿಗಳು, ವಾಹನ ಸವಾರರ ಪರದಾಟ
ಭಗವಾನ್ ಅವರು ರಾಮ ಮಂದಿರ ಏಕೆ ಬೇಡ ಎಂಬ ವಿಮರ್ಶಾತ್ಮಕ ಲೇಖನಗಳ ಪುಸ್ತಕವನ್ನು ಪ್ರಕಟಿಸಿದ್ದರು. ಈ ಪುಸ್ತಕ ಹಿಂದು ಧರ್ಮದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಬಂದಿದೆ ಎಂದು ಸಮೀಪದ ಇಕ್ಕೇರಿಯ ಮಹಾಬಲೇಶ್ವರ ಅವರು ಸಾಗರದ JMFC ನ್ಯಾಯಾಲಯದಲ್ಲಿ ಕೇಸು ಹಾಕಿದ್ದರು. ಸಾಹಿತಿ ಭಗವಾನ್ ಅವರಿಗೆ ಸಮನ್ಸ್ ನೀಡಲಾಗಿ ನಿಗದಿತ ದಿನಾಂಕಕ್ಕೆ ಹಾಜರಾಗದ ಕಾರಣ ನ್ಯಾಯಾಲಯ ಇವರ ವಿರುದ್ದ ವಾರೆಂಟ್ ಹೊರಡಿಸಿತ್ತು.
ಈ ನಡುವೆ ಭಗವಾನ್ ಪರ ವಕೀಲರಾದ ಎಚ್. ಬಿ. ರಾಘವೇಂದ್ರ, ಅಬ್ದುಲ್ ರಶೀದ್ ಅವರು ಜಿಲ್ಲಾ ನ್ಯಾಯಾಲಯದಲ್ಲಿ ನಿರೀಕ್ಷಿಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದಂತ ಸಾಗರದ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು, ನಿರೀಕ್ಷಿಣಾ ಜಾಮೀನು ನೀಡಿದೆ. ದೂರುದಾರರ ಪರವಾಗಿ ಕೆ.ವಿ.ಪ್ರವೀಣ್ ವಕೀಲರು ವಾದ ಮಂಡಿಸಿದ್ದರು.
ವರದಿ: ಉಮೇಶ್ ಮೊಗವೀರ, ಸಾಗರ