ಬೆಂಗಳೂರು: ರಾಜ್ಯದ ಅರಣ್ಯ ಕೈಗಾರಿಕಾ ನಿಗಮದ ಅಧಿಕಾರಿಯಾಗಿದ್ದಂತ ಬಿ.ಸಿ ಶಾಂತಕುಮಾರ್ ವಿರುದ್ಧ ಇಡಿ ದಾಖಲಾಗಿದ್ದಂತ ಪ್ರಕರಣದಲ್ಲಿ, ಇದೀಗ ಆರೋಪ ಸಾಭೀತಾಗಿದೆ. ಹೀಗಾಗಿ ಅವರ ವಿರುದ್ಧ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ನಾಳೆ ಪ್ರಕಟಿಸೋ ಸಾಧ್ಯತೆ ಇದೆ.
ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣದಲ್ಲಿ ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿಯಾಗಿದ್ದಂತ ಬಿ.ಸಿ ಶಾಂತಕುಮಾರ್ ವಿರುದ್ಧ ಲೋಕಾಯುಕ್ತ ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು. ಇದೇ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಅವರ ವಿರುದ್ಧ ಕೇಸ್ ದಾಖಲಿಸಿತ್ತು.
‘ದೀಪಾವಳಿ ಹಬ್ಬ’ಕ್ಕೆ ಊರಿಗೆ ಹೋಗುವವರ ಗಮನಕ್ಕೆ: KSRTCಯಿಂದ ‘1500 ಹೆಚ್ಚುವರಿ ಬಸ್ ಸಂಚಾರ
ಈ ಪ್ರಕರಣ ಸಂಬಂಧ ಇಡಿಯಿಂದ ಬೆಂಗಳೂರಿನ ಸಿಸಿ ಹೆಚ್ 48ನೇ ವಿಶೇಷ ನ್ಯಾಯಾಲಯಕ್ಕೆ ಸಂಪೂರ್ಣ ಆಸ್ತಿ ವಿವರವನ್ನು ಸಲ್ಲಿಸಿತ್ತು. ಇಡಿ ಸಲ್ಲಿಸಿದ್ದಂತ ಆರೋಪ ಪಟ್ಟಿಯಲ್ಲಿ ಬಿ.ಸಿ ಶಾಂತಕುಮಾರ್ ಶೇ.122ರಷ್ಟು ಆದಾಯ ಮೀರಿ ಆಸ್ತಿಯನ್ನು ಹೊಂದಿದ್ದು ಉಲ್ಲೇಖಿಸಿತ್ತು. 84.42 ಲಕ್ಷ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರೋದಾಗಿ ಆರೋಪಿಸಿತ್ತು.
ನ್ಯಾಯಾಲಯದಲ್ಲಿ ಇಡಿ ಪರ ವಿಶೇಷ ಅಭಿಯೋಜಕ ರಾಜೇಶ್ ರೈ ವಾದಿಸಿದ್ದರು. ಈ ವಾದ-ಪ್ರತಿವಾದವನ್ನು ಆಲಿಸಿದಂತ ನ್ಯಾಯಾಲಯವು ನಾಳೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸೋ ಸಾಧ್ಯತೆ ಇದೆ. ಈ ಮೂಲಕ ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಅರಣ್ಯ ಕೈಗಾರಿಕಾ ನಿಗಮದ ಅಧಿಕಾರಿ ಬಿ.ಸಿ ಶಾಂತಕುಮಾರ್ ಗೆ ಶಿಕ್ಷೆ ಫಿಕ್ಸ್ ಆದಂತೆ ಆಗಿದೆ.